ಮೂಡುಬಿದಿರೆ ಭಟ್ಟಾರಕ ಶ್ರೀಗಳಿಂದ ಜೈನ್ ಡಿಜಿಟಲ್ ಈ-ಲೈಬ್ರರಿ ಲೋಕಾರ್ಪಣೆ
ಮೂಡುಬಿದಿರೆ: ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರು
ಜೈನ್ ಡಿಜಿಟಲ್ ಈ-ಲೈಬ್ರರಿ ಅನ್ನು ಅನ್‍ಲೈನ್ ಮುಖಾಂತರ ಲೋಕಾರ್ಪಣೆಗೊಳಿಸಿದರು.
ಆಧುನಿಕ ಯುಗದಲ್ಲೂ ಕೂಡ ಜೈನ ಧರ್ಮದ ಶಾಸ್ತ್ರ ಗ್ರಂಥಗಳು ಆಧುನಿಕತೆಯ ರೂಪ ಪಡೆದು ದೇಶ ವಿದೇಶದ ಎಲ್ಲಾ ಜನರಿಗೆ ತಲುಪುವಂತೆ ಆಗಲಿ. ಈ ಮೂಲಕ ಎಲ್ಲರೂ ಆತ್ಮಕಲ್ಯಾಣ ಮಾಡಿಕೊಂಡು ಪಾವನರಾಗಲಿ ಎಂದು ಭಟ್ಟಾರಕಶ್ರೀ ಆಶೀರ್ವದಿಸಿದರು.
ಮೈಸೂರಿನ ಡಾ.ತೇಜಸ್ವಿನಿ, ಸುಷ್ಮಾ ಗಣೇ, ಜೈನ್ ಮಿಲನ್ ವಲಯ 8ರ ಅಧ್ಯಕ್ಷ ಪುಷ್ಪರಾಜ್ ಜೈನ್ ಸಹಿತ ಪ್ರಮುಖರು ಅನ್‍ಲೈನ್ ಮೂಲಕ ಭಾಗವಹಿಸಿದರು.
ಜೈನ್ ಡಿಜಿಟಲ್ ಈ-ಲೈಬ್ರರಿ ಪ್ರವರ್ತಕ ಸ್ವಸ್ತಿಕ್ ದೇವರಾಜ್ ಅವರಿಗೆ ಜಿನಧರ್ಮ ಪ್ರಭಾವಕ ಎಂಬ ಬಿರುದನ್ನಿತ್ತು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಸಂಯೋಜಕ ನಿರಂಜನ್ ಜೈನ್ ಕುದ್ಯಾಡಿ ಕಾರ್ಯಕ್ರಮ ನಿರೂಪಿಸಿದರು.
ಮಹಾವೀರ್ ಪ್ರಸಾದ್ ಹೊರನಾಡು ಪ್ರಶಸ್ತಿ ಪತ್ರ ವಾಚಿಸಿದರು. ಮಿತ್ರಸೇನ್ ಜೈನ್ ಅಳದಂಗಡಿ ಶಾಂತಿಮಂತ್ರ ಪಠಿಸಿದರು.