ಬಂಟ್ವಾಳ: ಸಹಕಾರ ಮನೋಭಾವದ ಮೂಲಕ ಸಹಕಾರಿ ಕ್ಷೇತ್ರವನ್ನು ಬೆಳೆಸಿ ಎಂದು ಬಂಟ್ವಾಳ ಪುರಸಭೆ ಅಧ್ಯಕ್ಷೆ ವಸಂತಿ ಚಂದಪ್ಪ ಹೇಳಿದರು. ಅವರು ಬಿ.ಸಿ.ರೋಡಿನ ಲಕ್ಷ್ಮೀ ಮಹಲ್‍ನ ಮೊದಲನೇ ಮಹಡಿಯಲ್ಲಿ ಶ್ರೀ ಸುಬ್ರಹ್ಮಣ್ಯ ಸಹಕಾರ ಸಂಘ(ನಿ.) ಮಂಗಳೂರು ಇದರ 7 ನೇ ಬಿ.ಸಿ.ರೋಡ್ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು.
ಮಂಗಳೂರು ಶ್ರೀ ಸುಬ್ರಹ್ಮಣ್ಯ ಸಹಕಾರ ಸಂಘ(ನಿ.)ದ ಅಧ್ಯಕ್ಷ ಕರುಣ್ ರಾವ್ ಬೆಳ್ಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕರಾದ ಕೆ. ಮಾಧವ ಭಟ್ ,ಉದ್ಯಮಿ ಬಿ. ಗಣಪತಿ ಸೋಮಾಯಾಜಿ, ಮಂಚಿಕಟ್ಟೆ ಲಕ್ಷ್ಮೀನರಸಿಂಹ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಕಯ್ಯಾರು ನಾರಾಯಣ ಭಟ್, ನಿವೃತ್ತ ಅಧ್ಯಾಪಕರಾದ ಪದ್ಮನಾಭ ರಾವ್. ಎಮ್ ಹಾಗೂ ಶಾಖಾ ಸಲಹಾ ಸಮಿತಿಯ ಸದಸ್ಯರುಗಳು ಉಪಸ್ಥಿತರಿದ್ದರು.
ಬಿ.ಸಿರೋಡ್ ಶಾಖಾ ಸಲಹಾ ಸಮಿತಿ ಅಧ್ಯಕ್ಷ ನಾಗೇಶ್ ರಾವ್ ಪಿ.ಎನ್ ಸ್ವಾಗತಿಸಿ, ಸಲಹಾ ಸಮಿತಿ ಸದಸ್ಯ ಶಿವರಾವ್ ವಂದಿಸಿ, ಪೊಳಲಿ ಸುಬ್ಬರಾವ್ ಕಾರ್ಯಕ್ರಮ ನಿರ್ವಹಿಸಿದರು. ಮಂಗಳೂರು ಶ್ರೀ ಸುಬ್ರಹ್ಮಣ್ಯ ಸಹಕಾರ ಸಂಘ(ನಿ.)ದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಿ ಉದಯ್ ಕುಮಾರ್ ರಾವ್ ಪ್ರಸ್ತಾ ವಿಸಿದರು.
