ಮುಂಬಯಿ: ಲೋಕ ಕಲ್ಯಾಣ ಹಾಗೂ ಸರ್ವತ್ರ ಸುಭೀಕ್ಷಾರ್ಥವಾಗಿ ಧಾರ್ಮಿಕ ಪರಂಪರೆಯಂತೆ ಪೂಜಾ ಉತ್ಸವಗಳಿಂದ ಒಳಗೂಡಿದ ಕರ್ನಾಟಕ ರಾಜ್ಯದ ಉತ್ತರಕನ್ನಡ ಜಿಲ್ಲೆಯ ಶಿರಶಿ ಅಲ್ಲಿನ ಶ್ರೀ ಮಾರಿಕಾಂಬೆ ದೇವಸ್ಥಾನದ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆಯು ಶ್ರೀ ಶಾಲಿವಾಹನ ಗತಶಕೆ 1937ನೇ ಮನ್ಮಥ ನಾಮ ಸಂವತ್ಸರದ ಫಾಲ್ಗುಣ ಶುದ್ಧ ಚತುರ್ದಶಿ ಮಂಗಳವಾರ ದಿನಾಂಕ ಇದೇ ಮಾ.22 ರಿಂದ 30ರ ವರೆಗೆ ಜರುಗಲಿದೆ. ಕರುಣಿಸು ಕರುಣಾಳು ಶ್ರೀಮಾರಿಕಾಂಬೆಯ ಮಾತೆಯ ಕೃಪೆಯನ್ನು ಕೋರುತ್ತಾ ಜಾತ್ರೆಯ ಕಾರ್ಯಕ್ರಮಗಳು ಈ ಬಾರಿ ಫಾಲ್ಗುಣ ಶುದ್ಧ ಚತುರ್ದಶಿ ಮಾ.22ನೇ ಮಂಗಳವಾರ ಸರ್ವಾಲಂಕಾರಭೂಷಿತೆ ಶ್ರೀ
ಮಾರಿಕಾಂಬಾ ದೇವಿಯ ಜಾತ್ರಾ ಕಲ್ಯಾಣ ಪ್ರತಿಷ್ಠೆ ಮಧ್ಯೆರಾತ್ರಿ 12.55 ರಿಂದ ಸಭಾಮಂಟಪದ ರಂಗಮಂಟಪದಲ್ಲಿ ಮತ್ತು ಈ ಬಗ್ಗೆ ನಡೆಯುವ ರಾಜೋಪಚಾರಾದಿ ವಿನಿಯೋಗಗಳು ರಾತ್ರಿ 1.00 ಗಂಟೆ ನಂತರ
ನಂತರನಡೆಯಲಿದೆ. ಫಾಲ್ಗುಣ ಶುದ್ಧ ಹುಣ್ಣಿಮೆ ಮಾ.23ನೇ ಬುಧವಾರಶ್ರೀ ದೇವಿಯ ರಥಾರೋಹಣ ಮೆರವಣಿಗೆ ಬೆಳಿಗ್ಗೆ 7.55 ರಿಂದ ಪ್ರಾರಂಭವಾಗಿ ಮಧ್ಯಾಹ್ನ 12.16ರ ಒಳಗೆ ಬಿಡ್ಕಿಬೈಲಿನ ಜಾತ್ರಾ ಸ್ಥಳದ ಪೀಠದಲ್ಲಿ ಸ್ಥಾಪನೆನಡೆಸಲಾಗುವುದು.
ಫಾಲ್ಗುಣ ಕೃಷ್ಣಪ್ರತಿಪದೆ ಮಾ.24ನೇ ಗುರುವಾರ ಹಣ್ಣು-ಕಾಯಿ, ಕಾಣಿಕೆ, ಹರಕೆ, ತುಲಾಭಾರ ವಗೈರೆ ಸೇವೆಗಳು ಬೆಳಿಗ್ಗೆ 6.00 ರಿಂದ ರಾತ್ರಿ 10.00 ಘಂಟೆಯವರೆಗೆ ಮರ್ಕಿ ದುರ್ಗಿ, ದೇವಸ್ಥಾನದಲ್ಲಿ ಬೇವಿನ ಉಡಿಗ ಸೇವೆ, ಮಾ.29ರ ನಡೆಯುವುದು. ಫಾಲ್ಗುಣ ಕೃಷ್ಣ ಷಷ್ಠಿಮಾ.30 ಬುಧವಾರಜಾತ್ರೆ ಮುಕ್ತಾಯ ಗೊಳ್ಳುವುದು. ಜಾತ್ರೆಯ ಚಪ್ಪರದಲ್ಲಿ ಪ್ರಥಮ ಚಿಕಿತ್ಸೆಯ ವ್ಯವಸ್ಥೆ ಹಾಗೂ ಮಧ್ಯಾಹ್ನ ಅನ್ನಪ್ರಸಾದ ವ್ಯವಸ್ಥೆ, ದೇವಸ್ಥಾನದ ಹಿಂಜಾಗದ ಮಾರಿಗುಡಿ ಶಾಲೆಯ ಆವಾರಣದಲ್ಲಿ ದಿನಾಂಕ 23-3-2016 ರಿಂದ 30-3-2016 ರವರೆಗೆ ಮಾಡಲಾಗಿದೆ. ಸುದ್ಧಿ ಮತ್ತು ಕಾರ್ಯಕ್ರಮಗಳನ್ನು ಬಿತ್ತರಿಸುವ ವ್ಯವಸ್ಥೆ ಇರುತ್ತದೆ. ಆ ಪ್ರಯುಕ್ತ ಸಕಲ ಭಕ್ತರು ಜಾತ್ರೆಗೆ ಆಗಮಿಸಿ ಉತ್ಸವದಲ್ಲಿ ಪಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಯಾಗಿಯೂ ಸಾಂಗವಾಗಿಯೂ ನೆರವೇರುವಂತೆ ಸಹಕರಿಸಿ ಸರ್ವಾಭಿಷ್ಟಪ್ರದಾಯಕಳಾದ ಶ್ರೀ ಮಾರಿಕಾಂಬಾದೇವಿಯ ಕೃಪಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಎಂದು ದೇವಸ್ಥಾನದವಕ್ತಾರರು ತಿಳಿಸಿದ್ದಾರೆ.
