ಬಜ್ಪೆ: ಕೃತಿಯೊಂದು ಎಷ್ಟು ಮಾರಾಟವಾಯಿತು ಅಥವಾ ಯಾವ ರೀತಿಯ ವಿಮರ್ಶೆಗಳು ಬಂದವು ಎನ್ನುವುದಕ್ಕಿಂತ ಸಾರ್ವಜನಿಕವಾಗಿ ಚರ್ಚೆಯನ್ನು ಹುಟ್ಟು ಹಾಕಿದಾಗ ಕೃತಿಯೊಂದು ಮಹತ್ವ ಪಡೆಯುತ್ತದೆ ಎಂದು ಅಂತರಾಷ್ಟ್ರೀಯ ಖ್ಯಾತಿಯ ಲೇಖಕ, ಆಕ್ಸ್ ಫರ್ಡ್  ವಿಶ್ವವಿದ್ಯಾಲಯ ಪ್ರೊಫೆಸರ್ ಡಾ. ಕುನಾಲ್ ಬಸು ಅಭಿಪ್ರಾಯಪಟ್ಟಿದ್ದಾರೆ.
ಇದೇ ಮೊದಲ ಬಾರಿಗೆ ಮಂಗಳೂರಿಗೆ ಆಗಮಿಸಿದ ಬಸು ಅವರು ಸಂತ ಅಲೋಶಿಯಸ್ ಕಾಲೇಜಿನ ಆಂಗ್ಲ ವಿಭಾಗದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾಗವಹಿಸುವ ಮುನ್ನ ಬುಧವಾರ ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದರು.VPR_0062

VPR_0204 VPR_0167 VPR_0185 VPR_0181
ಅಂದಿನ ಕೊಲ್ಕತ್ತಾ ನಗರದ ಮಾದಕ ದ್ರವ್ಯ ಮಾರಾಟ ಸೇರಿದಂತೆ ಅಧೋಲೋಕದ ಪಾತ್ರಗಳನ್ನು ಹೊಂದಿರುವ ತನ್ನ ಹೊಚ್ಚ ಹೊಸ ಕೃತಿ ಕಲ್ಕತ್ತಾ ಈ ರೀತಿಯ ಸಂವಾದಕ್ಕೆ ಅವಕಾಶ ನೀಡಿದೆ ಎಂದು ಕುನಾಲ್ ಬಸು ಹೇಳಿದರು.
ತನ್ನ ಆರಾಮದಾಯಕ ಜೀವನ ಶೈಲಿಯನ್ನು ಬಿಟ್ಟು ಪಾತ್ರಗಳನ್ನು ಹುಡುಕಿ ಬರೆದ ಕೃತಿ ಇದಾಗಿದ್ದು, ಬಾಂಗ್ಲಾ ವಲಸಿಗರು ಸೇರಿದಂತೆ ಉತ್ತರ ಪ್ರದೇಶದ ಹಲವಾರು ರಾಜ್ಯಗಳ ವಲಸಿಗರಿಗೆ ಮನೆಯಾಗಿರುವ ಕಲ್ಕತ್ತಾದ ನಗರದೊಳಗಿನ ನಿಗೂಢ ಲೋಕವನ್ನು ಪಾನ್ ಮ್ಯಾಕ್ ಮಿಲನ್ ಪ್ರಕಾಶನ ಮಾಡಿರುವ ಈ ಕೃತಿಯಲ್ಲಿ ತೆರೆದಿಡಲಾಗಿದೆ ಎಂದು ಇಂಗ್ಲೆಂಡಿನಲ್ಲಿ ನೆಲೆಸಿರುವ ಪ್ರೊಫೆಸರ್ ಬಸು ಹೇಳಿದರು.
ದೇಶದ ಪ್ರಚಲಿತ ವಿದ್ಯಮಾನಗಳ ಬಗ್ಗೆ ಪ್ರತಿಕೃಯೆ ನೀಡಿದ ಅವರು ನಮ್ಮ ಹೆಮ್ಮೆಯ ದೇಶದಲ್ಲಿ ಸಹಿಷ್ಣುತೆಯೂ ಇದೇ ಅಸಹಿಷ್ಣುತೆಯು ಇದೆ ಎಂದರು. ಅನಂತರ ನಡೆದ ವಿಚಾರ ಸಂಕಿರಣದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ದೆಹಲಿಯ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ವಿರುದ್ಧ ರಾಜಕೀಯ ಪ್ರಹಾರ ನಡೆಸಿರುವುದು ಸರಿಯಲ್ಲ ಇದು ಯುವಜನತೆಯ ಉತ್ಸಾಹವನ್ನು ಕಂಗೆಡಿಸುತ್ತದೆ ಎಂದರು.
ಕತೆ ಹೆಣೆಯುವ ಕುರಿತಾಗಿ ವಿದ್ಯಾರ್ಥಿಗಳೊಂದಿಗೆ ಅನುಭವ ಹಂಚಿಕೊಂಡ ಕುನಾಲ್ ಬಸು ಅವರು ಕೃತಿಯ ವಸ್ತುಗಳ ಕುರಿತಾಗಿ ಸಂಸೋಧನೆಯಿಂದ ನಿಮ್ಮ ಕಲ್ಪನಾ ಶಕ್ತಿ ಇನ್ನಷ್ಟು ವಿಸ್ತೃತವಾಗುತ್ತದೆ ಸಾಕಷ್ಟು ಓಡಾಟ, ಓದಿನಿಂದ ತನಗೆ ಕೃತಿಗಳಿಗೆ ವಸ್ತುಗಳು ಮತ್ತು ಪಾತ್ರಗಳು ದೊರೆಯುತ್ತವೆ ಎಂದು ಕುನಾಲ್ ಬಸು ಮಂಗಳೂರು ಕುರಿತಾಗಿ ಕೃತಿಯೊದಂನ್ನು ರಚಿಸುವ ಇರಾದೆಯನ್ನು ವ್ಯಕ್ತಪಡಿಸಿದರು.
ಕುನಾಲ್ ಬಸು ಅವರ ದಿ ಓಪಿಯಮ್  ಕ್ಲಾರ್ಕ್, ದಿ ಮಿನಿಯೇಚರಿಸ್ಟ್, ರೇಸಿಸ್ಟ್ ಮತ್ತು ಎಲ್ಲೊ ಎಂಪರರ್ಸ್  ಕ್ಯುರ್ ಜನಪ್ರಿಯ ಕೃತಿಗಳಾಗಿದ್ದು, ಜಪಾನ್ ವೈಫ್ ಸಿನಿಮಾವಾಗಿದೆ.
ಸಂತ ಅಲೋಶಿಯಸ್ ಕಾಲೇಜಿನ ಪ್ರಾಚಾರ್ಯ ರೆ.ಫಾ. ಸ್ವೇಬರ್ಟ್  ಡಿಸಿಲ್ವ, ಆಂಗ್ವ ವಿಭಾಗದ ಮುಖ್ಯಸ್ಛ ಡಾ. ಲೂರ್ಡ್  ಸ್ವಾಮಿ, ಪಾನ್ ಮ್ಯಾಕ್ ಮಿಲನ್ ಪ್ರಕಾಶನ ಸಂಸ್ಛೆಯ ಭಾರತ ಪ್ರತಿನಿಧಿ ವಸಂತ್ ಕಾಮತ್ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *