ಬಂಟ್ವಾಳ: ಬಾಲಭವನ ಸೋಸೈಟಿ ಹಾಗೂ ಶಿಶು ಅಭಿವೃದ್ದಿ ಯೋಜನೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಬಂಟ್ವಾಳ ಇದರ ವತಿಯಿಂದ ಸ್ತ್ರೀ ಶಕ್ತಿ ಭವನದಲ್ಲಿ ನಡೆದ 10ದಿನಗಳ ಬೇಸಿಗೆ ಶಿಭಿರವನ್ನು ಶಿಭಿರಾಥರ್ಿಗಳು ಉದ್ಘಾಟಿಸಿದರು.

DSC_9567
ಜಿಲ್ಲಾ ಬಾಲವಿಕಾಸ ಅಕಾಡೆಮಿ ಸದಸ್ಯ ಮೌನೇಶ್ ವಿಶ್ವಕರ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಳಿಕ ಮಾತನಾಡಿ ಮಕ್ಕಳಲ್ಲಿ ಸೃಜನಾತ್ಮಕ ಚಿಂತನೆ ಬೆಳಸುವ ನಿಟ್ಟಿನಲ್ಲಿ ಇಂತಹ ಶಿಬಿರಗಳು ಪ್ರಮುಖ ಪಾತ್ರ ವಹಿಸುತ್ತದೆ ಶಿಬಿರದಲ್ಲಿ ಬಾಗವಹಿಸುವ ಮಕ್ಕಳು ಯಾವುದೇ ವಿಷಯದಲ್ಲಿ ಸಷ್ಟ ಉತ್ತರ ಸಿಗುವ ತನಕ ಪ್ರಶ್ನಿಸುವ ಗುಣವನ್ನು ಬೆಳೆಸಿಕೊಳ್ಳಬೇಕು. ಪ್ರಶ್ನಿಸುವ ಮೂಲಕ ಜ್ಞಾನ ಅಭಿವೃದ್ದಿ ಸಾದ್ಯ ಎಂದರು.
ಯಕ್ಷ ಲೋಕ ನಿದರ್ೇಶಕ ಗೋಪಾಲ ಅಂಚನ್ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು. ಮೇಲ್ವಿಚಾರಕಿ ಭಾರತಿ ಮುಖ್ಯ ಅತಿಥಿಯಾಗಿದ್ದರು ಗಾಯತ್ರಿ ಕಂಬಳಿ ಸ್ವಾಗತಿಸಿದರು. ಕಾತ್ಯಾಯಿನಿ ವಂದಿಸಿದರು. ಪುಷ್ಪಲತಾ ಕಾರ್ಯಕ್ರಮ ನಿರೂಪಿಸಿದರು

By suddi9

Leave a Reply

Your email address will not be published. Required fields are marked *