1.ದೇಶದಾದ್ಯಂತ ಪ.ಪೂ.ಬಾಪೂರವರ 425 ಆಶ್ರಮಗಳು
ಮಹತ್ವ: ಆಶ್ರಮದಿಂದಾಗಿ ಧರ್ಮಪ್ರಸಾರಕ್ಕಾಗಿ ಮತ್ತು ಸಾಧಕರ ಸಾಧನೆಗಾಗಿ ಪೂರಕ ವಾತಾವರಣ ಸಿಗುತ್ತದೆ ಮತ್ತು ಅವರು ತಮ್ಮ ಅಧ್ಯಾತ್ಮಿಕ ಉನ್ನತಿ ಮಾಡಿಕೊಳ್ಳಬಹುದು.
2.ಶಿಕ್ಷಣಕ್ಕಾಗಿ ೫೦ಗುರುಕುಲಗಳು
ಮಹತ್ವ: ವಿದ್ಯಾರ್ಥಿದೆಶೆಯಿಂದಲೇ ಮಕ್ಕಳಲ್ಲಿ ನೈತಿಕ ಮೌಲ್ಯಗಳ ಮತ್ತು ಧಾರ್ಮಿಕ ಆಚಾರಗಳ ಸಂಸ್ಕಾರವಾದರೆ ಅವರು ಭಾರತದ ಆದರ್ಶ ನಾಗರಿಕರಾಗಬಹುದು. ಇಂದು ಸಮಾಜದಲ್ಲಿ ಅನೈತಿಕತೆ ಹಬ್ಬಿದೆ. ವಿವಿಧ ಮಾಧ್ಯಮಗಳಿಂದ ವಿದ್ಯಾರ್ಥಿಗಳ ಮೇಲಾಗುವ ಕುಸಂಸ್ಕಾರಗಳಿಂದ ಅವರನ್ನು ದೂರವಿಡುವ ಕಾರ್ಯವನ್ನು ಪ.ಪೂ. ಆಸಾರಾಮಬಾಪೂರವರು ವಿವಿಧ ಗುರುಕುಲದ ಮಾಧ್ಯಮದಿಂದ ಮಾಡುತ್ತಿದ್ದಾರೆ.
3. ಉಟಣೆ ಇತ್ಯಾದಿ ಸಾಧಕರಿಗೆ ಉಪಯುಕ್ತ ಉತ್ಪಾದನೆಗಳು
ಮಹತ್ವ: ಸಾಧಕರು ತಮ್ಮ ಸಾಧನೆಗೆ ಉಪಯುಕ್ತವಾಗಿರುವ ಉತ್ಪಾದನೆಗಳನ್ನು ಬಳಸುತ್ತಾರೆ. ಅದೇ ಉದ್ದೇಶದಿಂದ ಸಂತರ ಸಂಸ್ಥೆಯ ಉತ್ಪಾದನೆಗಳಿಂದ ಸಾಧಕರಿಗೆ ಹೆಚ್ಚು ಲಾಭವಾಗುತ್ತದೆ. ಇದು ಸಾಧಕರಿಗಾಗಿ ಹೆಚ್ಚು ಮಹತ್ವದ್ದಾಗಿದೆ.
4.ಅಧ್ಯಾತ್ಮಪ್ರಸಾರಕ್ಕಾಗಿ ವಿವಿಧ ಭಾಷೆಗಳಲ್ಲಿ ಪ್ರಕಾಶಿಸಲ್ಪಡುವ
೭ಕೋಟಿಯಷ್ಟು ವಿತರಣೆ ಇರುವ ಋಷಿಪ್ರಸಾದ ನಿಯತಕಾಲಿಕೆ
ಮಹತ್ವ: ಹಿಂದೂ ಧರ್ಮವು ಯಾವುದೇ ವ್ಯಕ್ತಿಯಿಂದಲ್ಲ ಧರ್ಮಗ್ರಂಥದ ಆಧಾರದಲ್ಲಿ ನಿಂತಿದೆ. ಸಾಧಕರಿಗೆ ಈ ಗ್ರಂಥದಿಂದ ಮತ್ತು ಸಂತರ ಚರಿತ್ರೆಗಳಿಂದ ಸಾಧನೆ ಬಗ್ಗೆ ಮಾರ್ಗದರ್ಶನ ದೊರೆಯಲು, ಹಾಗೆಯೇ ಅವರ ಸಂದೇಹ ನಿವಾರಣೆಯಾಗಲು ಈ ನಿಯತಕಾಲಿಕೆಗಳನ್ನು ಪ್ರಕಟಿಸಲಾಗುತ್ತದೆ.
5.೧೭ಸಾವಿರ ಬಾಲಸಂಸ್ಕಾರ ಕೇಂದ್ರಗಳು
ಮಹತ್ವ: ಈ ದೇಶದಲ್ಲಿ ಪ್ರಜಾಪ್ರಭುತ್ವವಿದೆ; ಆದರೆ ರಾಜಕಾರಣಿಗಳು ಪ್ರಜಾಪ್ರಭುತ್ವದ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ರಾಜಕಾರಣಿಗಳು ನೀತಿಹೀನರಾಗಿ ದ್ದಾರೆ. ಇಂತಹ ರಾಜಕಾರಣಿಗಳು ಜನತೆಯ ಮೇಲೆ ಮತ್ತು ಸಣ್ಣ ಮಕ್ಕಳ ಮೇಲೆ ಹೇಗೆ ಸಂಸ್ಕಾರ ಮಾಡುವರು ? ಈ ಕಾರ್ಯವನ್ನು ಹಿಂದೂ ಸಂತರು ಮಾಡುತ್ತಿದ್ದಾರೆ. ಅದರಿಂದ ಸಮಾಜದಲ್ಲಿಯೂ ಕೆಲವು ಪ್ರಮಾಣದಲ್ಲಿ ನೈತಿಕತೆ ಉಳಿದಿರುವುದು ಕಾಣಿಸುತ್ತಿದೆ.
6.1ಸಾವಿರದ ೪೦೦ಸಮಿತಿಗಳ ಮಾಧ್ಯಮದಿಂದ ಪ್ರಸಾರ
ಮಹತ್ವ: ರಾಜಕಾರಣಿಗಳ ವಿಕಾಸ ಯೋಜನೆಗಳು ಹಳ್ಳಿಹಳ್ಳಿಗಳಿಗೆ ತಲುಪಲಿಲ್ಲ. ಆದರೆ ಸಂತರ ಮಾರ್ಗದರ್ಶನಕ್ಕನುಸಾರ ನಡೆದ ಧರ್ಮಪ್ರಸಾರದ ಕಾರ್ಯವು ಆಯೋಜನಾ ಬದ್ಧವಾಗಿ ಹಳ್ಳಿಹಳ್ಳಿಗಳಿಗೂ ತಲುಪುತ್ತಿದೆ. ಅದಕ್ಕೆ ಈ ಸಮಿತಿಗಳೇ ಮಾದರಿಯಾಗಿವೆ.
7. ಆಯುರ್ವೇದ ಔಷಧಿಗಳ ನಿರ್ಮಿತಿ
ಮಹತ್ವ: ಆಲೋಪತಿ ಔಷಧಿಗಳಿಂದಾಗುವ ದುಷ್ಪರಿಣಾಮ ಗಮನಕ್ಕೆ ಬಂದ ನಂತರ ದೇಶದಲ್ಲಷ್ಟೇ ಅಲ್ಲದೆ ವಿದೇಶದ ಜನರೂ ದುಷ್ಪರಿಣಾಮವಾಗದ ಇಂತಹ ಆಯುರ್ವೇದ ಔಷಧಿಗಳೆಡೆಗೆ ವಾಲುತ್ತಿದ್ದಾರೆ. ಆಯುರ್ವೇದವು ಹಿಂದೂ ಧರ್ಮದ ಪಂಚಮವೇದ ಎಂದು ಹೇಳಲಾಗಿದೆ. ಅದರ ಪುನರುಜ್ಜೀವನವನ್ನು ಸಂತರಲ್ಲದೆ ಬೇರೆ ಯಾರು ಮಾಡುವರು? ಇಲ್ಲದಿದ್ದರೂ ಸರಕಾರವು ಜಾತ್ಯತೀತ ಹೆಸರಿನಲ್ಲಿ ಆಯುರ್ವೇದವನ್ನು ದುರ್ಲಕ್ಷಿಸುತ್ತಿದೆ.

ಹಿಂದೆ ಆರಕ್ಷಕರು ಯೋಗಋಷಿ ರಾಮದೇವಬಾಬಾರವರ ಭಕ್ತರನ್ನು ಅಮಾನವೀಯವಾಗಿ ಥಳಿಸಿದರು! ಈಗ ಪ.ಪೂ. ಆಸಾರಾಮಬಾಪೂರವರ ಭಕ್ತರನ್ನು ಆರಕ್ಷಕರು ಥಳಿಸಿದರು! ಇದು ಭಾರತದಲ್ಲಿ ಅಸುರರ ರಾಜ್ಯವಿರುವುದರ ದ್ಯೋತಕವಾಗಿದೆ! ಇದನ್ನು ನಾಶ ಮಾಡಲು ಹಿಂದೂ ರಾಷ್ಟ್ರ ಸ್ಥಾಪಿಸೋಣ!
15ವರ್ಷದ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ಶೋಷಣೆ ಮಾಡಿದ ಸುಳ್ಳು ಪ್ರಕರಣದಲ್ಲಿ ಪ.ಪೂ.ಬಾಪೂರವರನ್ನು ಬಂಧಿಸಲಾಯಿತು. ಅವರನ್ನು ರಾಜಸ್ಥಾನದ ರೆsಧಪುರದ ಮಧ್ಯವರ್ತಿ ಕಾರಾಗೃಹಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಪ.ಪೂ. ಬಾಪೂರವರ ಭಕ್ತರು ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದರು. ಅವರು ಅಲ್ಲಿ ರಸ್ತೆಯ ಮೇಲೆ ಕುಳಿತುಕೊಂಡು ಶಾಂತವಾಗಿ ಪ್ರತಿಭಟನೆ ಮಾಡುತ್ತಿದ್ದರು. ಹೀಗಿರುವಾಗ ಆರಕ್ಷಕರು ಅವರ ಮೇಲೆ ನಿರ್ದಯವಾಗಿ ಲಾಠಿ ಪ್ರಹಾರ ಮಾಡಲಾರಂಭಿಸಿದರು. ಈ ಭಕ್ತರಲ್ಲಿ ಮಹಿಳೆಯರು ಕೂಡ ಇದ್ದರು. ಅವರ ಮೇಲೆಯೂ ಲಾಠಿ ಪ್ರಹಾರ ಮಾಡಿದರು. ಇದರಿಂದ ಭಕ್ತರು ಚೆಲ್ಲಾಪಿಲ್ಲಿಯಾಗಿ ಓಡಿದರು. ಅನಂತರ ಆರಕ್ಷರು ಅವರನ್ನೆಲ್ಲ ಅಟ್ಟಾಡಿಸಿಕೊಂಡು ಥಳಿಸತೊಡಗಿದರು.
(ಕೃಪೆ ಕನ್ನಡ ಸನಾತನ ಪ್ರಭಾತ ಬ್ಲಾಗ್)
