ಬಂಟ್ವಾಳ : ಕುಡಿಯುವ ನೀರು ಸರಬರಾಜು ಯೋಜನೆ 2015-16ನೇ ಸಾಲಿನ ಟಾಸ್ಕ್ ಪೋರ್ಸ್ ಯೋಜನೆಯಡಿಯಲ್ಲಿ ಕಳ್ಳಿಗೆ ಗ್ರಾಮದ ಜ್ಯೋತಿಗುಡ್ಡೆ ಗುಂಡಿ ಎಂಬಲ್ಲಿಗೆ ಕುಡಿಯುವ ನೀರಿನ ಸರಬರಾಜು ಯೋಜನೆಯ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೆರವೇರಿಸಿದರು.

ಕಳ್ಳಿಗೆ ಗ್ರಾಮ ಪಂ.ಅಧ್ಯಕ್ಷೆ ರತ್ನಾ , ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ , ಮಮತಾ ಗಟ್ಟಿ, ಭೂ ನ್ಯಾಯಮಂಡಳಿ ಸದಸ್ಯ ದಿವಾಕರ ಪಂಬದಬೆಟ್ಟು, ಗ್ರಾ.ಪಂ.ಸದಸ್ಯ ಮಧುಸೂದನ್ ಶೆಣೈ, ಇಂಜಿನಿಯರುಗಳಾದ ಜಿ.ನರೇಂದ್ರಬಾಬು, ಕೆ.ಪಿ.ಗಿರೀಶ್, ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.
