ಬಂಟ್ವಾಳ: ಸ್ವಚ್ಚತೆಯ ದೃಷ್ಟಿಯಿಂದ ಯಾವ ಕ್ರಮಗಳನ್ನು ಕೈಗೊಂಡರು, ಕಾರ್ಯಕ್ರಮಗಳನ್ನು ಹಮ್ಮಿಕೊಂಡರು ಜನ ಅದಕ್ಕೆ ಸ್ಪಂದನೆ ನೀಡುವುದು ಕಡಿಮೆ ಎನ್ನಬಹುದು. ಅದಕ್ಕೆ ಉದಾಹರಣೆ ಬಂಟ್ವಾಳ. ನೇತ್ರಾವತಿ ನೀರನ್ನು ಕಲುಷಿತಗೊಳಿಸಬಾರದು ಅದನ್ನು ಕುಡಿಯಲು ಉಪಯೋಗಿಸಲಾಗುತ್ತದೆ ಎಂದು ಜಿಲ್ಲಾಡಳಿತದ ಅದೇಶವಿದ್ದರೂ ಅದನ್ನು ದಿಕ್ಕರಿಸಿ ಇಲ್ಲಿ ನೀರನ್ನು ಮಲಿನಗೊಳಿಸುವುದು ದಿನೇ ದಿನೇ ಜಾಸ್ತಿಯಾಗುತ್ತದೆ. ನದೀ ನೀರಿನಲ್ಲಿ ಸ್ನಾನ ಮಾಡಬಾರದು, ದನಗಳನ್ನು ತೊಳೆಯಬಾರದು, ಪಾತ್ರೆ ತೊಲೆಯಬಾರದು ಎಂದು ಜಿಲ್ಲಾಧಿಕಾರಿಯವರ ಆದೇಶದ ಬೋರ್ಡನ್ನು ತಹಶಿಲ್ದಾರರು ಹಾಕಿದ್ದಾರೆ. ಜೊತೆಗೆ ಪುರಸಭೆ ಕೂಡಾ ಇದೇ ರೀತಿಯ ಬೋರ್ಡನ್ನು ಇಲಲಿ ಹಾಕಿದೆ. ಆದರೆ ಬೋರ್ಡು ಹಾಕಿದ ಬಳಿಕ ಪುರಸಭೆಯ ಮುಖ್ಯಾಧಿಕಾರಿ ಮತ್ತು ದಂಡಾಧಿಕಾರಿಯವರು ಅತ್ತ ಕಡೆ ಹೋಗಿಲ್ಲ ಎಂಬುದಕ್ಕೆ ಇದೇ ಸಾಕ್ಷಿಯಾಗಿದೆ. ದ.ಕ.ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಬಿಹಾರ ಮೂಲದ ವ್ಯಕ್ತಿಗಳು ಮತ್ತು ಕುಟುಂಬವೇ ಇಲ್ಲಿ ಬೀಡು ಬಿಟ್ಟಿವೆ. ಕಟ್ಟಡ ಕೆಲಸಕ್ಕೆ ಅವರೇ ಬೇಕು. ರಸ್ತೆ ಕೆಲಸದಿಂದ ಹಿಡಿದು ಎಲ್ಲಾ ಕೆಲಸಕ್ಕೆ ಇಲ್ಲಿನ ಗುತ್ತಿಗೆದಾರರು ಅವರನ್ನು ಕರೆ ತರುತ್ತಾರೆ.
7

1

2

3

4

5

6ಗುತ್ತಿಗೆದಾರರು ಕಡಿಮೆ ಸಂಬಳ ನೀಡಿ ಅವರನ್ನು ದ.ಕ.ಜಿಲ್ಲೆಗೆ ತರಿಸಿ ಅವರನ್ನು ದುಡಿಸುತ್ತಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಅವರಿಗೆ ಕೆಲಸ ಮಾತ್ರ ಕೊಡುತ್ತಾರೆ ರಾತ್ರಿ ತಂಗಲು ಸರಿಯಾದ ಮನೆ ನೀಡದೆ ಅವರು ಸಿಕ್ಕಿದಲ್ಲಿ ರಾತ್ರಿ ಕಳೆಯುತ್ತಾರೆ ಎಂದು ದೂರುಗಳು ಕೇಳಿ ಬರುತ್ತದೆ. ಬಂಟ್ವಾಳದ ನೇತ್ರಾವತಿ ನದಿಯ ಗೂಡಿನ ಬಳಿ ಸುಣ್ಣದ ಗೂಡಿನಲ್ಲಿ ಇದೇ ರೀತಿ ಅಸುಪಾಸಿನಲ್ಲಿ ಕಟ್ಟಡ ಕೆಲಸಕ್ಕೆಂದು ಬಂದ ನೂರಾರು ಕಾರ್ಮಿಕರಿದ್ದಾರೆ. ಸ್ಥಳಿಯ ಗುತ್ತಿಗೆ ದಾರ ಹೊರ ಜಿಲ್ಲೆ ಮತ್ತು ರಾಜ್ಯಗಳಿಂದ ನೂರಾರು ಮಂದಿಯನ್ನು ಕಟ್ಟಡ ಕೆಲಸಕ್ಕೆ ಕರೆಸಿಕೊಂಡಿದ್ದಾರೆ, ಆದರೆ ಅವರಿಗೆ ವಾಸ ಮಾಡಲು ಸರಿಯಾದ ವ್ಯವಸ್ಥೆ ಮಾಡದೇ ಅವರು ನೇತ್ರಾವತಿ ನದಿಯನ್ನು ಬಳಸಿಕೊಳ್ಳುತ್ತಿದ್ದಾರೆ. ಅವರಿಗೆ ಪುರಸಭೆಯ ಜಾಗದಲ್ಲಿ ನಿರ್ಮಿಸಲಾದ ಸುಣ್ಣದ ಗೂಡೇ ವಾಸ ಸ್ಥಳ. ಅವರಿಗೆ ಇಲ್ಲಿ ಶೌಚಾಲಯವಿಲ್ಲ ಹಾಗಾಗಿ ನೇತ್ರಾವತಿ ನದಿಯೇ ಇವರಿಗೆ ಶೌಚಾಲಯ, ಬಟ್ಟೆ ತೊಳೆಯಲು ನದಿಯೇ ಆಸರೆ. ಪಾತ್ರಯಿಂದ ಹಿಡಿದು, ಸ್ನಾನ ಹೀಗೆ ದೈನಂದಿನ ಎಲ್ಲಾ ಚಟುವಟಿಕೆಗಳು ಇಲ್ಲೇ ನಡೆಯುತ್ತದೆ. ಜೊತೆಗೆ ರಾತ್ರಿ ಹೊತ್ತಲ್ಲಿ ಇದೇ ಜಾಗದಲ್ಲಿ ಅನೈತಿಕಚಟುವಟಿಕೆ ಕೂಡಾ ನಡೆಯುತ್ತದೆ. ರಾತ್ರಿ ಹೊತ್ತಲ್ಲಿ ಗಲಾಟೆಗಳು ನೆಡದು ಪರಿಸರವನ್ನು ಕೆಡಿಸುವ ಕೆಸಗಳು ಆಗುತ್ತಿವೆ. ಅಲ್ಲದೆ ನೇತ್ರಾವತಿ ನದಿ ಕಿನಾರೆಯನ್ನು ಕಲುಷಿತಗೊಳಿಸಿ ರೋಗ ಬರುವ ಸಾಧ್ಯತೆಗಳಿವೆ ಆದಷ್ಟು ಬೇಗ ಸಂಬಂದಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕು ಎಂದು ಪರಿಸರದ ನಿವಾಸಿ ಉದ್ಯಮಿ ಪಿ.ಎಸ್.ಯೂಸುಫ್ ಮತ್ತು ಸ್ಥಳಿಯರು ಮಾಧ್ಯಮದ ಮೂಲಕ ಕೇಳಿಕೊಂಡಿದ್ದಾರೆ.

By suddi9

Leave a Reply

Your email address will not be published. Required fields are marked *