*ಸಹೋಧರತೆ ಸಹಬಾಳ್ವೆಯಿಂದ ಸಮಾಜದಲ್ಲಿ ಶಾಂತಿ*-ವಂ|ಡಾ| ಅಲೋಶಿಯಸ್ ಪಾವ್ಲ್ ಡಿಸೋಜಾ
ಬಜಪೆ:ಮತಬೇದಗಳನ್ನು ಮರೆತು ಸಹೋಧರತೆ-ಸಹಬಾಳ್ವೆಯಿಂದ ಸಹಜೀವನ ನಡೆಸಿದಾಗ ಮುಂದಿನ ಪೀಳಿಗೆಗೆ ಸಾಮರಸ್ಯದ ಬದುಕಿಗೆ ಮಾದರಿ ಎನಿಸುತ್ತದೆ. ಪೆರ್ಮುದೆ ಚರ್ಚ್ನ ಕಾರ್ಯಕ್ರÀಮಗಳಲ್ಲಿ ಅನ್ಯದರ್ಮಿಯರ ಪಾಲ್ಗೊಳ್ಳುವಿಕೆಯ ಉಸ್ತಾಹ ಮುದ ನೀಢಿದೆ ಸಮಾಜದಲ್ಲಿನ ಅಶಾಂತಿಯನ್ನು ಹೋಗಲಾಡಿಸಲು ಇದು ಪರಿವರ್ತನೆಯ ಸಂಕೇತವಾಗಲಿ, ಎಂದು ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ವಂದನೀಯ ಡಾ| ಅಲೋಶಿಯಸ್ ಪಾವ್ಲ್ ಡಿಸೋಜಾ ಅವರು ಹೇಳಿದರು.
ಪೆರ್ಮುದೆ ಸಂತ ಸ್ನಾನಿಕ ಯೋಹಾನ್ನ ದೇವಾಲಯದ ಸ್ವರ್ಣ ಮಹೋತ್ಸವ ಸಂಭ್ರಮದ ಸಮಾರಂಭದಲ್ಲಿ ಬುಧುವಾರ ಅವರು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
*ಸ್ವರ್ಣ ಸಂಭ್ರಮ*ದ ಸ್ಮರಣ ಸಂಚಿಕೆಯನ್ನು ಅನಾವರಣಗೊಳಿಸಿ ಸಮಾಜದ ನಾನಾ ಕ್ಷೇತ್ರಗಳ ಸಾಧಕರನ್ನು ಗೌರವಿಸಿದ ಸಂಸದ ನಳಿನ್ ಕುಮಾರ್ ಕಟೀಲು ಅವರು ಮಾತನಾಡಿ-*ಶತಮಾನದಿಂದಲೂ ಕೃಷಿಯ ಬೆಳವಣಿಗೆಗೆ, ಶೈಕ್ಷಣಿಕ ಕ್ರಾಂತಿ, ವೈದ್ಯಕೀಯ ಹಾಗೂ ಆರ್ಥಿಕತೆಯ ಪುನಶ್ಚೇತನದ ಮಟ್ಟಿಗೆ ಜಿಲ್ಲೆಯಲ್ಲಿ ಕ್ರೈಸ್ತ ಸಮುದಾಯದ ಪಾತ್ರ ಅತ್ಯಂತ ಉಲ್ಲೇಖನೀಯವಾದುದು. ಧರ್ಮ ಚಿಂತÀನೆಯೊಂದಿಗೆ ನಾಡಿನ ಸಂಸ್ಕಾರ ಪಾಲನೆಯೂ ಅಷ್ಟೇ ಮುಖ್ಯ* ಎಂದು ಹೇಳಿದರು.

ಸ್ವರ್ಣ ಸಂಭ್ರಮದಲ್ಲಿ ಸಚಿವ ಜೈನ್ ನೂತನ ಯೋಜನೆಗಳ ಘೋಷಣೆ:-
ಪೆರ್ಮುದೆ ಸಂತ ಸ್ನಾನಿಕ ಯೋಹಾನ್ನ ದೇವಾಲಯದ ಸುವರ್ಣ ಮಹೋತ್ಸವದ ಸಂದರ್ಭ ಕಳೆದ 50 ವರ್ಷಗಳ ಅವಯಲ್ಲಿ ಸೇವೆ ಸಲ್ಲಿಸಿದ್ಧ ಧರ್ಮಗುರುಗಳನ್ನು ಸನ್ಮಾನಿಸಿ ಗೌರವಿಸಿ ಮಾತನಾಡಿದ ರಾಜ್ಯ ಯುವಜನ ಕ್ರೀಡೆ ಹಾಗೂ ಮೀನುಗಾರಿಕೆ ಸಚಿವ ಕೆ. ಅಭಯಚಂದ್ರ ಜೈನ್ ಅವರು ಈ ಸಂದರ್ಭ ಮಾತನಾಡಿ ಕ್ರೀಡಾ ಇಲಾಖೆಯಿಂದ ಜಿಲ್ಲೆಗೆ ಮಂಜೂರಾಗಿರುವ ಹಲವು ಯೋಜನೆಗಳನ್ನು ಘೋಷಿಸಿದರು.
* ಮಂಗಳೂರಿಗೆ ಬರಲಿವೆ ನೂತನ ಫುಟ್ಬಾಲ್ ಸ್ಟೇಡಿಯಂ
* ಮಂಗಳೂರಿನಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಅಂತರಾಷ್ಟ್ರೀಯ ದರ್ಜೆಯ 12 ಟ್ರಾಕ್ಗಳ ಈಜುಕೊಳ ನಿರ್ಮಾಣ
* ಮಂಗಳೂರಿನಲ್ಲಿ ಟರ್ಫ್ಪಿಚ್ ಇರುವ ಉನ್ನತ ದರ್ಜೆಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಈಗಾಗಲೇ ಜಾಗ ನಿಗ
* ಉಡುಪಿಯಲ್ಲಿ 2 ಕೋಟಿ ರೂ ವೆಚ್ಚದಲ್ಲಿ ಟೆನ್ನಿಸ್ ಕ್ರೀಡಾಂಗಣ
* ಫೆ.13, 14 ಕ್ಕೆ ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ದೇಹಧಾರ್ಡ ಸ್ಪರ್ಧೆ ಜರುಗಲಿದೆ. ಎಂದು ಸಚಿವ ಅಭಯಚಂದ್ರ ಜೈನ್ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಅವರು 50 ವರ್ಷಗಳ ಅವಯಲ್ಲಿ ಸೇವೆ ಸಲ್ಲಿಸಿದ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರುಗಳು ಹಾಗೂ ಕಾರ್ಯದರ್ಶಿಗಳನ್ನು ಸನ್ಮಾನಿಸಿ ಶುಭ ಹಾರೈಸಿದರು.
ಧರ್ಮಗುರುಗಳ ೀಕ್ಷೆ ಪಡೆದು 50ನೇ ವರ್ಷದ ಸಂಭ್ರಮದಲ್ಲಿರುವ ವಂದನೀಯ ಮಾರ್ಕ್ ವಾಲ್ಡರ್ ಹಾಗೂ ಪೆರ್ಮುದೆ ಚರ್ಚ್ ವ್ಯಾಪ್ತಿಯಿಂದ ಧರ್ಮ ಪ್ರಾಂತ್ಯದ ನಾನಾ ಕಡೆಗಳಲ್ಲಿ ಧರ್ಮಗುರುಗಳಾಗಿ, ಸಹಾಯಕರಾಗಿ, ಧರ್ಮ ಭಗಿನಿಯಾಗಿರುವವರನ್ನು ಗೌರವಿಸಲಾಯಿತು.
ನೂತನ ಯೋಜನೆಗಳ ಘೋಚಣೆ:-
ಸ್ವರ್ಣ ಮಹೋತ್ಸವದ ಸಂಭ್ರಮದಲ್ಲಿ ಅರ್ಥಿಕವಾಗಿ ಹಿಂದುಳಿದ ಎಲಿಯಾಜ್ ನೊರೊನ್ನಾ ಕುಟುಂಬಕ್ಕೆ ಮನೆಯನ್ನು ಕೊಡುಗೆಯಾಗಿ ಸಮರ್ಪಿಸಲಾಯಿತು. ಸಚಿವ ಅಭಯಚಂದ್ರ ಜೈನ್ ಅವರು ಮನೆಯ ಪ್ರತಿಕೃತಿಯನ್ನು ನೊರೊನ್ನಾ ಅವರಿಗೆ ಹಸ್ತಾಂತರಿಸಿದರು.
ಇದೇ ಸಂದರ್ಭ ನೂತನ *ಆರೋಗ್ಯ ನಿ*ಗೆ ಚಾಲನೆ ನೀಡÀಲಾಯಿತು. ಮಂಗಳೂರು ಧರ್ಮಪ್ರಾಂತ್ಯದ ವಿಕಾರ್ ಜನರಲ್ ವಂದನೀಯ ಡೇನಿಸ್ ಮೊರಾಸ್, ಕಳವಾರು ವಲಯದ ಮುಖ್ಯ ಧರ್ಮಗುರುಗಳಾದ ವಂದನೀಯ ರೆಮಿಜಿಯಸ್ ಅರಾನ್ನ, ಜಿ.ಪಂ ಸದಸ್ಯರುಗಳಾದ ರಿತೇಶ್ ಶೆಟ್ಟಿ, ಈಶ್ವರ ಕಟೀಲ್, ತಾ.ಪಂ ಸದಸ್ಯರುಗಳಾದ ಯೋಗೀಶ್ ಕೊಟ್ಯಾನ್, ರಮೇಶ್ ಶೆಟ್ಟಿ, ಮಂಗಳೂರು ತಾಲೂಕು ಎಪಿಎಂಸಿ ಅಧ್ಯಕ್ಷ ಮೋನಪ್ಪ ಶೆಟ್ಟಿ ಎಕ್ಕಾರು, ಪೆರ್ಮುದೆ ಗ್ರಾ.ಪಂ ಅಧ್ಯಕ್ಷೆ ಸರೋಜಾ ಎಕ್ಕಾರು ಗ್ರಾ.ಪಂ ಅಧ್ಯಕ್ಷ ಸುರೇಶ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ಧರು.
ಪೆರ್ಮುದೆ ಸಂತ ಸ್ನಾನಿಕ ಯೋಹಾನ್ನ ದೇವಾಲಯದ ಧರ್ಮಗುರು ವಂ| ಎಡ್ವಿನ್ ವಿನ್ಸೆಂಟ್ ಕೊರೆಯಾ ಸ್ವಾಗತಿಸಿದರು. ಪಾಲನಾ ಮಂಡಳಿಯ ಕಾರ್ಯದರ್ಶಿ ಆ್ಯಗ್ನೆಸ್ ಕೊನ್ಸೆಸೊ ವರದಿ ವಾಚಿಸಿದರು. ಉಪಾಧ್ಯಕ್ಷ ರೋಶನ್ ರೊಡ್ರಿಗಸ್ ವಂದಿಸಿದರು. ವಿನ್ಸೆಂಟ್ ಪಿಂಟೋ, ವಿನೋದ್ ಪಿಂಟೋ, ಪ್ರಿಯಾ ಸಿಕ್ವೇರಾ ಕಾರ್ಯಕ್ರಮ ನಿರೂಪಿಸಿದರು. ಪಿ.ಬಿ ಪಿಂಟೋ ಸನ್ಮಾನಿತರ ಪರವಾಗಿ ಮಾತನಾಡಿದರು.
ಸಭಾ ಕಾರ್ಯಕ್ರಮಕ್ಕೆ ಮುನ್ನ ಸಂಭ್ರಮದ ಬಲಿಪೂಜೆ ಜರಗಿತು. ಬಳಿಕ ಸಾಂಸ್ಕøತಿಕ ಕಾರ್ಯಕ್ರಮ ಜರಗಿತು.ಬಳಿಕ ಸಾಂಸ್ಕøತಿಕ ಕಾರ್ಯಕ್ರಮ ಜರಗಿತು.

