ಕೈಕಂಬ: ಒಡ್ಡೂರು ಪಿಜ್ಜೊಟ್ಟು ಕುಟುಂಬಸ್ಥರ ನಾಗಬನದಲ್ಲಿ ಎ. 3ರಂದು ಭಾನುವಾರ ನಾಗದರ್ಶನ ರಮಾನಂದ ಭಟ್ ಬೆಲ್ಲಾರ್ಪಾಡಿಯವರಿಂದ ನಾಗದರ್ಶನ ಸೇವೆ ನಡೆಸಿಕೊಟ್ಟರು.
ಗಜಂತೋಡಿ ಸುಬ್ರಾಯ ಭಟ್ ಇವರ ನೇತೃವದಲ್ಲಿ ಎ.2ರಂದು ಶನಿವಾರ ಸಂಜೆ 5.30ರಿಂದ ವಾಸ್ತು ಪೂಜೆ, ರಾಕ್ಷೊಘ್ನ ಹೋಮ,ವಾಸ್ತು ಪೂಜೆ, ದಿಕ್ಪಾಲಕ ಬಲಿ,ಅದಿವಾಸ. ನಾಗಶಿಲಾ ಪ್ರತಿಷ್ಟೆ ಪರಿವಾರ ದೈವಗಳ ಪ್ರತಿಷ್ಟೆ ಎ. 3ರಂದು ಭಾನುವಾರ ಬೆಳಗ್ಗೆ 6ಗಂಟೆಗೆ ಪವಮಾನ ಹೋಮ,ಗಣಹೋಮ,ಪ್ರತಿಷ್ಠಾ ಹೋಮ,ಕಲಶಾಧಿವಾಸ ಹೋಮ,ಆಶ್ಲೇಷಾ ಬಲಿ ನಡೆಸಿಕೊಟ್ಯಿಟರು . ಈಸಂದರ್ಭದಲ್ಲಿ ಸಂಗಬೆಟ್ಟು ಜಿ.ಪಂ.ಸದಸ್ಯ ತುಂಗಪ್ಪ ಬಂಗೇರ, ಪ್ರಕಾಶ್ ಅಂಚನ್, ತಾಚುಪೂಜಾರಿ, ಕರ್ಣೇಂದ್ರ ಪೂಜಾರಿ , ಮೋಹನ ಪೂಜಾರಿ, ಕುಶ ಕುಮಾರ್,ಅಶೋಕ್ ಮತ್ತು ಪಿಜ್ಜೊಟ್ಟು ಕೋಟ್ಯಾನ್ ಕುಟುಂಬಸ್ಥರು ಮತ್ತು ಊರಿನವರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು. ನಂತರ ಅನ್ನಸಂತರ್ಪಣೆ ಜರಗಿತು.












