ಬಂಟ್ವಾಳ : ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ಕಾಲಾವಧಿ ಬ್ರಹ್ಮರಥೋತ್ಸವ ಸಂದರ್ಭದಲ್ಲಿ ಮಾ.11ರಂದು ಗರುಡೋತ್ಸವ ,ಮಾ..12ರಂದು ಹನುಮಂತೋತ್ಸವ , ಮಾ.13ರಂದು ಚಂದ್ರಮಂಡಲೋತ್ಸವ , ಮಾ.14ರಂದು ಸಣ್ಣ ರಥೊತ್ಸವ ಸೋಮವಾರ ಜಲಕ್ರೀಡೋತ್ಸವ ದಂದು ರಾತ್ರಿ ಗಂಟೆ 8.30ರಿಂದ 11.30ರ ವರೆಗೆ ನೇತ್ರಾವತಿ ನದಿ ತೀರದಲ್ಲಿ ನಿರ್ಮಿಸಲಾದ ಶ್ರೀ ವಟಪುರ ಸಾಂಸ್ಕ್ರತಿಕ ವೇದಿಕೆಯಲ್ಲಿ ರಾಜ್ಯದ ಪ್ರಖ್ಯಾತ ಕಲಾವಿದರಿಂದ ನಾದತರಂಗ ಭಜನಾ ರಸಮಂಜರಿ ಕಾರ್ಯಕ್ರಮ ಜರಗಲಿರುವುದು.
ಮಾ.15ರಂದು ಬ್ರಹ್ಮರಥೋತ್ಸವ , ಮಾ.16 ನೇ ಅವಭೃತೋತ್ಸವದಂದು ಸಂಜೆ ಗಂಟೆ 7.00ರಿಂದ 10.00ರವರೆಗೆ ವಸಂತ ವೇದಿಕೆಯಲ್ಲಿ ಗೀತಾಮಂದಿರ ಮಣಿಪಾಲ ಮತ್ತು ದುಗಾಂಬ ಭಜನಾ ಮಂಡಳಿ ಮಣಿಪಾಲ ಇವರಿಂದ “ ಅಮೃತಾಚೆ ಗೋಡಿ” ಭಜನಾ ಕಾರ್ಯಕ್ರಮ ಜರಗಲಿರುವುದು ಎಂದು ದೇವಳದ ಪ್ರಕಟಣೆ ತಿಳಿಸಿದೆ.

By Suddi9

Leave a Reply

Your email address will not be published. Required fields are marked *