ಬಂಟ್ವಾಳ: ತಾಲೂಕಿನ ಸಜೀಪಪಡು ಗ್ರಾಮದ ಕೋಟೆಕಣಿಯ ಯುವತಿಯೋರ್ವಳು ನಾಪತ್ತೆಯಾದ ಘಟನೆ ಮಂಗಳವಾರ ನಡೆದಿದೆ. ಕಾಣೆಯಾದ ಯುವತಿಯನ್ನು ಕೋಟೆಕಣಿ ಅಬ್ದುಲ್ ರಝಾಕ್ ಅವರ ಮಗಳು ಆಯಿಷಾ (20) ಎಂದು ಗುರುತಿಸಲಾಗಿದೆ. ದಿನಾಂಕ 17ರಂದು ರಾತ್ರಿ ಮನೆಯವರಲ್ಲರೂ ಊಟ ಮಾಡಿ ಮಲಗಿದ್ದು ಯುವತಿ ಅವಳ ಪ್ರತ್ಯೇಕ ಕೋಣೆಯಲ್ಲಿ ಮಲಗಿದ್ದಳು.
ಎಂದಿನಂತೆ ಬೆಳಿಗ್ಗೆ ಎದ್ದು ನೋಡುವಾಗ ಆಯಿಷಾ ಕೋಣೆಯಲ್ಲಿಲ್ಲದೆ ನಾಪತ್ತೆಯಾಗಿದ್ದಾಳೆ ಎಂದು ತಂದೆ ಗ್ರಾಮಾಂತರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಮೂರು ವರ್ಷಗಳ ಹಿಂದೆ ಮನೆಯಲ್ಲಿ ತಂದೆ ತಾಯಿ ಬೈದರು ಎಂಬ ಕಾರಣಕ್ಕಾಗಿ ಮನೆ ಬಿಟ್ಟು ಹೋಗಿದ್ದಳು. ಮತ್ತೆ ಈಗ ಅವಳು ಕಾಣೆಯಾಗಿರುವುದು ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗಿದೆ. ಇವಳಿಗೆ ಸ್ಥಳಿಯ ಯುವಕನೊಂದಿಗೆ ಪ್ರೇಮ ಸಂಬಂದ ಇತ್ತು ಎನ್ನಲಾಗಿದೆ . ಹಾಗಾಗಿ ಆಯಿಷಾ ಅವನೊಂದಿಗೆ ಹೋಗಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ

