ಸುದ್ದಿ 9 ಕೈಕಂಬ: ಅನೇಕ ಅಮೀಕ್ಷೆಗಳನ್ನು ಸುಳ್ಳಾಗಿಸಿದ ಬಿಜೆಪಿಯ ನಳೀನ್ ಕುಮಾರ್ ಕಟೀಲ್                             ಕಾಂಗ್ರೆಸ್   ಅಭ್ಯಥರ್ಿ ಜನಾರ್ದನ ಪೂಜಾರಿ ವಿರುದ್ಧ ಒಂದೂವರೆ ಲಕ್ಷಕ್ಕಿಂತಲೂ ಅಧಿಕ ಮತಗಳಿಂದ ಭರ್ಜರಿ ಜಯಭೇರಿ ಗಳಿಸಿದ್ದಾರೆ. ಆರಂಭದಿಂದಲೂ ಮುನ್ನಡೆ ಕಾಯುತ್ತಾ ಬಂದಿದ್ದ ನಳಿನ್ ಕುಮಾರ್ ಕಳೆದ ಬಾರಿಗಿಂತ ಹೆಚ್ಚು ಮತ ಗಳಿಸಿ ಎದುರಾಳಿಗಳಿಗೆ ಟಾಂಗ್ ನೀಡಿದ್ದಾರೆ.

nalin-kumar
ನಳಿನ್ ಕುಮಾರ್ ಕಟೀಲ್(ಬಿಜೆಪಿ)-642739
ಜನಾರ್ದನ ಪೂಜಾರಿ(ಕಾಂಗ್ರೆಸ್) -499030
ಹನೀಫ್ ಖಾನ್ (ಎಸ್ಡಿಪಿಐ) – 27254
ಎಂ ಆರ್ ವಾಸುದೇವ(ಆಮ್ ಆದ್ಮಿ ಪಾಟರ್ಿ) – 27254
ಕರಾವಳಿಯಲ್ಲಿ ಮೋದಿ ಮಾಡಿದ ಮೋದಿಗೆ ಎದುರಾಳಿಗಳು ತರಗೆಲೆಯಂತೆ ತತ್ತರಿಸಿ ಹೋಗಿದ್ದು ಜನಾರ್ದನ ಪೂಜಾರಿಯವರ ರಾಜಕೀಯ ಭವಿಷ್ಯವೇ ಮುಗಿದಂತಾಗಿದೆ.
ರೋಡ್ ಶೋ ಮಾಡಿದ ನಳಿನ್:
ನಳಿನ್ ಕುಮಾರ್ ಕಟೀಲ್ ವಿಜಯೀಭವ ಎಂದು ಘೋಷಣೆಯಾಗುತ್ತಿದ್ದಂತೆ ಕಾರ್ಯಕರ್ತರೊಂದಿಗೆ ಸಂಭ್ರಮಿಸಿದ ನಳಿನ್ ಕುಮಾರ್ ಕಟೀಲ್ ಕಾರ್ಯಕರ್ತರೊಂದಿಗೆ ಸೇರಿ ರೋಡ್ ಶೋ ನಡೆಸಿದರು. ಕಾರ್ಯಕರ್ತರ ಬೈಕ್ನಲ್ಲಿ ಕೂತು ಎಲ್ಲರಿಗೂ ಕೈಮುಗಿಯುತ್ತ ತನ್ನನ್ನು ಗೆಲ್ಲಿಸಿದ ಮತದಾರ ಪ್ರಭುಗಳಿಗೆ ಕೃತಜ್ಞತೆ ಸಲ್ಲಿಸಿದರು.
ಪಿವಿಎಸ್ ಬಳಿ ಪಟಾಕಿ ಸಿಡಿಸಿ ಸಂಭ್ರಮಿಸಿದ ಕಾರ್ಯಕರ್ತರು:

bc
ನಗರದ ಪಿವಿಎಸ್ ಸರ್ಕಲ್ ಬಳಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ನರೇಂದ್ರ ಮೋದಿ ಹಾಗೂ ಬಿಜೆಪಿಯ ಬಾವುಟವನ್ನು ಹಿಡಿದ ಕಾರ್ಯಕರ್ತರು ಡ್ಯಾನ್ಸ್ ಮಾಡಿ ಖುಷಿಪಟ್ಟರು.
ಆಂತರಿಕ ಬೇಗುದಿಯ ನಡುವೆ:
ನಳಿನ್ ಕುಮಾರ್ ಕಟೀಲ್ ಲಕ್ಷಾಂತರ ಮತಗಳಿಂದ ಭರ್ಜರಿ ವಿಜಯ ಸಾಧಿಸಿದ್ದರೂ ಆಂತರಿಕವಾಗಿ ಕೆಲವು ಬಿಜೆಪಿ ಮಂದಿಯಿಂದಲೂ ಭಾರೀ `ಕುಟ್ಲೆ’ ಅನುಭವಿಸಿದ್ದರು. ಇದಕ್ಕಾಗಿ ಇಬ್ಬರಿಗೆ ಖೊಕ್ ಕೂಡಾ ನೀಡಲಾಗಿತ್ತು. ನಂತರದ ದಿನಗಳಲ್ಲಿ ನಳಿನ್ ಕುಮಾರ್ ಕಟೀಲ್ ಅವರ ಮಾನಹಾನಿ ನಡೆಸಲು ಇಲ್ಲಸಲ್ಲದ ಆರೋಪ ಹೊರಿಸಿ ಮನಹಾನಿಯನ್ನೂ ಮಾಡಲಾಗಿತ್ತು.
ನಂಬಿನ ಅಪ್ಪೆ ಕೈ ಬುಡ್ಜಲ್:
`ಅಮ್ಮ ಕಟೀಲ್ ದ ಅಪ್ಪೆ ಎನ್ನ ಮಾನಹಾನಿ ಮಲ್ಪೆರೆ ಷಡ್ಯಂತ್ರ ನಡತೊಂದು ಉಂದು, ಇಂದೆಕ್ ಮಾತ ಈರೇ ಶಾಸ್ತಿ ಮಲ್ಪುಲೆ. ಎನನ್ ಮುಗಿಪೆರೆ ತೂಯಿನಕ್ಲೆಗ್ ಎಲ್ಲೆದ ಫಲಿತಾಂಶನೇ ಉತ್ತರ ಕೊರ್ಪುಂಡು…’ ಎಂದು ಚುನಾವಣೆ ಫಲಿತಾಂಶದ ಮುನ್ನ ಕಟೀಲು ದುರ್ಮೇಗಾಶ್ವರಿ ದೇವರಿಗೆ ಕೈ ಮುಗಿದಿದ್ದ ನಳಿನ್ ಕುಮಾರ್ ಅದರಂತೆ ಗೆದ್ದು ಬಂದಿರುವುದು ವಿಶೇಷ ಎನಿಸಿದೆ. ತನ್ನ ಗೆಲವು ಕರ್ಾಕರ್ತರದ್ದೇ ಎಂದು ಬಣ್ಣಿಸಿದ್ದಾರೆ.

2

4

5 (1)

6 (1)

7

 

By suddi9

Leave a Reply

Your email address will not be published. Required fields are marked *