ಬಂಟ್ವಾಳ: ಶಾಲಾ ಬಳಿ ಮೊಬೈಲ್ ಟವರ್ ನಿರ್ಮಾಣ ವಿರೋಧಿಸಿ ಅಲ್ಲಿಪಾದೆಯ ಸೈಂಟ್ ಜೋನ್ಸ್ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಶನಿವಾರ ನಾವೂರು ಗ್ರಾ.ಪಂ.ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಖಾಸಗಿ ಮೊಬೈಲ್ ಕಂಪೆನಿಯೊಂದು ಶಾಲೆಯ ಮುಂಭಾಗವೇ ಟವರ್ ನಿರ್ಮಿಸುತ್ತಿದ್ದು, ಇದರಿಂದ ಶಾಲೆಯ ವಿದ್ಯಾರ್ಥಿಗಳ ದೈಹಿಕ ಹಾಗೂ ಬೌದ್ದಿಕ ವಿಕಸಕ್ಕೆ ತೊಂದರೆಯಾಗುವ ನಿಟ್ಟಿನಲ್ಲಿ ಯಾವುದೇ ಕಾರಣಕ್ಕೂ ಶಾಲಾ ಬಳಿ ಟವರ್ ನಿರ್ಮಿಸದಂತೆ ಕಂಪೆನಿಯವರಲ್ಲಿ ಮನವಿ ಮಾಡಿಕೊಳ್ಳಲಾಗಿತ್ತು.
BTW_JAN2_1ಆದರೆ ಶಾಲಾ ಆಡಳಿತ ಮಂಡಳಿಯ ಮನವಿಯನ್ನು ಪರಿಗಣಿಸದೆ ತಾವು ಪಂಚಾಯಿತಿಯಿಂದ ಅನುಮತಿ ಪಡೆದು ಟವರ್ ನಿರ್ಮಿಸುತ್ತಿರುವುದಾಗಿ ಕಂಪೆನಿ ಟವರ್ ನಿರ್ಮಾಣ ಕಾಮಗಾರಿಯನ್ನು ಮುಂದುವರೆಸಿದೆ. ಕಂಪೆನಿಯ ನಿರ್ಲಕ್ಷ ಧೋರಣೆಯಿಂದ ಆಕ್ರೋಶಿತಗೊಂಡಿರುವ ಶಾಲಾ ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿಗಳು ಶನಿವಾರ ಬೆಳಿಗ್ಗೆ ನಾವೂರು ಗ್ರಾಮಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಟವರ್ ನಿರ್ಮಿಸದಂತೆ ಕ್ರಮಕೈಗೊಳ್ಳಲು ಪಂಚಾಯಿತಿಗೆ ಮನವಿ ನೀಡಿದರು. ಈ ಸಂದರ್ಭ ಶಾಲಾ ಸಂಚಾಲಕ ಫಾ. ಗ್ರೆಗರಿ ಪಿರೇರಾ ಸುದ್ದಿಗಾರರೊಂದಿಗೆ ಮಾತನಾಡಿ ನಾವು ಟವರ್ ನಿರ್ಮಾಣಕ್ಕೆ ವಿರೋಧಿಸುವುದಿಲ್ಲ. ಆದರೆ ಶಾಲಾ ಬಳಿ ಟವರ್ ನಿರ್ಮಾಣದಿಂದ ಶಾಲಾ ಮಕ್ಕಳು ಸೇರಿದಂತೆ ಎಲ್ಲರಿಗೂ ತೊಂದರೆಯಾಗುತ್ತದೆ. ಜನರಿಗೆ ತೊಂದರೆಯಾಗದ ಸ್ಥಳವನ್ನು ಗುರುತಿಸಿ ಕಂಪೆನಿ ಟವರ್ ನಿರ್ಮಿಸಲಿ ಎಂದು ತಿಳಿಸಿದರು.
ನಾವೂರು ಪಂಚಾಯಿತಿ ಅಧ್ಯಕ್ಷೆ ಗುಲಾಬಿ, ಸದಸ್ಯರಾದ ಸದಾನಂದ ಗೌಡ, ಸುವರ್ಣ ಕುಮಾರ್, ಪಿಡಿಓ ವೇದವ ಹಾಜರಿದ್ದರು.

By Suddi9

Leave a Reply

Your email address will not be published. Required fields are marked *