ಬಂಟ್ವಾಳ: ರಿಕ್ಷಾ ಡ್ರೈವರ್ಗಳು ಪ್ಯಾ ಸೆಂಜರ್ ಗಳೊಂದಿಗೆ ಉತ್ತಮ ಬಾಂದವ್ಯಗಳನ್ನು ಇಟ್ಟುಕೊಂಡು ಉತ್ತಮ ನಡತೆಯಿಂದಾಗ ಸಮಾಜದಲ್ಲಿ ಗೌರವದ ಬದುಕು ನಡೆಸಬಹುದು ಎಂದು ಬಿ.ಯಂ.ಎಸ್.ನ ಜಿಲ್ಲಾಧ್ಯಕ್ಷ ವಿಶ್ವನಾಥ ಶೆಟ್ಟಿ ಹೇಳಿದರು. ಅವರು ಬಿಸಿರೋಡ್ ಲಯನ್ಸ್ ಸೇವಾ ಮಂದಿರದಲ್ಲಿ ಅಟೋ ರಿಕ್ಷಾ ಚಾಲಕ ಮಾಲಕರ ಸಂಘದ 26ನೇ ವಾರ್ಷಿಕ ಮಹಾ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

1 (3)
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುರಸಭೆಯ ಸದಸ್ಯ, ಅಟೋ ರಿಕ್ಷಾ ಚಾಲಕ ಮಾಲಕರ ಸಂಘದ ಗೌರವಾಧ್ಯಕ್ಷ ಎ ಗೋವಿಂದ ಪ್ರಭು, ಸಂಗದ ಕಾನೂನು ಸಲಹೆಗಾರ ಪಿ.ಜಯರಾಮ ರೈ , ನಗರ ಠಾಣೆಯ ಎ.ಎಸ್.ಐ. ಸೇಶಮ್ಮ ಮತ್ತು ಸಂಘದ ಅಧ್ಯಕ್ಷ ಸದಾನಂದ ಉಪಸ್ಥಿತರಿದ್ದರು. ಇದೇ ಸಂದರ್ಭ ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ವಾಹನ ಚಾಲಕರ ಅಪಘಾತ ಪರಿಹಾರ ಯೋಜನೆ ಕಾರ್ಡ್  ವಿತರಿಸಲಾಯಿತು. ಕಾರ್ಯದರ್ಶಿ ವಸಂತ್ ಕುಮಾರ್ ಸ್ವಾಗತಿಸಿ, ವಿಶ್ವನಾಥ ಗೌಡ ವಂದಿಸಿದರು

By suddi9

Leave a Reply

Your email address will not be published. Required fields are marked *