ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ನಾಟಿಬೀದಿ ಶ್ರೀ ಕೋದಂಡರಾಮಚಂದ್ರ ದೇವಸ್ಥಾನದಲ್ಲಿ ಇದೇ 17ರಂದು ನಡೆಯಲಿರುವ ದೇವರ ಪುನರ್ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಪ್ರಯುಕ್ತ ಇಲ್ಲಿನ ಶೇಡಿಗುರಿ-ನಾಟಿ ರಸ್ತೆಗೆ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ತುರ್ತು ಕೈಗೊಂಡ ಡಾಂಬರೀಕರಣ ಕಾಮಗಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು.
ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಬ್ಬಾಸ್ ಆಲಿ, ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಉಮೇಶ ಬೋಳಂತೂರು, ಪ್ರಮುಖರಾದ ಎನ್.ಪ್ರಕಾಶ ಕಾರಂತ, ಬಿ.ಎಚ್.ಖಾದರ್, ಆಲ್ಬರ್ಟ್ ಮಿನೇಜಸ್ ಮತ್ತಿತರರು ಉಪಸ್ಥಿತರಿದ್ದರು.

