ಬಂಟ್ವಾಳ: ತಾಲೂಕಿನಲ್ಲಿ ಸುಮಾರು 800 ವರ್ಷಗಳಿಗೂ ಮಿಕ್ಕಿ ಪುರಾತನ ಹಿನ್ನೆಲೆ ಹೊಂದಿರುವ ಪ್ರಸಿದ್ಧ ಅರಳ ಶ್ರೀ ಗರುಡ ಮಾಹಾಕಾಳಿ ದೇವಸ್ಥಾನದಲ್ಲಿ ಫೆ.17ರಿಂದ ನಡೆಯುವ ವಾರ್ಷಿಕ ಜಾತ್ರಾ ಮಹೋತ್ಸವ ಬಗ್ಗೆ ಗುರುವಾರ ಸಮಾಲೋಚನಾ ಸಭೆಯು ದೇವಳದ ಸಭಾಂಗಣದಲ್ಲಿ ನಡೆಯಿತು.
ದೇವಳದ ಆಡಳಿತ ಮೊಕ್ತೇಸರ, ನಿವೃತ್ತ ಪ್ರಾಂಶುಪಾಲ ಎ.ರಾಜೇಂದ್ರ ಶೆಟ್ಟಿ ಮಾತನಾಡಿ, ಅರಳ ಮತ್ತು ಕೊಯಿಲ ಎರಡು ಗ್ರಾಮಗಳಿಗೆ ಸೇರಿದ ಈ ದೇವಸ್ಥಾನವು ಕಳೆದ 11ವರ್ಷಗಳ ಹಿಂದೆಯಷ್ಟೇ ಸಂಪೂರ್ಣ ಪುನರ್‍ನವೀಕರಣಗೊಂಡು ಬ್ರಹ್ಮಕಲಶೋತ್ಸವ ನಡೆದಿದೆ. ಮುಂಬರುವ 2017ರಲ್ಲಿ 12 ವರ್ಷ ಪೂರ್ಣಗೊಂಡು ಮತ್ತೆ ದೇವರ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವಕ್ಕೆ ಭಕ್ತರು ಸಿದ್ಧರಾಗಬೇಕಿದೆ ಎಂದರು. ಇಲ್ಲಿನ ದೇವಳದ ಎದುರು ಭಾಗದಲ್ಲಿ ದೇವರ ವಾರ್ಷಿಕ ಜಾತ್ರೆ ಮತ್ತು ಪರಿವಾರ ದೈವದ ನೇಮೋತ್ಸವ ನಡೆಸಲು ಸ್ಥಳಾವಕಾಶ ತೀರಾ ಕಡಿಮೆ ಇರುವ ಹಿನ್ನೆಲೆಯಲ್ಲಿ ದೇವಳಕ್ಕೆ ಖಾಸಗಿ ಜಮೀನು ಖರೀದಿಸಲು ಆಡಳಿತ ಮಂಡಳಿ ನಿರ್ಧರಿಸಿದ್ದು, ಇದಕ್ಕೆ ಭಕ್ತರಿಂದ ಅವರು ಆರ್ಥಿಕ ನೆರವು ಯಾಚಿಸಿದರು.

14BTL-ARALA
ಕ್ಷೇತ್ರದ ಅರ್ಚಕ ಚಂದ್ರಶೇಖರ ಭಟ್, ಪ್ರಮುಖರಾದ ಅನಂತರಾವ್ ಕೊಯಿಲಗುತ್ತು, ಎಸ್.ದಿವಾಕರ ಶೆಟ್ಟಿ, ಪದ್ಮನಾಭ ಸಾಲ್ಯಾನ್, ನಾರಾಯಣ ನಾಯ್ಕ, ರವಿ ಅರಸ, ನಾಗೇಶ ಮಾಣಾಯಿ, ಯಶೋಧರ ರೈ ದೇರಾಜೆ, ಮೋಹನ್ ಕೆ.ಶ್ರೀಯಾನ್ ಕೈತ್ರೋಡಿ, ಮಾಧವ ಸುವರ್ಣ ಎರ್ಮಾಳ್ ಮತ್ತಿತರರು ಉಪಸ್ಥಿತರಿದ್ದರು.
ದೇವಳದ ಟ್ರಸ್ಟಿ, ಅರಳ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜಗದೀಶ ಆಳ್ವ ಅಗ್ಗೊಂಡೆ ಸ್ವಾಗತಿಸಿ, ಉಮೇಶ ಅರಳ ವಂದಿಸಿದರು.

By Suddi9

Leave a Reply

Your email address will not be published. Required fields are marked *