ಮುಂಬಯಿ, ಮಾ.31: ಸಹಕಾರಿ ರಂಗದ ಆರ್ಥಿಕ ಸೇವೆಯಲ್ಲಿ ರಾಷ್ಟ್ರದಾದ್ಯಂತ ಪ್ರಸಿದ್ಧಿ ಪಡೆದ ತುಳು ಕನ್ನಡಿಗರ ಪ್ರತಿಷ್ಠಿತ ಹಣಕಾಸು ಸಂಸ್ಥೆ ದಿ.ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಇದೀಗ ಗ್ರಾಹಕರ ಹೆಚ್ಚುವರಿ ಮತ್ತು ಸುಲಭದಾಯಕ ಸೇವೆಗಾಗಿ ಮೊಬಾಯ್ಲ್ ಸೇವೆಯನ್ನು ಆಯ್ದು ಅಳವಡಿಸಿದ್ದು, ಅದಕ್ಕಾಗಿ ಮೊಬಾಯ್ಲ್ ಪೇಮೆಂಟ್ ಆ್ಯಪ್ ಚಿಲ್ಲರ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.Bharat Bank Chillr Launch

ಕಳೆದ ಸೋಮವಾರ ಗೋರೆಗಾಂ ಪೂರ್ವದಲ್ಲಿನ ಭಾರತ್ ಬ್ಯಾಂಕ್ನ ಕೇಂದ್ರ ಕಛೇರಿಯಲ್ಲಿ ಭಾರತ್ ಬ್ಯಾಂಕ್ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ, ಉಪ ಕಾರ್ಯಧ್ಯಕ್ಷೆ ನ್ಯಾ| ರೋಹಿಣಿ ಜೆ.ಸಾಲಿಯಾನ್, ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್ ಮೂಲ್ಕಿ ತಮ್ಮ ಗ್ರಾಹಕರಿಗೆ ಚಿಲ್ಲರ್ ಆ್ಯಪ್ ಸೇವೆಯನ್ನು ಸೇವಾರ್ಪಣೆಗೈದರು.

ಭಾರತ್ ಬ್ಯಾಂಕ್ನ ಗ್ರಾಹಕರು ಇನ್ನು ಈ ಚಿಲ್ಲರ್ ಆ್ಯಪ್ನ್ನು ತಮ್ಮ ಮೊಬಾಯ್ಲ್ನಲ್ಲಿ ಡೌನ್ಲೋಡ್ ಮಾಡಿ ಷರತ್ತುಗಳನುಸಾರ ಮೊಬಾಯ್ಲ್ ಮೂಲಕ ತಮ್ಮ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸುಲಭ, ಸರಳವಾಗಿ ನಡೆಸ ಬಹುದು. ಒಮ್ಮೆ ಗ್ರಾಹಕರು ತಮ್ಮ ಮೊಬಾಯ್ಲ್ನಲ್ಲಿ ಈ ಆ್ಯಪ್ ವ್ಯವಸ್ಥೆ ಅಳವಡಿಸಿ ಕೊಂಡಲ್ಲಿ ನೇರವಾಗಿ ಚಿಲ್ಲರ್ ಸೇವೆಯ ಮುಖೇನ ಹಣವನ್ನು ವರ್ಗಾವಣೆ ಮಾಡಬಹುದಾಗಿದೆ. ಈ ಆ್ಯಪ್ ಸುಲಭವಾಗಿ ಆಂಡ್ರಾಯ್ಡ್, ವಿಂಡೋಸ್ ಮತ್ತು ಐಒಎಸ್ ಆಪರೇಟಿಂಗ್ ಸಿಸ್ಟಂನಲ್ಲಿ ಪಡೆಯ ಬಹುದಾಗಿದ್ದು, ಗ್ರಾಹಕರಿಗೆ ವರವಾಗಿ ಪರಿಣಮಿಸಲಿದೆ ಎಂದು ಕಾರ್ಯಾಧ್ಯಕ್ಷ ಜಯ ಸುವರ್ಣ ತಿಳಿಸಿದರು.

ಆಧುನಿಕ ಯುಗದಲ್ಲಿ ಭರದಿಂದ ಮುನ್ನಡೆೆಯುವ ಹಣಕಾಸು ಉದ್ಯಮ ಮನವರಿಸಿ ಗ್ರಾಹಕರ ಇಚ್ಛೆಯನುಸಾರ ನಮ್ಮ ಬ್ಯಾಂಕ್ ಈ ಉಪಯುಕ್ತ ಸೇವೆಯನ್ನು ಆಯ್ಕೆ ನಡೆಸಿದೆ. ಬ್ಯಾಂಕ್ನ ಗ್ರಾಹಕರು ತಮ್ಮ ಖಾತೆಯಲ್ಲಿನ ಹಣಕಾಸು ಪರಿಶೀಲನೆ, ಹಣ ಕಳುಹಿಸಲು ಅಥವಾ ಪಡೆಯುವ ಹೊರತು ಇತರೇ ಸೌಲಭ್ಯಗಳಂತಹ ವಿಶೇಷ ರಿಯಾಯಿತಿಯೊಂದಿಗೆ ನಿಶ್ಚಿತ ವ್ಯವಹಾರಗಳನ್ನು, ಫ್ರೀಪೇಯ್ಡ್, ಮೊಬಾಯ್ಲ್ ರೀಚಾರ್ಜ್ , ಡಿಟಿಹೆಚ್ ಮತ್ತು ಡಾಟಾ ಕಾರ್ಡ್ , ಬಿಲ್ಲ್ ಪಾವತಿ ಇತ್ಯಾದಿ  ಅನೇಕಾನೇಕ ಸೌಲತ್ತುಗಳನ್ನು ಈ ಮೂಲಕ ಸದುಪಯೋಗ ಪಡಿಸಬಹುದಾಗಿದೆ. ಗ್ರಾಹಕರ ಭದ್ರತೆಯ ಸಮರ್ಥನೀಯ ಸೇವೆಯನ್ನು ಮನಗಂಡು ಈ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ ಎಂದು ಬ್ಯಾಂಕ್ನ ಆಡಳಿತ ನಿರ್ದೇಶಕ ಸಿ.ಆರ್ ಮೂಲ್ಕಿ ತಿಳಿಸಿದರು.

ಈ ಸಂದರ್ಭದಲ್ಲಿ ಬ್ಯಾಂಕ್ನ ನಿರ್ದೇಶಕರುಗಳಾದ ಎಂ.ಬಿ ಕುಕ್ಯಾನ್, ವಾಸುದೇವ ಆರ್.ಕೋಟ್ಯಾನ್, ಪುಷ್ಫಲತಾ ಎನ್.ಸಾಲ್ಯಾನ್, ಕೆ.ಎನ್ ಸುವರ್ಣ, ಜೆ.ಎ ಕೋಟ್ಯಾನ್, ಯು.ಎಸ್ ಪೂಜಾರಿ, ಭಾಸ್ಕರ್ ಎಂ.ಸಾಲ್ಯಾನ್, ನ್ಯಾ| ಎಸ್.ಬಿ ಅವಿೂನ್, ಚಂದ್ರಶೇಖರ ಎಸ್.ಪೂಜಾರಿ, ಹರೀಶ್ಚಂದ್ರ ಜಿ.ಮೂಲ್ಕಿ, ದಾಮೋದರ ಸಿ.ಕುಂದರ್, ಆರ್.ಡಿ ಪೂಜಾರಿ, ಕೆ.ಬಿ ಪೂಜಾರಿ, ಗಂಗಾಧರ್ ಜೆ.ಪೂಜಾರಿ,  ಸೂರ್ಯಕಾಂತ್ ಜೆ.ಸುವರ್ಣ, ಅಶೋಕ್ ಎಂ. ಕೋಟ್ಯಾನ್, ಅನ್ಬಲಗನ್ ಸಿ.ಹರಿಜನ, ಜ್ಯೋತಿ ಕೆ.ಸುವರ್ಣ, ಸಿ.ಟಿ ಸಾಲ್ಯಾನ್ ಹಾಗೂ ಮುಖ್ಯ ಪ್ರಧಾನ ಪ್ರಬಂಧಕ ಅನಿಲ್ಕುಮಾರ್ ಆರ್.ಅವಿೂನ್, ಮಹಾ ಪ್ರಂಬಧಕರುಗಳಾದ ಶೋಭಾ ದಯಾನಂದ್, ನಿತ್ಯಾನಂದ ಡಿ.ಕೋಟ್ಯಾನ್, ಉಪ ಮಹಾ ಪ್ರಂಬಧಕ ದಿನೇಶ್ ಬಿ.ಸಾಲ್ಯಾನ್, ಹಾಗೂ ಬ್ಯಾಂಕ್ನ ಅಭಿವೃದ್ಧಿ ಮುಖ್ಯಸ್ಥ ಮೋಹನ್ದಾಸ್ ಹೆಜ್ಮಾಡಿ (ಡಿಜಿಎಂ) ಉಪಸ್ಥಿತರಿದ್ದರು.

ಚಿತ್ರ ವರದಿ : ರೋನ್ಸ್ ಬಂಟ್ವಾಳ್

By suddi9

Leave a Reply

Your email address will not be published. Required fields are marked *