ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಸಾಂಸ್ಕøತಿಕ ಕಾರ್ಯಕ್ರದ ಅಂಗವಾಗಿ ವಿ ಆರ್ ಸಿ ವಿಟ್ಲ ಇವರ ವಿಟ್ಲೋತ್ಸವದ ಪ್ರಯುಕ್ತ ಶ್ರೀ ಕಟೀಲು ಯಕ್ಷಗಾನ ಮೇಳದವರಿಂದ ನಡೆದ ಮೋಕ್ಷ ಸಂಗ್ರಾಮ ಯಕ್ಷಗಾನ ಬಯಲಾಟ ಸಂದರ್ಭದಲ್ಲಿ ಯಕ್ಷಗಾನ ಕಲಾವಿದರಾದ ಪಟ್ಲ ಸತೀಶ್ ಶೆಟ್ಟಿ, ಶ್ರೀನಿವಾಸ ಗೌಡ ಬಳ್ಳಮಂಜ, ರಘು ಶೆಟ್ಟಿ ನಾಳ ಹಾಗೂ ಅಮ್ಮುಂಜೆ ಮೋಹನ್ ಕುಮಾರ್ ಇವರನ್ನು ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಸನ್ಮಾನಿಸಿದರು. ಮತ್ತು ಪುಷ್ಪರಾಜ್ ಶೆಟ್ಟಿಗಾರ್ ರವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ವಿ ಆರ್ ಸಿ ಯ ರಮಾನಾಥ ವಿಟ್ಲ, ವಿಟ್ಲ ಅರಮನೆಯ ಕೃಷ್ಣಯ್ಯ ಕೆ, ಕಿರಣ್ ಉಪಸ್ಥಿತರಿದ್ದರು. ನಟೇಶ್ ವಿಟ್ಲ ಕಾರ್ಯಕ್ರಮ ಸಂಯೋಜಿಸಿದರು.
SHV_9890

By suddi9

Leave a Reply

Your email address will not be published. Required fields are marked *