ಬಂಟ್ವಾಳ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪುತ್ತೂರು ವಿಭಾಗ ದ ಬಿ.ಸಿ.ರೋಡ್ ನ ಆಧುನಿಕ ಮಾದರಿಯ ನೂತನ ಬಸ್ ನಿಲ್ದಾಣ ನಿರ್ಮಾಣದ ತ್ವರಿತ ಗತಿಯ ಕಾಮಗಾರಿಯನ್ನು ಅರಣ್ಯ ಪರಿಸರ ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ವೀಕ್ಷಿಸಿದರು.
ಸಚಿವರೊಂದಿಗೆ ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಬೂಡಾ ಅಧ್ಯಕ್ಷ ಪಿಯೂಸ್ ಎಲ್.ರೋಡ್ರಿಗಸ್, ಜಿಲ್ಲಾ ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ವಿಭಾಗದ ಚಂದ್ರಶೇಖರ ಎಸ್.ಆರ್ (ಡಿ.ಸಿ) , ದಿವಾಕರ ಯರಗೊಪ್ಪ (ಎ.ಇ.ಇ.), ಎಂ.ವೆಂಕಟೇಶ್ (ಡಿ.ಟಿ.ಓ), ಶರಲ್ (ಕಿರಿಯ ಇಂಜಿನಿಯರ್), ಗುತ್ತಿಗೆದಾರ ಪ್ರಭಾಕರ ಯೆಯ್ಯಾಡಿ, ಪುರಸಭಾ ಸದಸ್ಯರಾದ ಬಿ.ಮೋಹನ್, ಪ್ರವೀಣ್ ಬಿ., ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ತಾ.ಪಂ.ಸದಸ್ಯ ಅಬ್ಬಾಸ್ ಅಲಿ, ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಜನಾರ್ಧನ ಚೆಂಡ್ತಿಮಾರ್ , ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಲುಕ್ಮಾನ್, ಪ್ರಮುಖರಾದ ಸದಾನಂದ ಮಲ್ಲಿ, ಲೋಕನಾಥ ಶೆಟ್ಟಿ, ದಾಸಪ್ಪ ರೈ , ರಾಜೇಶ್ ನಾಯಕ್, ಸದಾನಂದ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.


