ಅರ್ಕುಳ ಜಗದ್ಘುರು ಬ್ರಹ್ಮಶ್ರೀ ನಾರಾಯಣ ಗುರುವರ್ಯರ ಅಮೃತ ಶಿಲಾ ಮೂರ್ತಿಯ ಪ್ರತಿಷ್ಠಾಪನೆ ಸಾನಿಧ್ಯ ಕಲಶಾಭಿಷೇಕದ ಅಮಂತ್ರಣ ಪತ್ರಿಕೆಯ ಬಿಡುಗಡೆ
ಫರಂಗಿಪೇಟೆ: ಅರ್ಕುಳ ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘ(ರಿ) ಮತ್ತು ಮಹಿಳಾ ಸಂಘ ಇದರ ಗುರುಮಂದಿರ ಉದ್ಘಾಟನೆ ಮತ್ತು ಜಗದ್ಘುರು ಬ್ರಹ್ಮಶ್ರೀ ನಾರಾಯಣ ಗುರುವರ್ಯರ ಪ್ರತಿಷ್ಠಾ ಮಹೋತ್ಸವದ ಅಮಂತ್ರಣ ಪತ್ರಿಕೆಯ ಬಿಡುಗಡೆಯು ನ.೨ ರಂದು ಶನಿವಾರ ಅಕುಳದ ಬಂಗ್ಲೆ ಸುಜಾತ ನಿವಾಸದಲ್ಲಿ ಬಿಡುಗಡೆ ಗೊಂಡಿತು.

ಪಚ್ಚಿನಡ್ಕ ಶುಭ ಸಮೂಹ ಸಂಸ್ಥೆಗಳ ಮಾಲಕ ಭುವನೇಶ್ ಪಚ್ಚಿನಡ್ಕ ಬಿಡುಗಡೆಗೊಳಿಸಿದರು.ಈ ಸಂದರ್ಭದಲ್ಲಿ ನಾಟಿ ವೈದ್ಯ ವಾಸ್ತು ಶಿಲ್ಪಿ ಈಶ್ವರ ಕಲಾಯಿ ಉಪಸ್ಥಿತರಿದ್ದರು.

ಡಿಸೆಂಬರ್.೮ ರಂದು ಬಾನುವಾರ ೧೦.೨೨ ಕ್ಕೆ ಮಕರ ಲಗ್ನ ಸುಮುಹೂರ್ತದಲ್ಲಿ ಜಗದ್ಘುರು ಬ್ರಹ್ಮಶ್ರೀ ನಾರಾಯಣ ಗುರುವರ್ಯರ ಅಮೃತ ಶಿಲಾ ಮೂರ್ತಿಯ ಪ್ರತಿಷ್ಠಾಪನೆ ಸಾನಿಧ್ಯ ಕಲಶಾಭಿಷೇಕವು ಶ್ರೀ ಕೇಶವ ಶಾಂತಿ ನಾಟಿ ನರಿಕೊಂಬು ಇವರ ಪೌರೋಹಿತ್ಯದಲ್ಲಿ ನೆರವೇರಲಿದೆ.

ಇದರ ಅಮಂತ್ರಣ ಪತ್ರಿಕೆಯ ಬಿಡುಗಡೆಯು ಬಿಲ್ಲವ ಸಂಘ ಅರ್ಕುಳ ಮೇರಮಜಲು ಇದರ ಅಧ್ಯಕ್ಷ ಸಂತೋಷ್ ತುಪ್ಪೆಕಲ್, ಉದಯ ಪೂಜಾರಿ ,ಬಿಲ್ಲವ ಸಂಘ ಅರ್ಕುಳ ಮೇರಮಜಲು ಇದರ ಮಹಿಳಾ ಅಧ್ಯಕ್ಷೆ ಯೋಗಿತಾ ಉಮೇಶ್,ಗೌರವಾಧ್ಯಕ್ಷ ಜನಾರ್ಧನ ಪೂಜಾರಿ ಬಡ್ಡೂರು, ಮಹಿಳಾ ಸಂಘದ ಗೌರವಾಧ್ಯಕ್ಷೆ ಸುಜಾತ ವಿಜಯ ಕುಮಾರ್, ಪ್ರ.ಕಾರ್ಯದರ್ಶಿಗಳಾದ ಮನೋಜು ತುಪ್ಪೆಕಲ್ ಹರೀಶ್‌ನಾಲದೆ, ಕಾರ್ಯದರ್ಶಿ ಗಾಯತ್ರಿ ಕಿಶೋರ್,ಉಪಾಧ್ಯಕ್ಷ ನಾರಾಯಣ ಪುಜಾರಿ ಕೊಪ್ಪಳ, ಉಪಾಧ್ಯಕ್ಷೆ ಸುಚಿತ್ರಾಪದ್ಮಾನಾಭ ಕುಚ್ಚೂರು ,ಕೋಶಾಧಿಕಾರಿಗಳಾದ ಗಣೇಶ್ ಮನರಾಡಿ, ಕಿರಣ್ ಕುಮಾರ್ ಅರ್ಕುಳಬೈಲ್ , ಕಾರ್ಯದರ್ಶಿಗಳಾದ ಕಿರಣ್ ಕೊಪ್ಪಳ , ದಿನೇಶ್ ಪಕ್ಕಲ್ ಪಾದೆ, ರಾಜೇಶ್ ಅರ್ಕುಳಬೈಲ್ , ಸುಜಾತಾ ಬಂಗ್ಲೆ ಹಾಗೂ ಬಿಲ್ಲವ ಸಂಘದ ಸದಸ್ಯರು ಉಪಸ್ಥಿತರಿದ್ದರು.
