ಬಂಟ್ವಾಳ; ಬಿ.ಸಿ.ರೋಡಿನ ವಾಹನದಟ್ಟಣೆಯನ್ನು ನೀಗಿಸುವ ಉದ್ದೇಶದಿಂದ ಇಲ್ಲಿನ ಮೇಲ್ಸೇತುವೆಯಲ್ಲಿ ದ್ವಿಮುಖ ವಾಹನ

ಂಚಾರಕ್ಕೆ ಅವಕಾಶ ನೀಡುವ ನಿಟ್ಟಿನಲ್ಲಿ ಹೆದ್ದಾರಿ ಪ್ರಾಧಿಕಾರ ಕಾಮಗಾರಿ ಆರಂಭಿಸಿದೆ. ಮೊದಲ ಹಂತದಲ್ಲಿ ಮಂಗಳೂರಿನಿಂದ ಬಿ.ಸಿ.ರೋಡಿಗೆ ಪ್ರವೇಶಿಸುವ ಪಾಶ್ರ್ವದ ಮೇಲ್ಸೇತುವೆಯ ಬಳಿಯಲ್ಲಿ ಅಳವಡಿಸಿದ್ದ ಡಿವೈಡರ್ ಗಳನ್ನು ಸೋಮವಾರ ತೆರವುಗೊಳಿಸಲಾಯಿತು. ಮಂಗಳೂರಿನಿಂದ ನೇರವಾಗಿ ಪುತ್ತೂರು, ಉಪ್ಪಿನಂಗಡಿ, ಧರ್ಮಸ್ಥಳ ಕ್ಕೆ ತೆರಳುವ ವಾಹನಗಳು ಬಿ.ಸಿ.ರೋಡು ಪೇಟೆ ಪ್ರವೇಶಿಸದೆ, ಮೇಲ್ಸೇತುವೆಯಲ್ಲಿಯೇ ಸಾಗಬೇಕಿದೆ. ಮುಂದಿನ ಹಂತದಲ್ಲಿ ಮೇಲ್ಸೇತುವೆಯಲ್ಲಿ ದ್ವಿಮುಖ ರಸ್ತೆಗೆ ಅಗತ್ಯವುಳ್ಳ ಹಳದಿ ಪಟ್ಟಿಒಯ ಡಿವೈಡರ್ ಗಳ ಅಳವಡಿಕೆಯಾಗಲಿದೆ. ಅಪಘಾತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ವೇಗದ ಮಿತಿಯನ್ನು ಅಳವಡಿಸಲು ಹೆದ್ದಾರಿ ಪ್ರಾಧಿಕಾರ ಚಿಂತನೆ ನಡೆಸಿದೆ.
ಮುಗಿಯದ ಟ್ರಾಫಿಕ್ ಜಾಮ್ ಗೋಳು.
ಈ ನಡುವೆ ಸೋಮವಾರ ಬಿ.ಸಿ.ರೋಡಿನಲ್ಲಿ ಬೆಳಗ್ಗಿನಿಂದಲೇ ಟ್ರಾಫಿಕ್ ಜಾಮ್ ಉಂಟಾಗಿತ್ತು. ಘಟನವಾಹನಗಳು ಬಿ.ಸಿ.ರೋಡು ಪೇಟೆಯಿಂದಲೇ ಸಾಗುತ್ತಿದ್ದು, ಶುಭಕಾರ್ಯಗಳಿಗೆ ತೆರಳುತ್ತಿದ್ದವರು ಸಂಚಾರ ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದ ದೃಶ್ಯ ಕಂಡುಬಂತು.
