ಬಂಟ್ವಾಳ: ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಬಡವರ ಪರವಾದ ಅನೇಕ ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದು ನೀರು,ರಸ್ತೆ,ವಿದ್ಯುತ್,ಶಿಕ್ಷಣ ಮೊದಲಾದ ಮೂಲಭೂತ ಸೌಲಭ್ಯಗಳಿಗೆ ಆದ್ಯತೆ ನೀಡಿದೆ. ಸರಕಾರದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನತೆಗೆ ತಿಳಿಸಿ ಮುಂಬರುವ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಆಡಳಿತವನ್ನು ಬಲಪಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಹೇಳಿದರು.
ಅವರು ಬಂಟ್ವಾಳ ತಾಲೂಕು ಸಂಗಬೆಟ್ಟು ಜಿಲ್ಲಾ ಪಂಚಾಯತ್ ಕ್ಷೇತ್ರದ ಪಿಲಾತಬೆಟ್ಟು ಗ್ರಾಮದ ದೈಕಿನಕಟ್ಟೆ ವಾಲ್ಟರ್ ಪಿಂಟೋ ಅವರ ನಿವಾಸದಲ್ಲಿ ಫೆ.14ರಂದು ಜರಗಿದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

???????????????????????????????ಕಾಂಗ್ರೆಸ್ ಬಡವರ ಪರ ಪಕ್ಷವಾಗಿದ್ದು ಬಡವರಿಗೆ ಅನ್ಯಾಯವಾಗಿಲ್ಲ. ಬಡವರಿಗೆ ನಿವೇಶನ,ವಸತಿ ವ್ಯವಸ್ಥೆ ಕಲ್ಪಿಸುವ ಕ್ರಾಂತಿಕಾರಿ ಬದಲಾವಣೆಗಳಿಂದ ಬಡವರ ಪರವಾದ ಕಾಳಜಿ ಹೊಂದಿದೆ. ಪಂಚಾಯತ್ ರಾಜ್ ವ್ಯವಸ್ಥೆ ವಿಕೇಂದ್ರೀಕರಣಗೊಳಿಸುವ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆಡಳಿತದಲ್ಲಿ ಮೀಸಲಾತಿ ದೊರಕಿದೆ ಎಂದ ಅವರು ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿದೆ. ಸರಕಾರದ ಜನೋಪಯೋಗಿ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಸ್ಥಳೀಯ ಸಂಸ್ಥೆಗಳ ಆಡಳಿತ ನಿರ್ವಹಣೆಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಿ ಎಂದು ಹೇಳಿದರು.
ಸಂಗಬೆಟ್ಟು ಜಿ.ಪಂ. ಕಾಂಗ್ರೆಸ್ ಅಭ್ಯರ್ಥಿ ಕೆ.ಮಾಯಿಲಪ್ಪ ಸಾಲ್ಯಾನ್ ಮತ್ತು ಪಿಲಾತಬೆಟ್ಟು ತಾ.ಪಂ.ಕಾಂಗ್ರೆಸ್ ಅಭ್ಯರ್ಥಿ ಎಂ.ರಾಜೀವ ಶೆಟ್ಟಿ ಎಡ್ತೂರು ಅವರು ಮಾತನಾಡಿ ಕಾರ್ಯಕರ್ತರು ತಮ್ಮ ಪರವಾಗಿ ಮತಯಾಚಿಸುವಂತೆ ವಿನಂತಿಸಿದರು.
ಬೂಡಾ ಅಧ್ಯಕ್ಷ ಪಿಯೂಸ್ ಎಲ್.ರೋಡ್ರಿಗಸ್,ಕಾಂಗ್ರೆಸ್ ಮುಖಂಡರಾದ ಬಿ.ಎಚ್.ಖಾದರ್, ಇಸ್ಮಾಯಿಲ್ ಹಾಜಿ ಮೂರ್ಜೆ, ಎನ್.ಮೋಹನ ಹೆಗ್ಡೆ, ಸಿದ್ದಿಕ್ ಪಾಣೆಮಂಗಳೂರು, ವಾಸು ಪೂಜಾರಿ ಲೊರೆಟ್ಟೊ, ರಮೇಶ್ ಪ್ರಭು, ಲೋಕೇಶ್ ಆಚಾರ್ಯ, ವಾಲ್ಟರ್ ಪಿಂಟೋ, ಸಿಂಥಿಯಾ ಪಿಂಟೋ, ಮೋಹನ ಸಾಲಿಯಾನ್,ವಿಕ್ಟರ್ ಡಿಸೋಜ, ಶೇಕ್ ರಹಮತ್ತುಲ್ಲಾ, ಅಂಬ್ರೋಸ್ ಮೊರಾಸ್ ಹಾಗೂ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.  ರಾಜೇಂದ್ರ ಕೆ.ವಿ. ಅವರು ಸ್ವಾಗತಿಸಿ, ವಂದಿಸಿದರು.
ಇದೇ ವೇಳೆ ಸಂಗಬೆಟ್ಟು ಕ್ಷೇತ್ರ ವ್ಯಾಪ್ತಿಯ ಇರ್ವತ್ತೂರು,ಬಂಗೇರಕೆರೆ,ಮೂರ್ಜೆ ಮೊದಲಾದೆಡೆ ಕೆ.ಮಾಯಿಲಪ್ಪ ಸಾಲಿಯಾನ್ ಹಾಗೂ ಎಂ.ರಾಜೀವ ಶೆಟ್ಟಿ ಎಡ್ತೂರು ಅವರು ಮತಯಾಚನೆ ಗೈದರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಉಪಸ್ಥಿತರಿದ್ದು, ಸಂಗಬೆಟ್ಟು ಜಿ.ಪಂ. ಕ್ಷೇತ್ರ ಹಾಗೂ ಪಿಲಾತಬೆಟ್ಟು ತಾ.ಪಂ. ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಮನವಿಮಾಡಿದರು.

By Suddi9

Leave a Reply

Your email address will not be published. Required fields are marked *