ಬಂಟ್ವಾಳ :ತುಳುನಾಡು ದೈವಾರಾಧನೆಯ ಭದ್ರನೆಲೆ. ಅತಿಮಾನುಷ ಶಕ್ತಿಗಳನ್ನು ಪೂಜಿಸುವ ಇಲ್ಲಿನ ಮಂದಿ ನಂಬಿಕೆಯ ನೆಲೆಗಟ್ಟಿನಲ್ಲಿ ನೆಮ್ಮದಿ ಪಡೆಯುತ್ತಾರೆ. ಜಾನಪದ ಎನ್ನುವುದು ಸಂಸ್ಕೃತಿಯ ಒಂದು ಭಾಗವಾಗಿದ್ದು ತುಳುನಾಡಿನ ಆರಾಧ್ಯ ಪುರುಷರಾದ ಅವಳಿ ವೀರರೆಂದೇ ಪ್ರಸಿದ್ಧಿ ಪಡೆದ ಕೋಟಿ ಚೆನ್ನಯರು ತುಳು ಜನಪದ ಮನಸ್ಸುಗಳಲ್ಲಿ ಅತ್ಯಂತ ಗಾಢವಾಗಿ ನೆಲೆ ನಿಂತಿರುವ ಸಾಂಸ್ಕೃತಿಕ ಅಂಶಗಳು ಎಂದು ಜಾನಪದ ವಿದ್ವಾಂಸ ಬಾಬು ಅಮೀನ್ ಬನ್ನಂಜೆ ಅವರು ಹೇಳಿದರು.
ಅವರು ಬಂಟ್ವಾಳ ತಾಲೂಕು ಕಕ್ಯಪದವು ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಕ್ಷೇತ್ರದಲ್ಲಿ ಶ್ರೀ ಬ್ರಹ್ಮಬೈದರ್ಕಳ ಜಾತ್ರೆ ಪ್ರಯುಕ್ತ ಫೆ.16ರಂದು ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿದರು.1802pkt1
ಕೋಟಿ ಚೆನ್ನಯರಿಗೆ ಸಂಬಂಧಿಸಿದ ಕಥೆಗಳು,ರೂಪಾಂತರಗಳು ಮತ್ತು ದೈವೀಕತೆಗೆ ಪಲ್ಲಟ ಹಾಗೂ ಕನಸುಗಳು ಮತ್ತು ಪವಾಡಗಳು ಜನಪದ ಪುರಾಣದ ಎಲ್ಲಾ ಆಯಾಮಗಳನ್ನು ತೋರಿಸುತ್ತವೆ. ಜನಪದ ಮಹಾಕಾವ್ಯವಾದ ಪಾಡ್ದನ,ಆರಾಧನಾ ವಿಧಾನವಾದ ಬೈದರ್ಕಳ ನೇಮ ಮತ್ತು ಆರಾಧ ಕೇಂದ್ರಗಳಾದ ಗರಡಿಗಳ ಮೂಲಕ ಕೋಟಿ ಚೆನ್ನಯರು ನಮ್ಮ ನೆಲದ ವೀರರೆಂದು ಆಪ್ತರಾಗಿದ್ದಾರೆ
ಬೆಂಗಳೂರು ಉದ್ಯಮಿ ವೆಂಕಪ್ಪ ಪೂಜಾರಿ,ಉದ್ಯಮಿ ಗುಣಶೇಖರ ಕೊಡಂಗೆ, ನಿವೃತ್ತ ಮುಖ್ಯ ಶಿಕ್ಷಕ ಬಾಬು ಮಾಸ್ತರ್ ಕೋಂಗುಜೆ, ಕಜೆಕಾರು ಗ್ರಾ.ಪಂ.ಮಾಜಿ ಅಧ್ಯಕ್ಷ ಡೀಕಯ್ಯ ಬಂಗೇರ,ಸಾಮಾಜಿಕ ಕಾರ್ಯಕರ್ತ ಶಿವರಾಮ ಗೌಡ ಅಗ್ಪಲ,ಕಕ್ಯಪದವು ಹಾ.ಉ.ಸಂಘದ ಅಧ್ಯಕ್ಷ ಲಿಂಗಪ್ಪ ಪೂಜಾರಿ, ಜೀಣರ್ೋದ್ಧಾರ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲಿಯಾನ್, ತಾ.ಪಂ.ಸದಸ್ಯ ಬಿ.ಪದ್ಮಶೇಖರ ಜೈನ್, ಉತ್ಸವ ಸಮಿತಿಅಧ್ಯಕ್ಷ ವಿಶ್ವನಾಥ ಸಾಲಿಯಾನ್ ಬಿತ್ತ,ಸಮಿತಿ ಪದಾಕಾರಿಗಳಾದ ಚಂದ್ರಶೇಖರ ಕೆ., ವಾಸುದೇವ ಮಯ್ಯ, ಬಿ.ಶ್ರೀಧರ ಆಚಾರ್, ಚಿದಾನಂದ ರೈ ಕಕ್ಯ, ಸದಾನಂದ ಗೌಡ, ಚೇತನ್ ಎಚ್., ಜಯಾನಂದ ಪೂಜಾರಿ, ಉತ್ಸವ ಸಮಿತಿ ಪದಾಕಾರಿಗಳಾದ ಪರಮೇಶ್ವರ ಜಿ., ರಾಮಯ್ಯ ಭಂಡಾರಿ, ಗುರುಪ್ರಕಾಶ್, ರಾಜೀವ ಕೆ.,ರಾಜೇಂದ್ರ ಟಿ., ಸುಂದರ ದೇವಾಡಿಗ, ವಸಂತ, ನವೀನ ಶೆಟ್ಟಿ, ಪ್ರದೀಪ್ ಕುಮಾರ್,ಸನತ್ ಕುಮಾರ್, ತಾರನಾಥ ಶೆಟ್ಟಿ, ಬಾಬು ಗಿಳಿಂಗಾಜೆ, ಸಂಜೀವ ಗೌಡ ಅಗ್ಪಲ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಾಧಕರಾದ ಮಾಡೋಡಿ ವೀರಪ್ಪ ನಾಕ (ದೈವಾರಾಧನೆ ಸೇವೆ), ಕಾಂತರ ಬಾರ್ದಡ್ಡ್ ( ದೈವರಾಧನೆ ಸೇವೆ), ಸೇಸಪ್ಪ ಮೂಲ್ಯ ಊರಿಂಜ ( ನಾಟಿ ವೈದ್ಯ), ಚೆನ್ನಪ್ಪ ಪೂಜಾರಿ ಕುಕ್ಕಾಜೆ (ಪ್ರಗತಿಪರ ಕೃಷಿಕ) ಅವರನ್ನು ಸಮ್ಮಾನಿಸಲಾಯಿತು.
ಉಳಿ ಸೇ.ಸ.ಬ್ಯಾಂಕ್ ಅದ್ಯಕ್ಷ ಎ.ಚೆನ್ನಪ್ಪ ಸಾಲಿಯಾನ್ ಅವರು ಸ್ವಾಗತಿಸಿದರು. ಸಮಿತಿ ಪ್ರ.ಕಾರ್ಯದರ್ಶಿ ಡೀಕಯ್ಯ ಕುಲಾಲ್ ಅವರು ವಂದಿಸಿದರು. ಉಪಾಧ್ಯಕ್ಷ ಗಣೇಶ್ ಕೆ. ಕಾರ್ಯಕ್ರಮ ನಿರೂಪಿಸಿದರು. ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ಅವರು ಜಾತ್ರೆಯಲ್ಲಿ ಭಾಗವಹಿಸಿದ್ದರು.

By suddi9

Leave a Reply

Your email address will not be published. Required fields are marked *