ಬಂಟ್ವಾಳ: ಸರ್ಕಾರಿ ಕಛೇರಿಯೊಂದು ಸೋಲಾರ್ ವಿದ್ಯುತ್‍ಉತ್ಪಾದನಾ ಘಟಕ ಆರಂಭಿಸಿ, ಸ್ವಯಂ ವಿದ್ಯುತ್ ಉತ್ಪಾದನೆಯ ದಿಟ್ಟ ಹೆಜ್ಜೆ ಇರಿಸಿದೆ.
ಪ್ರಾಕೃತಿಕ ವೈಪರೀತ್ಯದಿಂದಾಗಿ ಜಲವಿದ್ಯುತ್ ನ ಕೊರತೆ ಆಗಾಗ್ಗೆ ಕಾಣಿಸಿಕೊಂಡು ಇಡೀ ಲೋಕವೇ ಪರ್ಯಾಯ ಇಂಧನದತ್ತ ದೃಷ್ಟಿಹರಿಸಿದೆ. ಇಂತಹಾ ಸನ್ನಿವೇಶದಲ್ಲಿ ದಾನಿಗಳ ಹಾಗೂ ಶಿಕ್ಷಕರ ಸಹಕಾರದೊಂದಿಗೆ ಸುಮಾರು 2.98 ಲಕ್ಷ ರೂ ವೆಚ್ಚದಲ್ಲಿ ಈ ಘಟಕ ಸ್ಥಾಪಿಸಲಾಗಿದ್ದು, ಕಛೇರಿಯ ಮೇಲ್ಚಾವಣಿಯಲ್ಲಿ 3 ಕಿಲೋವ್ಯಾಟ್ ಸಾಮಥ್ರ್ಯದ ಸೋಲಾರ್ ಫಲಕಗಳನ್ನು ಅಳವಡಿಸಲಾಗಿದೆ. ದಿನವೊಂದಕ್ಕೆ 12 ರಿಂದ 14 ಯೂನಿಟ್‍ನಷ್ಟು ವಿದ್ಯುತ್ ಉತ್ಪಾದನೆಯ ನಿರೀಕ್ಷೆ ಇರಿಸಲಾಗಿದೆ.
IMG-20160118-WA0038

IMG-20160118-WA0039

IMG-20160118-WA0040

IMG-20160118-WA0042ವಿದ್ಯುತ್ ಉತ್ಪಾದನೆಯಾಗುತ್ತಿದ್ದಂತೆ ಮೆಸ್ಕಾಂ ಲೈನ್‍ಗೆ ವಿತರಣೆಯಾಗುತ್ತದೆ. ವಿದ್ಯುತ್ ಉತ್ಪಾದನೆಯಾಗದ ಹೊತ್ತಿನಲ್ಲಿ ಕಾಲೇಜಿಗೆ ಹೆಚ್ಚುವರಿ ವಿದ್ಯುತ್ ಬೇಕಾದರೆ ಮೆಸ್ಕಾಂನಿಂದ ಪಡೆಯಬಹುದು. ಈ ಘಟಕದಲ್ಲಿ ಉತ್ಪಾದನೆಯಾದ ವಿದ್ಯುತ್ ಅನ್ನು ಮೆಸ್ಕಾಂ ಯೂನಿಟ್‍ಗೆ 9.60ರೂ ನೀಡಿ ಈ ಘಟಕದಿಂದ ವಿದ್ಯುತ್ ಖರೀದಿಸುತ್ತದೆ.
ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ ತಿಂಗಳಿಗೆ ಸುಮಾರು 350 ಯೂನಿಟ್ ವಿದ್ಯುತ್ ನ ಅವಶ್ಯಕತೆ ಇದ್ದು, ಇಷ್ಟು ವಿದ್ಯುತ್ ಈ ಘಟಕದಲ್ಲೇ ಉತ್ಪಾದನೆಯಾಗಿ, ಹೆಚ್ಚುವರಿ ವಿದ್ಯುತ್ ಅನ್ನು ಮೆಸ್ಕಾಂ ಖರೀದಿಸಲಿದೆ. ವಿಧಾನಪರಿಷತ್ ಸದಸ್ಯ ಐವನ್ ಡಿ’ಸೋಜ ಅವರು ನೀಡಿದ ಪತ್ರದ ಸಲಹೆಯಿಂದ ಪ್ರಭಾವಿತರಾಗಿ ಈ ಕಾರ್ಯವನ್ನು ಅನುಷ್ಠಾನಗೊಳಿಸಲಾಗಿದೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ ತಿಳಿಸಿದ್ದಾರೆ.
ಪರಿಸರ ಸ್ನೇಹಿಯಾದ ಇಂತಹ ವಿದ್ಯುತ್ ಉತ್ಪಾದನೆಯಿಂದ ವಿದ್ಯುತ್‍ನಲ್ಲಿ ಸ್ವಾವಲಂಬನೆ ಸಾಧಿಸಲು ಸಾಧ್ಯವಾಗಿದ್ದು, ಸೌರಶಕ್ತಿಯಿಂದ ಪರಿಸರಕ್ಕೆ ಯಾವುದೇ ರೀತಿಯ ಹಾನಿಯಿಲ್ಲ. ಕಟ್ಟಡಗಳ ಮೇಲ್ಛಾವಣಿಯಲ್ಲಿ ಸೌರಶಕ್ತಿ ಘಟಕವನ್ನು ಒಮ್ಮೆ ಅಳವಡಿಸಿದರೆ ನಂತರ ಯಾವುದೇ ನಿರ್ವಹಣಾ ವೆಚ್ಚ ಇರುವುದಿಲ್ಲ.

By Suddi9

Leave a Reply

Your email address will not be published. Required fields are marked *