ಬಂಟ್ವಾಳ: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಡಾ.ಅಮ್ಮೆಂಬಳ ಬಾಳಪ್ಪನವರು ಗುರುವಾರ ಮಧ್ಯಾಹ್ನ ವಿಧಿವಶರಾದರು. ಅವರಿಗೆ 93 ವರ್ಷ ವಯಸ್ಸಾಗಿತ್ತು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಕಳೆದ ಮಾ.1ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಆರೋಗ್ಯದಲ್ಲಿ ಚೇತರಿಕೆ ಕಾಣದೆ ಆಸ್ಪತ್ರೆಯಲ್ಲಿಯೇ ನಿಧನರಾಗಿದ್ದಾರೆ.

1ಸಜೀಪಮುನ್ನೂರು ಗ್ರಾಮದ ನಾಗನವಳಚ್ಚಿನಲ್ಲಿರುವ ತನ್ನ ತಮ್ಮನ ಮನೆಯಲ್ಲೇ ಕೊನೆಯ ದಿನಗಳನ್ನು ಕಳೆದಿದ್ದ ಬಾಳಪ್ಪನವರು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
1922 ಫೆಬ್ರವರಿ 23ರಂದು ಜನಿಸಿದ ಡಾ. ಬಾಳಪ್ಪನವರ ಹುಟ್ಟೂರು ಬಂಟ್ವಾಳ ತಾಲೂಕಿನ ಅಮ್ಮೆಂಬಳವಾಗಿದ್ದರೂ ಸಜೀಪಮುನ್ನೂರು ಗ್ರಾಮದ ಮಾರ್ನಬೈಲಿನಲ್ಲಿರುವ ತಮ್ಮನ ಮನೆ ‘ಅಹಿಂಸಾ’ದಲ್ಲಿ ಬಾಳಸಂಜೆಯ ಕೊನೆಯ ದಿನಗಳನ್ನು ಕಳೆದಿದ್ದರು. ವಯೋಸಹಜವೆಂಬಂತೆ ತನ್ನ ನೆನಪಿನ ಶಕ್ತಿಯನ್ನು ಕಳಕೊಂಡಿದ್ದರೂ ಬಾಳಪ್ಪನವರು ಕೊನೆಯ ದಿನಗಳನ್ನು ಏಕಾಂತವಾಗಿಯೇ ಕಳೆದಿದ್ದರು. ಜೀವನದ ಸಂಧ್ಯಾ ಕಾಲದಲ್ಲಿ ನೆನಪಿನ ಶಕ್ತಿ ಕೈಕೊಟ್ಟ ಕಾರಣ ಮನೆಯಿಂದ ಮನೆಯಲ್ಲಿಯೇ ಬಂಧಿಯಾಗ ಬೇಕಾಯಿತು. ಹಾಗಾಗಿ ಅವರ ಮನೆಯ ಗೇಟು ಯಾವಾಗಲೂ ಬೀಗದಿಂದ ಬಾಯಿ ಮುಚ್ಚಿಕೊಂಡಿರುತ್ತಿತ್ತು. ಮನೆಯೊಳಗೆ ನೂರಾರು ಪ್ರಶಸ್ತಿ ಫಲಕಗಳು ಅವರ ಯಶೋಗಾಥೆಯನ್ನು ಮೌನವಾಗಿ ಸಾರುತ್ತವೆ. ಅವರ ಮುಖದ ವರ್ಚಸ್ಸು ವರ್ಷಗಳ ಹಿಂದಿನ ಸಾಧನೆಯ, ಶೋಧನೆಯ ದಾರಿಗಳನ್ನು ಪರಿಚಯಿಸುತ್ತಿತ್ತು.
ರಾಜಕೀಯ ಶಿಷ್ಯನಿಂದ ಅಭಿನಂದನಾ ಸಮ್ಮಾನ:
ಡಾ. ಅಮ್ಮೆಂಬಳ ಬಾಳಪ್ಪನವರ ಒಟ್ಟು ಸಾಧನೆಯನ್ನು ಗುರುತಿಸಿ 2006 ಅಕ್ಟೋಬರ್ 2ರಂದು ಸಾರ್ವಜನಿಕವಾಗಿ ಅಭಿನಂದಿಸಲಾಗಿತ್ತು. ಬಾಳಪ್ಪನವರ ರಾಜಕೀಯ ಶಿಷ್ಯ ಎಂದೇ ಗುರುತಿಸಿಕೊಂಡಿದ್ದ ಮಾಜಿ ರಕ್ಷಣಾ ಸಚಿವ ಜಾರ್ಜ್  ಫೆರ್ನಾಂಡೀಸ್ ಈ ಅಭಿನಂದನಾ ಕಾರ್ಯವನ್ನು ನೆರವೇರಿಸಿದ್ದರು.

By suddi9

Leave a Reply

Your email address will not be published. Required fields are marked *