ಬಂಟ್ವಾಳ: ದ.ಕ.ಜಿ.ಪ.ಹಿ.ಪ್ರಾ ಶಾಲೆ ಮಜಿ ವೀರಕಂಭ ಇಲ್ಲಿ ಏ. 05 2015-16 ನೇ ಸಾಲಿನ ಎರಡನೇ ಸಮುದಾಯದತ್ತ ಕಾರ್ಯಕ್ರಮವು ನೆರವೇರಿತು.
ಶಾಲೆಯು ಸಮುದಾಯಕ್ಕೆ ಹಿಡಿದ ಕೈಗನ್ನಡಿ. ಶಾಲೆಯ ಏಳಿಗೆಯು ಸಮುದಾಯದ ಏಳಿಗೆಯಿದ್ದಂತೆ. ಶಾಲೆಯ ಅಭಿವೃದ್ಧಿಗೆ ಶಿಕ್ಷಕರು ಪೋಷಕರ ಜೊತೆಗೆ ಸಮುದಾಯದ ಕೊಡುಗೆ ಹಾಗೆಯೇ ಸರಕಾರವು ಹಲವು ಅನುದಾನ ಯೋಜನೆಯ ಮೂಲಕ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುವುದು ಪ್ರತಿಯೊಬ್ಬನ ಕರ್ತವ್ಯವಾಗಿದೆ. ಹಾಗೆಯೇ ಶಾಲೆಯ ಭೌತಿಕ ಪರಿಸರದ ನಿರ್ಮಾಣಕ್ಕೆ ತಮ್ಮಿಂದ ಸಾಧ್ಯವಾದ ಸಹಾಯವನ್ನು ಅನುದಾನ ಮೂಲಕ ನೀಡುವುದಾಗಿ ತಮ್ಮ ಪ್ರಥಮ ಭೇಟಿಯನ್ನು ನೀಡಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಮಂಜುಳಾ ಮಾಧವ ಮಾವೆಯವರು ಭರವಸೆಯನ್ನಿತ್ತರು. ಹಾಗೂ ಪ್ರಸಕ್ತ ಸಾಲಿನಲ್ಲಿ ಸರಕಾರದಿಂದ ಒದಗಿಸಿದ ಒಂದನೇ ತರಗತಿಯ ವಿದ್ಯಾರ್ಥಿನಿಯರಿಗೆ ಹಾಜರಾತಿ ವಿದ್ಯಾರ್ಥಿ ವೇತನ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಉಚಿತ ಚೀಲವನ್ನು ವಿತರಣೆ ಮಾಡಿದರು
ನಿಕಟ ಪೂರ್ವ ತಾಲೂಕು ಪಂಚಾಯತ್ ಸದಸ್ಯರಾದ ಶ್ರೀಯುತ ಮಾಧವ ಮಾವೆಯವರು ಶಿಕ್ಷಣವು ಮಗುವಿನ ಹಕ್ಕು. ಯಾವ ಮಗುವು ಶಿಕ್ಷಣದಿಂದ ವಂಚಿತವಾಗಬಾರದು. ಶಿಕ್ಷಕ ಪೋಷಕ ಹಾಗೂ ಸರಕಾರವು ಒಂದಾಗಿ ಶ್ರಮಿಸಿದಾಗ ಮಾತ್ರ ಅದು ಗುರಿ ಮುಟ್ಟಲು ಸಾಧ್ಯವೆಂದು ತಿಳಿಸಿದರು. ಹಾಗೂ ಕಾಮಗಾರಿಯನ್ನು ಪೂರ್ಣಗೊಳಿಸಿ ಶಾಲೆಯ ಅಭಿವೃದ್ಧಿಗೆ ಸಹಕರಿಸುವುದಾಗಿ ತಿಳಿಸಿದರು. ಮತ್ತು 2016-17 ನೇ ಸಾಲಿನ ಉಚಿತ ಸಮವಸ್ತ್ರ ವನ್ನು ವಿತರಿಸಿದರು
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಶನ್ ನ ಜಿಲ್ಲಾ ಖಜಾಂಚಿ ಯಾದ ಶ್ರೀಯುತ ದಯಾನಂದ್ ಬಂಟ್ವಾಳ ಇವರು ಶಿಕ್ಷಣವು ಕೇವಲ ನಾಲ್ಕು ಗೋಡೆಗಳ ನಡುವೆ ದೊರಕುವುದಿಲ್ಲ. ಅದಕ್ಕಾಗಿ ಮಗುವಿನ ಕಲಿಕೆಯ ಜೊತೆ ಮಾಧ್ಯಮಗಳು ಪೋಷಕರು ಹಾಗೂ ಸಮುದಾಯವೂ ಮುಖ್ಯ ಪಾತ್ರ ವಹಿಸುತ್ತದೆ. ಒಳಿತು ಕೆಡುಕುಗಳ ಅರಿವು ಗುರುತಿಸಿ ಕೊಂಡಾಗ ಮಾತ್ರ ಮಗು ಉತ್ತಮ ಬೆಳವಣಿಗೆ ಹೊಂದಲು ಸಾಧ್ಯ. ಸದ್ರಿ ವರ್ಷದಂತೆ ಮುಂದಿನ ವರ್ಷವೂ ಲೇಖನ ಸಮಾಗ್ರಿಗಳನ್ನು ತಮ್ಮ ಸಂಘದ ಮೂಲಕ ಒದಗಿಸುವುದಲ್ಲದೇ ಶಾಲಾ ಶೈಕ್ಷಣಿಕ ವಿಚಾರದಲ್ಲಿ ತಮ್ಮ ಸಹಕಾರ ಎಂದಿಗೂ ಇದೆ ಎಂಬ ವಿಚಾರ ತಿಳಿಯ ಪಡಿಸಿದರು
ಶಾಲಾ ಶಿಕ್ಷಣವು ಮಗುವಿನ ಬದುಕಿಗೆ ಹತ್ತು ಹಲವು ದಾರಿಗಳನ್ನು ರೂಪಿಸುತ್ತದೆ. ಆಟೋಟ ಶಿಕ್ಷಣದ ಜೊತೆಗೆ ಕೃಷಿಯ ವಿಚಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಉತ್ತಮ ಪರಿಸರ ಹಾಗೂ ಉತ್ತಮ ಆರೋಗ್ಯ ಹೊಂದುವಲ್ಲಿ ಸಾವಯವ ಕೃಷಿಯನ್ನು ಬೆಳೆಸಿಕೊಂಡು ಗುರುತಿಸಲ್ಪಟ್ಟ ಶಾಲೆಯ ಬಗ್ಗೆ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ನ ಬಂಟ್ವಾಳ ತಾಲೂಕು ಘಟಕದ ಕಾರ್ಯದರ್ಶಿಯವರಾದ ಶ್ರೀಯುತ ಹರೀಶ್ ಕುಂದರ್ ರವರು ಅಭಿನಂದಿಸಿದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀಯುತ ಸಂಜೀವ ಮೂಲ್ಯರವರು ಶಾಲೆಯಲ್ಲಿ ವಿದ್ಯಾರ್ಥಿ ಗಳ ಕಲಿಕಾ ಗುಣಮಟ್ಟವನ್ನು ಹೆಚ್ಚಿಸಲು ನಿರಂತರ ಶ್ರಮಿಸಲಾಗುವುದು. ಹಾಗೂ ವಿದ್ಯಾರ್ಥಿಗಳ ಏಳಿಗೆಗಾಗಿ ಸಮುದಾಯವು ಶಾಲೆಯ ಜೊತೆ ಕೈಜೋಡಿಸಿ ನಿರಂತರವಾಗಿ ಶ್ರಮಿಸುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವೀರಕಂಭ ಗ್ರಾಮಪಂಚಾಯತ್ ಉಪಾಧ್ಯಕ್ಷರಾದ ಶ್ರೀಯುತ ನಿಶಾಂತ್ ರೈ ಸದಸ್ಯರಾದ ಶ್ರೀಯುತ ಜನಾರ್ಧನ ಪೂಜಾರಿ , ಶ್ರೀಮತಿ ಜಯಂತಿ ವೀರಕಂಭ ,ಶ್ರೀಮತಿ ಜಯಂತಿ ಗಣೇಶ್ ಕೋಡಿ, ತಾಲೂಕು ಪಂಚಾಯತ್ ಸದಸ್ಯರಾದ ಶ್ರೀಮತಿ ಗೀತಾ ಚಂದ್ರಶೇಖರ್ ಮಾತೃಶ್ರೀ ಗೆಳೆಯರ ಬಳಗದ ಅಧ್ಯಕ್ಷರಾದ ಶ್ರೀಯುತ ದಿನೇಶ್ ಎಸ್.ಡಿ.ಎಂ.ಸಿ ಸದಸ್ಯರು, ಪೋಷಕರು ಹಾಗೂ ಸಮುದಾಯ ದತ್ತ ಶಾಲಾ ಕಾರ್ಯಕ್ರಮದ ನೋಡಲ್ ಅಧಿಕಾರಿಯಾದ ಸ.ಪ್ರೌ ಶಾಲೆ ಗೋಳ್ತಮಜಲು ಇಲ್ಲಿನ ಸ,ಶಿ. ಶ್ರೀಮತಿ ಲಕ್ಷ್ಮೀ ಇವರು ಹಾಜರಿದ್ದರು.
ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಯನ್ನು ನಡೆಸಿ ವಿಜೇತರಿಗೆ ಬಹುಮಾನ ಹಂಚಲಾಯಿತು. ಬಳಿಕ ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ನೆರವೇರಿತು. ಶಾಲಾ ಮುಖ್ಯ ಶಿಕ್ಷಕ ಶ್ರೀಯುತ ನಾರಾಯಣ ಪೂಜಾರಿಯವರು ಸ್ವಾಗತಿಸಿದರು. ಸಹ ಶಿಕ್ಷಕಿ ಶ್ರೀಮತಿ ಸಿಸಿಲಿಯಾ ಬಹುಮಾನ ಪಟ್ಟಿಯನ್ನು ವಾಚಿಸಿದರು. ಸಹ ಶಿಕ್ಷಕಿಶ್ರೀಮತಿ ಶಕುಂತಲಾ ಇವರು ಧನ್ಯವಾದವನ್ನಿತ್ತರು. ಶ್ರೀಮತಿ ಗೀತಾ ಹಾಗೂ ಕುಮಾರಿ ಜ್ಯೋತಿ , ಶ್ರೀಯುತ ಚಿನ್ನ ಮೈರಾರವರು ಸಹಕರಿಸಿದರು. ಶ್ರೀಮತಿ ಸಂಗೀತಾ ಶರ್ಮ ಇವರು ಕಾರ್ಯಕ್ರಮ ನಿರ್ವಹಿಸಿದರು.
