ಬಂಟ್ವಾಳ: ತಾಲೂಕು ಪಂಜಿಕಲ್ಲು ಶ್ರೀ ಕ್ಷೇತ್ರ ಕೇಲ್ದೋಡಿ ಬ್ರಹ್ಮಶ್ರೀ ನಾರಾಯಣಗುರು ಭಜನಾ ಮಂಡಳಿ ಮತ್ತು ಶ್ರೀ ವೈದ್ಯನಾಥ ಕೊಡಮಣಿತ್ತಾಯಿ ಬ್ರಹ್ಮ ಬೈದರ್ಕಳ ಕ್ಷೇತ್ರ ಇದರ ಜಂಟಿ ಆಶ್ರಯದಲ್ಲಿ ಶ್ರೀ ಕ್ಷೇತ್ರ ಕೇಲ್ದೋಡಿಯಲ್ಲಿ ಜರಗಿದ ಭಜನಾ ಪರ್ಬ(ಹಬ್ಬ) ಸಂದರ್ಭದಲ್ಲಿ ಶ್ರೀ ಕ್ಷೇತ್ರ ಕೇಲ್ದೋಡಿಯ ಮತ್ತು ವಿವಿಧ ದೈವ-ದೇವಸ್ಥಾನಗಳ ಜೀಣರ್ೋದ್ಧಾರಕ್ಕೆ ಶ್ರಮಿಸಿದ ಉದ್ಯಮಿ ಪ್ರಕಾಶ ಅಂಚನ್ ಅವರನ್ನು ಭಜನ ಮಂಡಳಿ ವತಿಯಿಂದ ಸಮ್ಮಾನಿಸಲಾಯಿತು.
ಕೋಟಿ ಪೂಜಾರಿ ಕೇಲ್ದೋಡಿಗುತ್ತು, ಎಂ.ತುಂಗಪ್ಪ ಬಂಗೇರ, ಆನಂದ ಪೂಜಾರಿ, ರಾಮಕೃಷ್ಣ ಕಾಟುಕುಕ್ಕೆ , ಪಿ.ದೇವದಾಸ್ ಪ್ರಭು ಬಂಟ್ವಾಳ ಮತ್ತಿತರರು ಉಪಸ್ಥಿತರಿದ್ದರು
