ವಿಟ್ಲ: ಕಳಂಜಿಮಲೆ 35 ಹೆಕ್ಟೇರ್‍ರಕ್ಷಿತಾರಣ್ಯದಲ್ಲಿ 8.7ಎಕ್ರೆ ಹೊತ್ತಿಉರಿದಘಟನೆಉಕ್ಕುಡ – ಕನ್ಯಾನರಸ್ತೆಯಆನೆಪದವು ಎಂಬಲ್ಲಿ ಭಾನುವಾರರಾತ್ರಿ ನಡೆದಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಜತೆಗೆ 500 ಕ್ಕೂಅಧಿಕ ಮಂದಿ ಸ್ಥಳೀಯ ನಿವಾಸಿಗಳ 5 ತಾಸಿನ ಸತತಕಾರ್ಯಾಚರಣೆಯ ಬಳಿಕ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕನ್ಯಾನದಿಂದ ವಿಟ್ಲಕಡೆಗೆ ಸಾಗುತ್ತಿದ್ದ ಬೈಕ್ ಸವಾರೊಬ್ಬರುಆನೆಪದವು ಸಮೀಪ ರಸ್ತೆ ಬದಿಯಲ್ಲಿ ಬೆಂಕಿ ಉರಿಯುತ್ತಿರುವ ಬಗ್ಗೆ ಉಕ್ಕುಡಅರಣ್ಯ ಇಲಾಖೆ ಚೆಕ್ ಪೆÇೀಸ್ಟ್‍ನಲ್ಲಿ ತಿಳಿಸಿದ್ದಾರೆ.ತಕ್ಷಣವಿಟ್ಲಉಪವಲಯಅರಣ್ಯಾಧಿಕಾರಿಎಸ್‍ಎನ್ ಲೋಕೇಶ್, ಅರಣ್ಯರಕ್ಷಕರಾದಪದ್ಮನಾಭ, ರವಿ ಅವರುಕಾರ್ಯಾಚರಣೆಗೆ ಇಳಿದಿದ್ದಾರೆ. ಬೆಂಕಿ ನಂದಿತುಎನ್ನುವಷ್ಟರಲ್ಲಿ ಗಾಳಿಯ ವೇಗ ಹೆಚ್ಚಾಗಿ ಬೆಂಕಿಯ ಕಿಡಿಗಳು ಹಾರಿ ಹಲವು ಕಡೆಯಲ್ಲಿಒಣಗಿದ ಮುಳಿ ಹುಲ್ಲಿನ ಮೇಲೆ ಬಿದ್ದಿದೆ.ಇದರಿಂದ ಹಲವು ಕಡೆಗಳಲ್ಲಿ ಬೆಂಕಿ ಉರಿಯಲಾರಂಭಿಸಿತು.ಗುಡ್ಡಕ್ಕೆ ಬೆಂಕಿ ಬಿದ್ದ ಮಾಹಿತಿ ತಿಳಿದ ಸಾರ್ವಜನಿಕರು ಸ್ಥಳಕ್ಕೆ ಬಂದುಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಸಹಕರಿಸಿದರು.

VIL_18 JAN_3

VIL_18 JAN_4

VIL_18 JAN_6

ಬೆಂಕಿ ರಸ್ತೆಯ ಬದಿಯಿಂದ ಹಿಡಿದು, ಗುಡ್ಡ ಮೇಲ್ಬಾಗದವರೆಗೆ ಹಂತ ಹಂತವಾಗಿ ವ್ಯಾಪಿಸುತ್ತಿತ್ತು.ಬಂಟ್ವಾಳ ಹಾಗೂ ಪುತ್ತೂರುಅಗ್ನಿಶಾಮಕ ದಳದವರಿಗೆ ಬೆಂಕಿ ಗುಡ್ಡದಲ್ಲಿ ವ್ಯಾಪಿಸುತ್ತಿರುವ ಬಗ್ಗೆ ಮಾಹಿತಿ ನೀಡಲಾಯಿತು.ಸುಮಾರು 10 50ಕ್ಕೆ ಬಂಟ್ವಾಳದ ಒಂದು ವಾಹನ ಸ್ಥಳಕ್ಕೆ ತಲುಪುತ್ತದೆ.ಆದರೆಕಾರ್ಯಾಚರಣೆ ಮಾಡಲುರಸ್ತೆ ಸರಿಯಿಲ್ಲ ಎಂಬ ನೆಪವನ್ನು ಹೇಳಿ ವಾಹನ ರಸ್ತೆಯ ಬದಿಯಲ್ಲಿ ಉಳಿಯುತ್ತದೆ.ಸಾರ್ವಜನಿಕರುಅಗ್ನಿಶಾಮಕ ಸಿಬ್ಬಂದಿಗೆ ಹಿಡಿ ಶಾಪ ಹಾಕುತ್ತಾಕೈಗೆಸಿಕ್ಕಿದ ಮರದ ಗೆಲ್ಲುಗಳನ್ನು, ಸಸಿಗಳ ಚಿಗುರುಗಳನ್ನು ಹಿಡಿದು ಬೆಂಕಿಯನ್ನು ನಂದಿಸಲು ಹರ ಸಾಹಸ ಪಡುತ್ತಾರೆ.ಗಾಳಿ ಬರುತ್ತಿದ್ದಂತೆ ಬೆಂಕಿ ತೀವ್ರವಾಗುತ್ತಿತ್ತಾದರೂ ಸಾರ್ವಜನಿಕರ ಸಮಯ ಪ್ರಜ್ಞೆಯಿಂದ ಬೆಳಗ್ಗಿನ ಜಾವ 2 30ರ ಸುಮಾರಿಗೆಉರಿಯುತ್ತಿದ್ದ ಬೆಂಕಿಯನ್ನುಸಂಪೂರ್ಣನಂದಿಸುವಲ್ಲಿ ಯಶಸ್ವಿಯಾದರು.

By Suddi9

Leave a Reply

Your email address will not be published. Required fields are marked *