ಮುಂಬಯಿ: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಾಂಸ್ಕೃತಿಕ ಉಪ ಸಮಿತಿ, ಅಸೋಸಿಯೇಶನ್ನ ಸಂಚಾಲಕತ್ವದ ಶ್ರೀ ಗುರು ನಾರಾಯಣ ಯಕ್ಷಗಾನ ಮಂಡಳಿ ವಾರ್ಷಿಕವಾಗಿ ನೆರವೇರಿಸುತ್ತಿರುವ ಸಾರ್ವಜನಿಕ ಓಂ-ಶನಿ-ಓಂ ಶ್ರೀ ಶನೀಶ್ವರ ಗ್ರಂಥ ಪಾರಾಯಣ ಕಾರ್ಯಕ್ರಮ ಇಂದಿಲ್ಲಿ ಶನಿವಾರ ಅಪರಾಹ್ನ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದಲ್ಲಿ ವಿಜೃಂಭನೆಯಿಂಂದ ನೆರವೇರಿಸಿತು. ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷಜಯ ಸಿ.ಸುವರ್ಣ ಅಸೋಸಿಯೇಶನ್ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಮಾರ್ಗದರ್ಶನದಲ್ಲಿ ನಡೆಸಲ್ಪಟ್ಟ ಪಾರಾಯಣ ಕಾರ್ಯಕ್ರಮಕ್ಕೆ ಅಸೋಸಿಯೇಶನ್ನ ಉಪಾಧ್ಯಕ್ಷಭಾಸ್ಕರ ವಿ.ಬಂಗೇರ ಮತ್ತು ವೇದಾವತಿ ಭಾಸ್ಕರ್ ಹಾಗೂ ಕಲ್ವಾಸ್ಥಳೀಯ ಸಮಿತಿ ಕಾರ್ಯಾಧ್ಯಕ್ಷ ಹಾಗೂ ಅಸೋಸಿಯೇಶನ್ನ ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ದಯಾನಂದ ಆರ್.ಪೂಜಾರಿ ಮತ್ತು ವೀಣಾ ದಯಾನಂದ್ ದಂಪತಿ ಕಲಶವನ್ನು ಪ್ರತಿಷ್ಠಾಪನೆಗೈದು ಮತ್ತು ಉದ್ಯಮಿ ವಾಮನ ಪೂಜಾರಿ ದೀಪ ಬೆಳಗಿಸಿ ಚಾಲನೆಯನ್ನಿತ್ತರು.
ಹರೀಶ್ ಶಾಂತಿ ಸಾಮೂಹಿಕ ಶನಿಪೂಜೆ ನೆರವೇರಿಸಿ ಪ್ರಸಾದ ವಿತರಿಸಿ ಅನುಗ್ರಹಿಸಿದರು. ಶ್ರೀ ಗುರು ನಾರಾಯಣ ಯಕ್ಷಗಾನ ಮಂಡಳಿಯ ಕಲಾವಿದರು ಶ್ರೀ ಶನೀಶ್ವರ ಗ್ರಂಥ ಪಾರಾಯಣ ಮತ್ತು ಶ್ರೀ ಶನೀಶ್ವರ ಮಹಾಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಅಸೋಸಿಯೇಶನ್ನ ಗೌ| ಪ್ರ| ಕಾರ್ಯದರ್ಶಿ ಧರ್ಮಪಾಲ ಜಿ.ಅಂಚನ್, ಗೌ| ಪ್ರ| ಕೋಶಾಧಿಕಾರಿ ಮಹೇಶ್ ಸಿ.ಕಾರ್ಕಳ, ಭಾರತ್ ಬ್ಯಾಂಕ್ನ ನಿರ್ದೇಶಕ ರುಗಳಾದ ಚಂದ್ರಶೇಖರ ಎಸ್. ಪೂಜಾರಿ, ಎಂ.ಬಿ ಕುಕ್ಯಾನ್, ಸಿ.ಟಿ ಸಾಲ್ಯಾನ್ (ಶ್ರೀ ಗುರು ನಾರಾಯಣ ಯಕ್ಷಗಾನ ಮಂಡಳಿ ಮುಖ್ಯಸ್ಥ),ಅಸೋಸಿಯೇಶನ್ನ ವ್ಯವಸ್ಥಾಪಕ ಭಾಸ್ಕರ್ ಪೂಜಾರಿ, ಸಾಂಸ್ಕೃತಿಕ ಸಮಿತಿ ಗೌ| ಕಾರ್ಯದರ್ಶಿ ಅಶೋಕ್ಕು ಕ್ಯಾನ್ ಸಸಿಹಿತ್ಲು, ದೇವರಾಜ್ ಪೂಜಾರಿ ಡೊಂಬಿವಿಲಿ, ರವೀಂದ್ರ ಎ.ಅವಿೂನ್ ಸೇರಿದಂತೆ ಅಸೋಸಿಯೇಶನ್ನ ಸ್ಥಳೀಯ ಮತ್ತು ಸಮನ್ವಯ ಸಮಿತಿಗಳ ಮುಖ್ಯಸ್ಥರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಾಂಸ್ಕೃತಿಕ ಉಪ ಸಮಿತಿಯ ಸದಸ್ಯರುಗಳಾದ ಧನಂಜಯ ಜಿ.ಅವಿೂನ್, ಚಂದ್ರಹಾಸ ಜೆ.ಕೋಟ್ಯಾನ್, ಪದ್ಮನಾಭ ಕೆ.ಪೂಜಾರಿ ಹಾಗೂ ಅನೇಕ ಯಕ್ಷಗಾನ ಕಲಾವಿದರು ಉಪಸ್ಥಿತರಿದ್ದು, ಯಶೋಧರ್ ಡಿ.ಪೂಜಾರಿ, ಮೂಲ್ಕಿ ಬಿ.ಎಂ ಸುವರ್ಣ ಗ್ರಂಥ ಪಾರಾಯಣಕ್ಕೆ ಚಾಲನೆಯನ್ನಿತ್ತರು. ನೆರೆದ ಸೇವಾಥಿರ್s, ಭಕ್ತಾಧಿಗಳು
ಸಾಮೂಹಿಕ ಪೂಜಾ ಪ್ರಕ್ರಿಯೆ ನೆರವೇರಿಸಿ ಶ್ರೀ ಶನೀಶ್ವರ ದೇವರ ಕೃಪೆಗೆಪಾತ್ರರಾದರು.












