ಬಜಪೆ: ಕಿನ್ನಿಗೋಳಿ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಏಳನೇ ತರಗತಿ ವಿದ್ಯಾರ್ಥಿ ಆಗ್ನೇಯ ಭಟ್ ಅವರು ಧರ್ಮಸ್ಥಳ ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ಧರ್ಮಸ್ಥಳದ ಮಹೋತ್ಸವ ಸಭಾಂಗಣದಲ್ಲಿ ಇತ್ತೀಚೆಗೆ ಜರಗಿದ ಜಿಲ್ಲಾ ಮಟ್ಟದ ಸಂಸ್ಕೃತ ಶ್ಲೋಕ ಹಾಗೂ ಮಂಕುತಿಮ್ಮನ ಕಗ್ಗ ಕಂಠಪಾಠ ಸ್ಪರ್ದೆಯಲ್ಲಿ ದ್ವಿತೀಯ ಸ್ಥಾನದ ಪ್ರಶಸ್ತಿ ಪಡೆದಿರುತ್ತಾರೆ.

ಧರ್ಮಸ್ಥಳದ ಧರ್ಮಾಕಾರಿ ಡಾ|ಡಿ.ವಿರೇಂದ್ರ ಹೆಗ್ಗಡೆ ಅವರು ಪ್ರಶಸ್ತಿ ವಿತರಿಸಿ ಅಭಿನಂದಿಸಿದರು. ಪ್ರಸಿದ್ಧ ಸಾಹಿತಿ ಸಂಪತ್ತೂರು ವಿಶ್ವನಾಥ್, ದ.ಕಜಿಲ್ಲಾ ಕ.ಸಾ.ಪ, ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರು ಮುಂತಾದವರು ಉಪಸ್ಥಿತರಿದ್ಧರು
ಮುಚ್ಚೂರು ಶ್ರೀನಿವಾಸ ಭಟ್ ಪ್ರತಿಮಾ ದಂಪತಿಯ ಪುತ್ರ ಆಗ್ನೇಯ ಕಟೀಲು ಶ್ರೀ ದುರ್ಗಾ ಮಕ್ಕಳ ಯಕ್ಷಗಾನ ಮೇಳದ ವಿದ್ಯಾರ್ಥಿ ಕಲಾವಿದ ಕೂಡ ಹೌದು.
