ಇನ್ನು ಮುಂದೆ ಬಿಸಿರೋಡ್ ನೋಪಾಕರ್ಿಂಗ್ನಲ್ಲಿ ವಾಹನಗಳನ್ನು ನಿಲ್ಲಿಸಿದರೆ ದಂಡ ಗ್ಯಾರಂಟಿ. ನೋ ಪಾಕರ್ಿಂಗ್ ಮತ್ತು ಪ್ಲೈ ಓವರ್ನ ಕೆಳಗೆ ವಾಹನಗಳನ್ನು ನಿಲ್ಲಿಸಬಾರದು ಮತ್ತು ಅಡ್ಡಾ ದಿಡ್ಡಿ ವಾಹನಗಳನ್ನು ನಿಲ್ಲಿಸಿದರೆ ನಿದರ್ಾಕ್ಷಿಣ್ಯವಾಗಿ ಕಾನೂನು ಪ್ರಕಾರ ಕೈಗೊಳ್ಳಲಾಗುವುದು ಎಂದು ಬಂಟ್ವಾಳ ನಗರ ಠಾಣಾ ಉಪನೀರೀಕ್ಷಕ ನಂದ ಕುಮಾರ್ ವಾಹನ ಚಾಲಕ ಮತ್ತು ಮಾಲಕರಿಗೆ ಸೂಚನೆ ನೀಡಿದ್ದಾರೆ.
ಅವರು ಇಂದು ನಗರ ಠಾಣೆಯಲ್ಲಿ ಖಾಸಗಿ ಟೆಂಪೋ , ರಿಕ್ಷಾ ಮತ್ತು ಇತರ ಸಣ್ಣ ವಾಹನ ಮಾಲಕರ ಮತ್ತು ಚಾಲಕರ ಸಭೆ ಕರೆದು ಈ ಸೂಚನೆ ನೀಡಿದ್ದಾರೆ. ಬಿ.ಸಿ.ರೋಡ್ನಲ್ಲ ನಿರಂತರವಾಗಿ ಉಂಟಾಗುವ ಟ್ರಾಫಿಕ್ ಸಮಸ್ಯೆಯನ್ನು ತಾತ್ಕಾಲಿಕವಾಗಿ ಶಮನಗೊಳಿಸುವ ನಿಟ್ಟಿನಲ್ಲಿ ಈ ಸೂಚನೆ ನೀಡಲಾಗಿದೆ. ವಾಹನ ಚಾಲಕರು ಕಡ್ಡಾಯವಾಗಿ ಖಾಕಿ ದರಿಸಬೇಕು, ಲೈಸೆನ್ಸ್ ಹೊಂದಿರಬೇಕು ಮತ್ತು ಟೂರಿಷ್ಟ್ ವಾಹನ ಚಾಲಕರಲ್ಲಿ ಬ್ಯಾಜಿ ಹೊಂದಿರಬೇಕು ಎಂದು ತಿಳಿಸಿದ್ದಾರೆ. ಪ್ರತಿ ರಿಕ್ಷಾಗಳಲ್ಲಿ ಚಾಲಕ ಹಿಂಬದಿಯಲ್ಲಿ ಅತನ ಗುರುತು ಚೀಟಿ ಮತ್ತು ಮೋಬೈಲ್ ನಂ. ಮತ್ತು ವಿಳಾಸವನ್ನು ಅಂಟಿಸಿರಬೇಕು. ಪ್ಲೈ ಓವರ್ ಅಡಿಯಲ್ಲಿ ಇರುವ ಅನಧಿಕೃತ ಗೂಡಂಗಡಿಯನ್ನು ತೆರವುಗೋಳಿಸಬೇಕು ಅದು ಟ್ರಾಫಿಕ್ ಜಾಮ್ ಗೆ ತೊಂದರೆಯಾಗುತ್ತದೆ ಎನ್ನುವ ಉದ್ದೇಶದಿಂದ ಪುರಸಭೆಗೆ ಪತ್ರವನ್ನು ಬರೆಯಲಾಗುವುದೆಂದು ತಿಳಿಸಿದರು
