ಬಂಟ್ವಾಳ:ಕೇಂದ್ರ ಸರ್ಕಾರದ ಬಿಜೆಪಿ ಆಡಳಿತ ವಿಕೇಂದ್ರಿಕರಣದ ಯಾವುದೇ ಯೋಜನೆಗಳನ್ನು ರೂಪಿಸಿಲ್ಲ, ಆದರೆ ಮರುಳು ಮಾತಿನ ಮೂಲಕ ಜನರ ದಿಕ್ಕು ತಪ್ಪಿಸುವ ಕಾರ್ಯದಲ್ಲಿ ನಿರತವಾಗಿದೆ ಎಂದು ವಿಧಾನಪರಿಷತ್ತಿನ ಮಾಜಿ ಉಪಸಭಾಪತಿ ಸುದರ್ಶನ್ ವಿ.ಆರ್ ಆರೋಪಿಸಿದರು.
ಬಿ.ಸಿ.ರೋಡಿನ ಮನಮೋಹನ್ ಸರ್ಕಾರ ವಿದ್ದಾಗ ಹಸಿವು ಮುಕ್ತ ಭಾರತ ಎಂಬ ಘೋಷಣೆಯ ಮೂಲಕ ಜನಪರವಾಗಿ ಆಡಳಿತ ನಡೆಸಿತ್ತು. ಆದರೆ ಮೋದಿ ಸರ್ಕಾರ ಕೇವಲ ಕಾಂಗ್ರೇಸ್ ಮುಕ್ತ ಭಾರತ ಎಂಬ ಘೋಷಣೆಯ ಮೂಲಕ ಅಪಪ್ರಚಾರದಲ್ಲಿ ತೊಡಗಿದ್ದು, ಪ್ರಜಾಪ್ರಭುತ್ವದ ವ್ಯವಸ್ಥೆಯ ಮೇಲೆ ಕಿಂಚಿತ್ ಗೌರವವಿಲ್ಲ ಎಂದು ಟೀಕಿಸಿದರು. ಕಳೆದ ಎರಡೂವರೆ ವರ್ಷದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರ ಹಲವಾರು ಅಭೀವೃದ್ದಿ ಯೋಜನೆಗಳನ್ನು ಜಾರಿಗೆ ತಂದಿದೆ, ಆದರೆ ಬಿಜೆಪಿ ಆಡಳಿತದಲ್ಲಿದ್ದ ಜಿ.ಪಂ ಹಾಗೂ ತಾ.ಪಂ.ಗಳು ಸರ್ಕಾರ ಸವಲತ್ತುಗಳನ್ನು ಜನತೆಗೆ ತಲುಪಿಸುವಲ್ಲಿ ವಿಫಲವಾಗಿದೆ. ಈ ನಿಟ್ಟಿನಲ್ಲಿ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೇಸ್ ಅನ್ನು ಬೆಂಬಲಿಸುವಂತೆ ಕರೆ ನೀಡಿದರು. cong-sudarshan

cong-samavesha

ಬಡವರ ಬಗ್ಗೆ, ರೈತರ ಬಗ್ಗೆ ಬಿಜೆಪಿಗೆ ಕಾಳಜಿ ಇಲ್ಲ ಎಂದ ಅವರು, ಕಾಂಗ್ರೇಸ್ ಪಕ್ಷ ಕಳೆದ ವಿಧಾಸಭಾ ಚುನಾವಣೆ ವೇಳೆ ಪ್ರಣಾಳಿಕೆಯಲ್ಲಿ ನೀಡಿದ್ದ 165 ಆಶ್ವಾಸನೆಗಳ ಪೈಕಿ 100 ಆಶ್ವಾಸನೆಗಳನ್ನು ಈಡೇರಿಸಿದೆ, ಮುಂದಿನ ಎರಡೂವರೆ ವರ್ಷದಲ್ಲಿ  ಸರ್ಕಾರದ  ಲೋಪದೋಷಗಳನ್ನು ಸರಿಪಡಿಸಿಕೊಂಡು ಇನ್ನೂ ಉತ್ತಮ ಆಡಳಿತ ನೀಡಲು ಬದ್ದರಿದ್ದೇವೆ ಎಂದರು. ಇತ್ತೀಚೆಗೆ ನಡೆದ ಉಪಚುನಾವಣೆಯ ಫಲಿತಾಂಶ ಜಿ.ಪಂ., ತಾ.ಪಂ. ಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ, ಆಧರೆ ಇದು ನಮ್ಮ ಸರ್ಕಾರಕ್ಕೆ ಎಚ್ಚರಿಕೆ ಗಂಟೆ ಎಂಬ ಬಗ್ಗೆ ಈಗಾಗಲೇ ನಮ್ಮ ಪಕ್ಷದ ಅಧ್ಯಕ್ಷರು, ಮುಖ್ಯಮಂತ್ರಿಗಳು ಪ್ರತಿಕ್ರಿಯೆ ನೀಡಿದ್ದಾರೆ ಎಂದರು.
ವಿಧಾನಪರಿಷತ್ತಿನ ಸದಸ್ಯ ಐವನ್ ಡಿ’ಸೋಜಾ ಮಾತನಾಡಿ, ಅಪಪ್ರಚಾರದ ಮೂಲಕ ಅಧಿಕಾರಕ್ಕೆ ಬಂದ ಕೇಂದ್ರದ ಮೋದಿ ಸರ್ಕಾರ ಜನತೆಯನ್ನು ವಂಚಿಸುತ್ತಿದೆ. ಮೋದಿ ಸರ್ಕಾರ ಕೇವಲ ಬಾತ್ ನಲ್ಲೇ ಮುಳುಗಿದೆ ಎಂದು ಲೇವಡಿ ಮಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಂಚಾಯತ್ ಅನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಪ್ರಣಾಳಿಕೆಯಲ್ಲಿನೀಡಿದ್ದ ಭರವಸೆಗಳ ಈಡೇರಿಕೆಗೆ ರಾಜ್ಯ ಸರ್ಕಾರ ಬದ್ದವಾಗಿದೆ ಎಂದರಲ್ಲದೆ, ತಾಲೂಕು ಸಹಿತ ಜಿಲ್ಲೆಯಲ್ಲಿ ಮತ್ತಷ್ಟು ಅಭಿವೃದ್ದಿ ಕಾರ್ಯಗಳನ್ನು ನಡೆಸುವ ನಿಟ್ಟಿನಲ್ಲಿ ಜಿ.ಪಂ. ಹಾಗೂ ತಾ.ಪಂ. ಚುನಾವಣೆಯಲ್ಲಿ ಕಾಂಗ್ರೇಸ್ ಅಭ್ಯರ್ಥಿಗಳನ್ನು ಬಹುಮತದಿಂದ ಗೆಲ್ಲಿಸುವಂತೆ ಕರೆ ನೀಡಿದರು.
ಜಿಲ್ಲಾ ಕಾಂಗ್ರೇಸ್ ನ ಹಂಗಾಮಿ ಅಧ್ಯಕ್ಷ ಕೋಡಿಜಾಲು ಇಬ್ರಾಹಿಂ ಮಾತನಾಡಿದರು. ಉಪಾಧ್ಯಕ್ಷ ಬಿ.ಎಚ್ ಖಾದರ್, ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ,ಅಲ್ಪಸಂಖ್ಯಾತ ಸೆಂಟ್ರಲ್ ಕಮಿಟಿ ಅಧ್ಯಕ್ಷ ಕೆ.ಎಸ್.ಮಸೂದ್, ಮಾಜಿ ಮೇಯರ್ ಗಳಾದ ಶಶಿಧರ್ ಹೆಗ್ಡೆ, ಅಶ್ರಫ್, ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷ ಮಿಥುನ್ ರೈ, ಪುರಸಭಾ ಅಧ್ಯಕ್ಷೆ ವಸಂತಿ ಚಂದಪ್ಪ, ಪ್ರಶಾಂತ್ ಕುಲಾಲ್, ಲುಕ್ಮಾನ್, ಪರಿಶಿಷ್ಟ ಜಾತಿ ಪಂಗಡ ಘಟಕದ ಅಧ್ಯಕ್ಷ ಜನಾರ್ಧನ ಚೆಂಡ್ತಿಮಾರ್, ಮಂಗಳೂರು ಉತ್ತರ ಬ್ಲಾಕ್ ಅಧ್ಯಕ್ಷ ವಿಶ್ವಾಸ್  ಕುಮಾರ್ದಾಸ್, ಕಾರ್ಪೋ ರೇಟರ್ಗಳಾದ ಅಬ್ದುಲ್ ರವೂಫ್, ಲತೀಫ್ , ವಿನಯರಾಜ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬೂಡಾ ಅಧ್ಯಕ್ಷ ಪಿಯೂಸ್ ರೋಡ್ರಿಗಸ್ ಸ್ವಾಗತಿಸಿದರು. ಪುರಸಭಾ ಸದಸ್ಯ ಸದಾಶಿವ ಬಂಗೇರ ವಂದಿಸಿದರು. ರಾಜೀವ್ ಕಕ್ಕೆ ಪದವು ಕಾರ್ಯಕ್ರಮ ನಿರ್ವಹಿಸಿದರು.
ತಾಲೂಕಿನ ಕಾಂಗ್ರೇಸ್ ನ ಜಿ.ಪಂ. ಹಾಗೂ ತಾ.ಪಂ. ಅಭ್ಯರ್ಥಿಗಳು ವೇದಿಕೆಯ ಕೆಳಭಾಗದಲ್ಲಿ ಆಸೀನರಾಗಿದ್ದರು. ಕಾರ್ಯಕ್ರಮಕ್ಕೆ ಮೊದಲು ಗಾನಸುಧಾ ತಂಡದಿಂದ ದೇಶಭಕ್ತಿಗೀತೆಗಳ ರಸಮಂಜರಿ ಕಾರ್ಯಕ್ರಮ ನಡೆಯಿತು.

By suddi9

Leave a Reply

Your email address will not be published. Required fields are marked *