ಬಜ್ಪೆ: ಮನೆಯೊಂದರಲ್ಲಿ ಉಂಟಾದ ಭೀಕರ ಸ್ಫೋಟಕ್ಕೆ ಮನೆಯ ಛಾವಣಿ, ಗೋಡೆ ಕುಸಿದುಬಿದ್ದಿದ್ದು, ಮಹಿಳೇಯೋರ್ವರಿಗೆ ಗಾಯವಾದ ಘಟನೆ ಬಜ್ಪೆ ಸಮೀಪದ ಅಡ್ಕಬಾರೆ ಕೊಲಕಂಬ್ಳ ಎಂಬಲ್ಲಿ ಮಂಗಳವಾರ ರಾತ್ರಿ 7.30ರ ಸುನಾರಿಗೆ ನಡೆದಿದೆ. ಮನೆಯೊಳಗಡೆ ಇಟ್ಟಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಬಳಿಕ ಪಟಾಕಿಗೆ ಬೆಂಕಿ ತಗುಲಿ ಉಂಟಾದ ಸ್ಫೋಟದಿಂದ ಈ ಘಟನೆ ನಡೆದಿದೆ ಎಂದು ಶಂಕಿಸಲಾಗಿದೆ. ಊರಲ್ಲಿ ಬೆಡಿ ಸಾಯೇಬಾ ಎಂದು ಪರಿಚಿತರಾದ ಮನೆಯಲ್ಲೇ ಈ ಸ್ಫೋಟ ನಡೆದಿದೆ.

12 bajpe 1

12 bajpe 2

ಘಟನೆಯ ವಿವರ: ನಿನ್ನೆ ರಾತ್ರಿ 7.30ರ ಸುಮಾರಿಗೆ ಬೆಡಿ ಸಾಯೇಬರು ಎಲ್ಲಗೋ ಹೋಗಿದ್ದ ಸಂದರ್ಭ ಅವರ ಮನೆಯಲ್ಲಿ ಇದ್ದಕ್ಕಿದ್ದಂತೆ ಭಾರೀ ಸ್ಫೋಟ ಉಂಟಾಗಿದ್ದು, ಊರಲ್ಲಿ ನಡುಕ ಉಂಟಾಗಿತ್ತು. ಮನೆಯೊಳಗಡೆ ಇಟ್ಟಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟ ನಡೆದು ಬಳಿಕ ಮನೆಯ ಮತ್ತೊಂದು ಕೋಣೆಯಲ್ಲಿ ಪೇರಿಸಿಟ್ಟಿದ್ದ ಪಟಾಕಿಗಳಿಗೆ ಬೆಂಕಿ ತಗುಲಿ ಈ ಸ್ಫೋಟ ಉಂಟಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಘಟನೆಯಿಂದ ಮನೆಯ ಛಾವಣಿ ನೆಲಕ್ಕುರುಳಿದ್ದು, ಗೋಡೆಯಲ್ಲಿ ಬಿರುಕು ಬಿಟ್ಟಿದೆ ಎಂದು ಬಜ್ಪೆ ಪೊಲೀಸರು ತಿಳಿಸಿದ್ದಾರೆ. ¸ಮನೆಯೊಳಗಡೆ ಮಹಿಳೆಯೊಬ್ಬರೇ ಇದ್ದ ಮಹಿಳೆಗೆ ಗಾಯವಾಗಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಫೋಟದ ತೀವ್ರತೆಗೆ ಊರವರು ಬೆಚ್ಚಿಬಿದ್ದಿದ್ದಾರೆನ್ನಲಾಗಿದೆ. ಮನೆಯೊಳಗಡೆ ಇಟ್ಟಿದ್ದ ಪಾತ್ರೆಗಳು ಆಕಾಶದೆತ್ತರಕ್ಕೆ ಚಿಮ್ಮಿ ಬೇರೆಕಡೆ ಬಿದ್ದಿದ್ದು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಬೆಡಿ ಸಾಯೇಬಾ ಎಂದೇ ಪ್ರಸಿದ್ದರಾದ ಇವರ ಮನೆಯಲ್ಲಿ ಕೆಲವೊಂದು ಲೋಕಲ್ ಪಟಾಕಿಗಳು ಇದ್ದವೆನ್ನಲಾಗಿದೆ. ಈ ಪಟಾಕಿಗಳನ್ನು ಅವರು ಊರಲ್ಲಿ ನಡೆಯಬಹುದಾದ ಸಮಾರಂಭಕ್ಕೆ ಪೂರೈಸುತ್ತಿದ್ದು, ಇದರಿಂದ ಬೆಡಿ ಸಾಯೇಬಾ ಎದೇ ಪ್ರಸಿದ್ದರಾಗಿದ್ದರು. ಮನೆಯಲ್ಲಿ ಪಟಾಕಿಯಿಟ್ಟಿರುವುದು ಅಧಿಕೃತವೋ, ಅನಧಿಕೃತವೋ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅವರ ಮನೆಯಲ್ಲಿ ಯಾವ ಮಾದರಿಯ ಪಟಾಕಿ ಇತ್ತೆಂಬುವುದರ ಮಾಹಿತಿ ಲಭ್ಯವಾಗಿಲ್ಲ. ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

By suddi9

Leave a Reply

Your email address will not be published. Required fields are marked *