ಬಂಟ್ವಾಳ : ಮೂಡುಪಡುಕೋಡಿ ಗ್ರಾಮದ ಬಾಂಬಿಲ ಶ್ರೀ ಅಗ್ನಿದುರ್ಗೆ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ನಾರಾಯಣ ಶಾಂತಿ ಪಟ್ಲಕೆರೆ ಅವರ ಪೌರೋಹಿತ್ಯದಲ್ಲಿ ಜ.14ರಿಂದ ಜ.16ರ ವರೆಗೆ ದೇವಸ್ಥಾನದಲ್ಲಿ ಜರಗಿದ ಶ್ರೀ ಅಗ್ನಿದುರ್ಗೆ ಬ್ರಹ್ಮಲಿಂಗೇಶ್ವರ, ಶ್ರೀ ಮಹಾವಿಷ್ಣು ಮತ್ತು ವಾಸುಕಿ ಸುಬ್ರಹ್ಮಣ್ಯ ನಾಗದೇವರ ವಾರ್ಷಿಕ ಮಹೋತ್ಸವ ಹಾಗೂ ದೈವಗಳ ನೇಮೋತ್ಸವ ಸಂದರ್ಭದಲ್ಲಿ ಉಮೇಶ್ ಕೋಟ್ಯಾನ್ ಆಲದಪದವು ಅವರ ನಿರ್ದೇಶನದ ಶ್ರೀ ಕ್ಷೇತ್ರದ ತುಳು ಭಕ್ತಿಗೀತೆ ಬಾಂಬಿಲದ ಬೊಲ್ಪು ಆಡಿಯೋ ಸಿ.ಡಿ.ಬಿಡುಗಡೆ ಕಾರ್ಯಕ್ರಮ ನಡೆಯಿತು.
1901pkt1
ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಿ.ಡಿ. ಬಿಡುಗಡೆಗೊಳಿಸಿದರು. ಜಾನಪದ ವಿದ್ವಾಂಸ ದಯಾನಂದ ಜಿ.ಕತ್ತಲ್ಸಾರ್ ಅವರು ಧಾರ್ಮಿಕ ಉಪನ್ಯಾಸ ನೀಡಿದರು.ಧರ್ಮದರ್ಶಿ ರಾಘವ ಸುವರ್ಣ,ಜಾತ್ರಾ ಸೇವಾ ಸಮಿತಿ ಗೌರವಾಧ್ಯಕ್ಷ ಎಂ.ತುಂಗಪ್ಪ ಬಂಗೇರ,ತಾ.ಪಂ.ಸದಸ್ಯರಾದ ಬಿ.ಪದ್ಮಶೇಖರ ಜೈನ್,ಸಂಪತ್ ಕುಮಾರ್ ಶೆಟ್ಟಿ, ಕಕ್ಕೆಪದವು ಬ್ರಹ್ಮ ಬೈದರ್ಕಳ ಗರಡಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲಿಯಾನ್, ಪಿಲಾತಬೆಟ್ಟು ಸಹಕಾರಿ ಬ್ಯಾಂಕ್ ಮಾಜಿ ಅಧ್ಯಕ್ಷ ಬೂಬ ಸಪಲ್ಯ, ಸಿದ್ದಕಟ್ಟೆ ವಿಜಯಾ ಬ್ಯಾಂಕ್ ಪ್ರಬಂಧಕ ಬೇಬಿ ಕುಂದರ್,ಜೀರ್ಣೋದ್ಧಾರ ಸಮಿತಿಯ ಪದಾಕಾರಿಗಳಾದ ಪ್ರಕಾಶ್ ಅಂಚನ್, ಪುರುಷೋತ್ತಮ ಅಂಚನ್, ವಿಶ್ವನಾಥ ಶಂಭೂರು, ಜಾತ್ರಾ ಸಮಿತಿಯ ಪದಾಕಾರಿಗಳಾದ ಶಂಕರ ಶೆಟ್ಟಿ, ಸತೀಶ್ ಆರ್.ಶೆಟ್ಟಿ, ದಿನೇಶ್ ಸಪಲ್ಯ, ಸತೀಶ್ ಸಪಲ್ಯ,ರಾಷ್ಟ್ರ ಪ್ರಶಸ್ತಿ ಪುರಸ್ಕೃತೆ ಕು.ಪಂಚಮಿ ಮಾರೂರು ಮತ್ತು ಕು.ಅದ್ವಿಕ ಶೆಟ್ಟಿ, ಜಾತ್ರಾ ಸೇವಾ ಸಮಿತಿ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಉದ್ಯಮಿ ಡಾ| ವರದರಾಜ ಪೈ ಮಾವಿನಕಟ್ಟೆ , ಗಣೇಶ್ ಕಜೆ, ಉಮೇಶ್ ಕೋಟ್ಯಾನ್ ಆಲದಪದವು, ಪಂಚಮಿ ಮಾರೂರು, ಅದ್ವಿಕ ಶೆಟ್ಟಿ ಸುರತ್ಕಲ್, ರಂಗ ಕಲಾವಿದ ದಯಾನಂದ ಕುಂತೂರು ಅವರನ್ನು ಸಮ್ಮಾನಿಸಲಾಯಿತು. ಶೌಕತ್ ಅಲಿ ಟೈಲರ್ ಆಲದಪದವು ಅವರು ಸಮ್ಮಾನ ಪತ್ರ ವಾಚಿಸಿದರು.
ಪುರುಷೋತ್ತಮ ಅಂಚನ್ ಅವರು ಸ್ವಾಗತಿಸಿದರು.ದಿನೇಶ್ ರಾಯಿ ಅವರು ಕಾರ್ಯಕ್ರಮ ನಿರೂಪಿಸಿದರು

By Suddi9

Leave a Reply

Your email address will not be published. Required fields are marked *