ಬಂಟ್ವಾಳ : ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಶಿಯೇಶನ್ ದ.ಕ.ಉಡುಪಿ ಜಿಲ್ಲೆ ಬಂಟ್ವಾಳ ವಲಯ ಮತ್ತು ಶ್ರೀ ಸದ್ಗುರು ನಿತ್ಯಾನಂದ ಗೋವಿಂದ ಸ್ವಾಮಿ ಸೇವಾ ಟ್ರಸ್ಟ್ ನಿತ್ಯಾನಂದ ನಗರ ಬೈಪಾಸ್ ಬಂಟ್ವಾಳ ಇದರ ಜಂಟಿ ಆಶ್ರಯದಲ್ಲಿ ಅಕ್ಯೂಪ್ರೆಶರ್ ಚಿಕಿತ್ಸಾ ಶಿಬಿರವು ದಿನಾಂಕ ಮಾ.19ನೇ ಶನಿವಾರದಿಂದ ಮಾ25 ಶುಕ್ರವಾರದವರೆಗೆ ಬೆಳಗ್ಗೆ ಗಂಟೆ 8.00ರಿಂದ ಮದ್ಯಾಹ್ನ 12.00ರವರೆಗೆ ಮತ್ತು ಸಂಜೆ ಗಂಟೆ 4.00ರಿಂದ 7.00ರ ವರೆಗೆ ಶ್ರೀ ನಿತ್ಯಾನಂದ ಗೋವಿಂದ ಸ್ವಾಮಿ ಸಭಾ ಭವನ ನಿತ್ಯಾನಂದ ನಗರ ಬೈಪಾಸ್ ಬಂಟ್ವಾಳ ದಲ್ಲಿ ಡಾ/ರಾಮ್ ಮನೋಹರ್ ಲೋಹಿಯಾ ಆರೋಗ್ಯ ಜೀವನ್ ಸಂಸ್ಥಾನ , ಅಕ್ಯೂಪ್ರಶರ್ ಟ್ರೈನಿಂಗ್ , ಟ್ರೀಟ್ಮೆಂಟ್ ಮತ್ತು ರಿಸರ್ಚ್ ಸೆಂಟರ್ ರಾಜಸ್ಥಾನ ಈ ಸಂಸ್ಥೆಯ ನುರಿತ ತಜ್ಞ ಡಾ.ಥಾನ್ ರಾಜಾ ಚೌಧರಿ ಇವರಿಂದ ಚಿಕಿತ್ಸೆ ನೀಡಲಾಗುವುದು ಎಂದು ಸಂಘದ ಪ್ರಕಟಣೆ ತಿಳಿಸಿದೆ.
