ಬಂಟ್ವಾಳ: ವಿಟ್ಲ ಸ ಮಾ ಹಿ ಪ್ರಾ ಶಾಲೆಯಲ್ಲಿ ವಿಟ್ಲ ವಲಯದ 6 ಕ್ಲಸ್ಟರ್ಗಳ ಎಲ್ಲಾ ಶಾಲೆಗಳ ಅಡುಗೆ ಸಿಬಂದಿಯವರಿಗೆ ಬಂಟ್ವಾಳ ತಾಲೂಕು ಅಕ್ಷರ ದಾಸೋಹ ಅಧಿಕಾರಿಗಳಿಂದ ತರಬೇತಿ ಕಾರ್ಯಾಗಾರವು ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆ ಮುಖ್ಯ ಶಿಕ್ಷಕ ವಿಶ್ವನಾಥ ಹೆಚ್ ವಹಿಸಿದ್ದರು. ಕಾರ್ಯಕ್ರಮವನ್ನು ಹಿರಿಯ ಅಡುಗೆ ಸಿಬ್ಬಂದಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು. ಅಕ್ಷರದಾಸೋಹದ ಸಹಾಯಕ ಇರ್ದೇಶಕ ಶ್ರೀಕಾಂತ್ ಬೈಂದೂರು, ಸಂಪನ್ಮೂಲ ವ್ಯಕ್ತಿ ಸೇಸಪ್ಪ, ಶಿಕ್ಷಣ ಸಂಯೋಜಕಿ ಪುಷ್ಪಾ, ಬಿ ಆರ್ ಪಿ ಕೆಂಪಯ್ಯ, ಸಿ ಆರ್ ಪಿ ಶಿವರಾಮ ಭಟ್, ಗ್ಯಾಸ್ ಮತ್ತು ಸ್ಟವ್ ನಿರ್ವಾಹಕ ಗೋಪಿನಾಥ್ ವೇದಿಕೆಯಲ್ಲಿದ್ದರು.
