ಬಂಟ್ವಾಳ: ಇಲ್ಲಿನ ಪುರಸಭೆಯ ವತಿಯಿಂದ ನಗರೋತ್ಥಾನ ಯೋಜನೆಯಡಿ ಬಿ.ಸಿ.ರೋಡಿನ ತಾಲೂಕು ಕಚೇರಿ ಬಳಿಯಿಂದ ಕೈಕುಂಜೆರೆಗೆ ಸುಮಾರು 75 ಲಕ್ಷ ರುಪಾಯಿ ವೆಚ್ಚದಲ್ಲಿ ನಿಮರ್ಾಣಗೊಳ್ಳುತ್ತಿರುವ ದ್ವಿಪಥ ರಸ್ತೆಯ ಕಾಂಕ್ರೀಟಿಕರಣ ಕಾಮಗಾರಿ ಹಲವು ಸಮಯಗಳಿಂದ ಅರ್ಧದಲ್ಲೇ ಸ್ಥಗಿತಗೊಂಡಿರುವುದನ್ನು ಖಂಡಿಸಿ ಸಾರ್ವಜನಿಕರು ಗುರುವಾರ ದೀಢಿರ್ ರಸ್ತೆ ತಡೆ ನಡೆಸಿದರು.
ಸುಮಾರು ಅರ್ಧಗಂಟೆಗಳ ಕಾಲ ರಸ್ತೆ ತಡೆ ನಡೆಸಿದ ಸಾರ್ವಜನಿಕರು ಗುತ್ತಿಗೆ ಕಂಪೆನಿಯ ಎಂಜಿನಿಯರ್ಗೆ ದಿಗ್ಭಂದನ ಹಾಕಿ ಕಾಮಗಾರಿ ಮರು ಪ್ರಾರಂಭಿಸುವ ಬಗ್ಗೆ ಭರವಸೆ ನೀಡದ ಹೊರತು ಸ್ಥಳದಿಂದ ಕದಲುವುದಿಲ್ಲವೆಂದು ಪಟ್ಟು ಹಿಡಿದರು.
ಹಲವು ವರ್ಷಗಳಿಂದ ಡಾಮಾರು ಕಾಣದೆ ಹೊಂಡಗಳಿಂದ ತುಂಬಿ ಹೋಗಿದ್ದ ಬಿ.ಸಿ.ರೋಡು- ಕೈಕುಂಜೆವರೆಗೆಗಿನ ಸುಮಾರು ಅರ್ಧ ಕಿ.ಮೀ ಉದ್ದದ ರಸ್ತೆಯನ್ನು ದ್ವಿಪಥ ರಸ್ತೆಯಾಗಿ ಅಭಿವೃದ್ದಿ ಹಾಗೂ ಕಾಂಕ್ರೀಟಿಕರಣಗೊಳಿಸಲು ಮುಖ್ಯಮಂತ್ರಿಯವರ ನಗರೋತ್ಥಾನ ಯೋಜನೆಯಡಿ ಪುರಸಭೆ ಕಾಮಾಗರಿ ಕೈಗೊಂಡು ಗುತ್ತಿಗೆಯನ್ನು ಬೆಂಗಳೂರಿನ ರಾಜ್ ಸಂಸ್ಥೆಗೆ ವಹಿಸಿಕೊಟ್ಟಿತ್ತು. ಕಳೆದ ಅಕ್ಟೋಬರ್ 16ರಂದು ಸಚಿವ ರಮನಾಥ ರೈ ರಸ್ತೆ ಕಾಮಾಗಾರಿಗೆ ಶಿಲಾನ್ಯಾಸ ನೇರವೇರಿಸಿದ್ದರು. ಆದರೂ ಸುಮಾರು ಎರಡು ತಿಂಗಳ ಕಾಲ ವಿಳಂಬವಾಗಿ ಆರಂಭಗೊಂಡ ಕಾಮಾಗರಿ ಕುಂಟುತ್ತಾ ಸಾಗಿತ್ತು. ರಸ್ತೆ ವಿಭಾಜಕ, ಗಾರ್ಡನ್ ಸೇರಿದಂತೆ ದ್ವಿಪಥ ರಸ್ತೆ ನಿಮರ್ಿಸಲು ನಕಾಶೆ ಸಿದ್ದ ಪಡಿಸಲಾಗಿತ್ತಾದರೂ ಹಲವಾರು ತಾಂತ್ರಿಕ ಅಡೆತಡೆಗಳು, ಪರವಿರೋಧ ಹೇಳಿಕೆಗಳು ಕೂಡ ಈ ಸಂದರ್ಭದಲ್ಲಿ ಕೇಳಿ ಬಂದಿತ್ತು. ಅಂತೂ ಇಂತೂ ಒಂದು ಪಾಶ್ರ್ವದ ರಸ್ತೆ ಕಾಂಕ್ರಟೀಕರಣ ಕಾಮಾಗಾರಿ ಮುಗಿಸಿದ ಗುತ್ತಿಗೆ ಸಂಸ್ಥೆ ಇನ್ನೊಂದು ಪಾಶ್ರ್ವದ ಕಾಮಾಗರಿಯನ್ನು ಕೈಗೆತ್ತಿಕೊಳ್ಳದೆ ಸ್ಥಗಿತಗೊಳಿಸಿತ್ತು. ಇದರಿಂದ ಈ ಬಾಗದ ಜನತೆ ತೀವ್ರ ತೊಂದರೆ ಅನುಭವಿಸ ಬೇಕಾಯಿತು. ಇಂದೋ, ನಾಳೆಯೋ ಕಾಮಗಾರಿ ಮತ್ತೆ ಆರಂಭವಾಗುತ್ತದೆ ಎಂದು ಕಾದು ಕುಳಿತಿದ್ದ ಜನರು ನಿರಾಸೆ ಪಟ್ಟುಕೊಳ್ಳುವಂತಾಗಿತ್ತು. ಇದರಿಂದ ಆಕ್ರೋಶಗೊಂಡ ಸ್ಥಳೀಯರು ಕೌನ್ಸಿಲರ್ ಸುಗುಣ ಕಿಣಿ ನೇತೃತ್ವದಲ್ಲಿ ಪುರಸಭೆಗೆ ತೆರಳಿ ಮಾಹಿತಿ ಹಕ್ಕು ಕಾಯ್ದೆಯಡಿ ಕಾಮಾಗಾರಿಯ ಮಾಹಿತಿ ನೀಡುವಂತೆ ಒತ್ತಾಯಿಸಿದ್ದರು. ಮಾತ್ರವಲ್ಲದೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವಂತೆ ಒತ್ತಾಯಿಸಿದರು. ಈ ಸಂಧರ್ಭ ನೂತವಾಗಿ ನಿಮರ್ಾಣಗೊಂಡಿರುವ ರಸ್ತೆಯಲ್ಲಿ ವಾಹನ ತಡೆದು ಪ್ರತಿಭಟನೆ ನಡೆಸಿದ ಸಾರ್ವಜನಿಕರು ಎಂಜಿನಿಯರ್ ಮನೋಜ್ ಕುಮಾರ್ಗೆ ದಿಗ್ಭಂಧನ ಹಾಕಿದರು. ಮೆಸ್ಕಾಂ ವಿದ್ಯುತ್ ತಂತಿಗಳನ್ನು ತೆರವುಗೊಳಿಸದ ಹಿನ್ನಲೆಯಲ್ಲಿ ಇನ್ನೊಂದು ಪಾಶ್ರ್ವದಲ್ಲಿ ಕಾಂಕ್ರಿಟ್ ಕಾಮಾಗಾರಿ ನಡೆದಿಲ್ಲ ಎಂದು ಗುತ್ತಿಗೆ ಎಂಜನಿಯರ್ ತಿಳಿಸಿದರೂ ಪ್ರತಿಭಟನಕಾರರೂ ಸಮದಾನಗೊಂಡಿರಲಿಲ್ಲ. ಅಂತಿಮವಾಗಿ ಪರಿಸ್ಥಿತಿ ನಿಭಾಯಿಸಲು ಪೊಲೀಸರು ಮಧ್ಯ ಪ್ರವೇಶಿಸ ಬೇಕಾಯಿತು. ನಗರ ಠಾಣಾ ಎಸೈ ನಂದ ಕುಮಾರ್ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆಯಂತೆ ಕಾಮಗಾರಿ ನಡೆಯುವ ಸ್ಥಳದಲ್ಲಿ ಮಾಹಿತಿ ಫಲಕ ಅಳವಡಿಸಬೇಕು, ಮುಂದಿನ ಶನಿವಾರ ವಿದ್ಯುತ್ ಕಂಬಗಳ ಸ್ಥಳಾಂತರ ನಡೆಸಬೇಕು, ಸೋಮವಾರದಿಂದ ರಸ್ತೆಯ ಇನ್ನೊಂದು ಪಾರ್ಶದ ರಸ್ತೆ ಕಾಂಕ್ರೀಟಿಕರಣ ಹಾಗೂ ಚರಂಡಿ ಕಾಮಗಾರಿ ಆರಂಭಿಸ ಬೇಕು ಎನ್ನುವ ಭರವಸೆಯಂತೆ ರಸ್ತೆ ತಡೆ ಹಿಂಪಡೆಯಲಾಯಿತು.
ಪುರಸಭಾ ಸದಸ್ಯರಾದ ಗೋವಿಂದ ಪ್ರಭು, ಸುಗುಣ ಕಿಣಿ, ಸ್ಥಳೀಯರಾದ ಪ್ರೊ. ಅನಂತಪದ್ಮನಾಭ ರಾವ್, ರಾಮಚಂದ್ರರಾವ್, ವಿಶ್ವನಾಥ ಬಂಟ್ವಾಳ, ಪತ್ರಕರ್ತ ಫಾರೂಕ್ ಬಂಟ್ವಾಳ, ರಮೇಶ್ ಸಾಲ್ಯಾನ್, ವಿಠಲ ಬಂಗೇರಾ ಮತ್ತಿತರರು ಹಾಜರಿದ್ದರು.
