ಬಂಟ್ವಾಳ : ಮಂಗಳೂರು ಯಾಂತ್ರಿಕ ಮೀನಿಗಾರರ ಪ್ರಾಥಮಿಕ ಸಹಕಾರಿ ಸಂಘ ನಿಯಮಿತ ಸೌತ್ ವಾರ್ಡ್ ಬಂದರು ಮಂಗಳೂರು ಇದರಲ್ಲಿ ಸಹಾಯಕ ಕಾರ್ಯದರ್ಶಿ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸುಭಾ ಶ್ಚಂದ್ರ ಜೈನ್ ಬಂಟ್ವಾಳ ಇವರನ್ನು ನಿರ್ದೇಶಕರೋರ್ವರ ವೈಯುಕ್ತಿಕ ಹಿತಾಸಕ್ತಿಗೆ ಅಡ್ಡ ಬರುವರೆಂಬ ಲಾರಣದಿಂದ ಸಂಸ್ಥೆಯಿಂದ ವಜಾಗೊಳಿಸಿರುವ ಕ್ರಮವನ್ನು ಪ್ರಶ್ನಿಸಿ ಮಾನ್ಯ ಸಹಕಾರಿ ಸಂಘಗಳ ಸಹಾಯಕ ನಿಬಂಧಕರು ಮಂಗಳೂರು ಇಲ್ಲಿ ದಾವೆಯನ್ನು ಹೂಡಿರುವ ಪ್ರಕಾರ , ಸದ್ರಿ ನ್ಯಾಯಾಲಯದ ಆದೇಶ ಸಂಖ್ಯೆ 325/07 ದಿನಾಂಕ 18-06-2010 ರ ಪ್ರಕಾರ ವಿನಾ ಕಾರಣಕ್ಕೆ ಈ ರೀತಿ ಕೆಲಸದಿಂದ ವಜಾ ಮಾಡಿದ ಆಡಳಿತ ಮಂಡಳಿಯ ಕ್ರಮವನ್ನು ರದ್ದುಪಡಿಸಿ, ಸುಭಾ ಶ್ಚಂದ್ರ ಜೈನ್ ರವರನ್ನು ಮರುನೇಮಕಗೊಳಿಸಿ ಅವರಿಗೆ ಸಲ್ಲತಕ್ಕ ಬಾಕಿ ವೇತನ ಇತ್ಯಾದಿಗಳನ್ನು ಪಾವತಿಸುವಂತೆ ಆದೇಶಿಸಿರುತ್ತಾರೆ. ಆದರೆ ಈ ಆದೇಶವನ್ನು ರದ್ದುಗೊಳಿಸಬೇಕೆಂದು ಸದ್ರಿ ಆಡಳಿತ ಮಂಡಳಿಯವರು ಕರ್ನಾಟಕ ಮೇಲ್ಮನವಿ ಪ್ರಾಧಿಕಾರಕ್ಕೆ ದೂರು ಸಲ್ಲಿಸಿದ್ದರೂ ಅಲ್ಲಿಯೂ ಸದ್ರಿ ಪ್ರಕರಣವನ್ನು ತಿರಸ್ಕರಿಸಿ ರದ್ದು ಪಡಿಸಿರುತ್ತಾರೆ.

ಆ ಪ್ರಕಾರ ಸುಭಾ ಶ್ವಂದ್ರ ಜೈನ್ ರವರು ಮಾನ್ಯ ಸಹಕಾರಿ ಸಂಘಗಳ ಸಹಾಯಕ ನಿಬಂಧಕರು ಹಾಗೂ ಮಾನ್ಯ ವಸೂಲಾತಿ ಅಧಿಕಾರಿ ಮಂಗಳೂರು ಇವರ ನ್ಯಾಯಾಲಯದಲ್ಲಿ ದಾವಾ ದಾಖಲು ಮಾಡಿ ಈವರೆಗೆ ಬರ ಬೇಕಾದ ಬಾಕಿ ಸಂಬಳದ ಬಗ್ಗೆ ಕಾನೂನು ರೀತ್ಯಾ ನೋಟೀಸು ನೀಡಿದಾಗ್ಯೂ ಸಂಬಳ ಪಾವತಿಸದೇ ಇರುವುದರಿಂದ ಮಾನ್ಯ ನ್ಯಾಯಾಲಯವು ವಿಶೇಷ ಆದೇಶ / ಸಿವಿಲ್ ಪ್ರಕ್ರಿಯೆ ಅಮಲ್ಜಾರಿ ನಂ-1-2015-16 ದಿನಾಂಕ 08-01-2016 ಪ್ರಕಾರ ಸದ್ರಿ ಸಂಸ್ಥೆಯ ಭಾರತೀಯ ಸ್ಟೇಟ್ ಬ್ಯಾಂಕ್ ಮಂಗಳೂರು ಇಲ್ಲಿ ಹೊಂದಿರುವ ಉಳಿತಾಯ ಖಾತೆಯನ್ನು ಸ್ತಂಭನಗೊಳಿಸಿ ವಾದಿಗೆ ಬರ ಬೇಕಾದ ಸುಮಾರು 14.32 ಲಕ್ಷ ವೇತನ ಮೊಬಲಗನ್ನು ಮುಟ್ಟುಗೋಲು ಹಾಕಿರುತ್ತಾರೆ ಎಂದು ತಿಳಿದು ಬಂದಿದೆ. ಇದೀಗ ಶ್ರೀ ಸುಭಾ ಶ್ಚಂದ್ರ ಜೈನ್ ಇವರನ್ನು ಉದ್ಯೋಗಕ್ಕೆ ಮರು ನೇಮಕಗೊಳಿಸದೇ ಇದ್ದರೆ ಸಂಸ್ಥೆಯ ಈಗಿನ ಅಧ್ಯಕ್ಷರ ವಿರುದ್ಧ ವೈಯುಕ್ತಿಕ ಮಾನನಷ್ಟ ಮೊಕದ್ದಮೆ ಹೂಡಿ ತನಗೆ ಆಗಿರುವ ಮಾನಹಾನಿ . ಅಗೌರವ ಹಾಗೂ ಕಷ್ಟನಷ್ಟಗಳಿಗೆ ಪರಿಹಾರ ಕೇಳಲಿದ್ದಾರೆ. ಶ್ರೀ ಸುಭಾಶ್ಚಂದ್ರ ಜೈನ್ ಇವರು ಸಂಸ್ಥೆಯ ಅಧ್ಯಕ್ಷರಿಗೆ ತನ್ನನ್ನು ಮರುನೇಮಕಗೊಳಿಸಬೇಕೆಂದು ಮತ್ತೊಮ್ಮೆ ತನ್ನ ವಿನಂತಿ ಪತ್ರವನ್ನು ನೀಡಿರುತ್ತಾರೆ
