ಬಂಟ್ವಾಳ: ಅಧಿಕಾರಿಗಳಲ್ಲಿಯೂ ಅಭಿವೃದ್ದಿಯ ಮನಸ್ಸಿದ್ದಾಗ ಮಾತ್ರ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ಸಾಧ್ಯ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು. ಅವರು ಬಂಟ್ವಾಳ ತಾಲೂಕು ಪಂಚಾಯತ್ ನ ನವೀಕೃತ ಸಭಾಭವನವನ್ನು ಶುಕ್ರವಾರ ಬೆಳಿಗ್ಗೆ ಉದ್ಘಾಟಿಸಿ ಮಾತನಾಡಿದರು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಬಾಂಧವ್ಯ ಗಟ್ಟಿಯಾಗಿದ್ದಾಗ ಸಾಧನೆ ಮಾಡಬಹುದು ಎಂದ ಅವರು, ಸುಸಜ್ಜಿತ ಸಭಾಂಗಣಕ್ಕೆ ಶ್ರಮಿಸಿದ ಬಂಟ್ವಾಳ ತಾ.ಪಂ.ನ ಆಡಳಿತವರ್ಗವನ್ನು ಅಭಿನಂದಿಸಿದರು.

ಇದೇ ವೇಳೆ ಕಳೆದ ನವೆಂಬರ್ ನಲ್ಲಿ ಆಯೋಜಿಸಲಾಗಿದ್ದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ ಪಡೆದ ಮಾಣಿ ಜಿ.ಪಂ. ವ್ಯಾಪ್ತಿಯ ಜನಪ್ರತಿನಿಧಿಗಳು ಹಾಗೂಅಧಿಕಾರಿಗಳಿಗೆ ಸಂಸದ ನಳಿನ್ ಕುಮಾರ್ ಕಟೀಲು ಪ್ರಶಸ್ತಿ ವಿತರಿಸಿದರು. ಬಳಿಕ ಮಾತನಾಡಿದ ಅವರು, ಆಡಳಿತ ಮತ್ತು ಪ್ರತಿಪಕ್ಷ ಜೊತೆಯಾಗಿ ಕೆಲಸ ನಿರ್ವಹಿಸಿದಾಗ ಜನಮೆಚ್ಚುತ್ತಾರೆ. ಬಂಟ್ವಾಳ ತಾಲೂಕು ಪಂಚಾಯತ್ ನಲ್ಲಿ ಇದು ಸಾಕಾರಗೊಂಡಿದೆ, ರಾಜಕೀಯವನ್ನು ದೂರವಿಟ್ಟು, ಎಲ್ಲರೂ ಜೊತೆಯಾಗಿ ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಜಿಲ್ಲೆಯ ಗಮನ ಸೆಳೆದಿದೆ ಎಂದವರು ಶ್ಲಾಘಿಸಿದÀರು.
ತಾಲೂಕು ಪಂಚಾಯತ್ ಅಧ್ಯಕ್ಷ ಯಶವಂತ ದೇರಾಜೆ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ, ಎಲ್ಲರ ಸಹಕಾರದೊಂದಿಗೆ ಎಲ್ಲಾ ಸದಸ್ಯರ ಅನುದಾನದ ನೆರವಿನೊಂದಿಗೆ , ನವೀಕೃತ ಸಭಾಭವನವನ್ನು ನಿರ್ಮಿಸಲಾಗಿದೆ. ತನ್ನ ಅವಧಿಯಲ್ಲಿ ಇದು ಎಲ್ಲರ ಉಪಯೋಗಕ್ಕೆ ಬರುತ್ತಿರುವುದು ಖುಷಿ ತಂದಿದೆ ಎಂದ ಅವರು, ಎಲ್ಲರಲ್ಲೂ ಒಗ್ಗಟ್ಟಿನ ಮನೋಭಾವ ಇದ್ದಾಗ ಮಾತ್ರ ಸಾರ್ಥಕತೆಯ ಅಭಿವೃದ್ದಿ ಕಾರ್ಯ ಸಾಧ್ಯ ಎಂದರು.
ಬಂಟ್ವಾಳ ಪುರಸಭಾ ಅಧ್ಯಕ್ಷೆ ವಸಂತಿಚಂದಪ್ಪ, ಜಿ.ಪಂ.ಸದಸ್ಯರಾದ ಶೈಲಜಾಭಟ್, ಸಂತೋಷ್ ಕುಮಾರ್ ರೈ, ಮಮತಾ ಗಟ್ಟಿ, ಎಂ.ಎಸ್.ಮಹಮ್ಮದ್, ಚಂದ್ರಪ್ರಕಾಶ ಶೆಟ್ಟಿ, ಚೆನ್ನಪ್ಪ ಕೋಟ್ಯಾನ್, ನಳಿನಿ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಐಡಾ ಸುರೇಶ್ , ತಾ.ಪಂ. ಉಪಾಧ್ಯಕ್ಷೆ ವಿಲಾಸಿನಿ ಸÀಭೆಯನ್ನುದ್ದೇಶಿಸಿ ಮಾತನಾಡಿದರು. ನವೀಕೃತ ಸಭಾಭವನದ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರ ಅಮ್ಮು ರೈ ಯವರನ್ನು ಸಚಿವ ರೈ ಸನ್ಮಾನಿಸಿದರು.
ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸಿಫ್ರಿಯನ್ ಮಿರಾಂದ ಸ್ವಾಗತಿಸಿದರು. ಮಂಜುವಿಟ್ಲ ಕಾರ್ಯಕ್ರಮ ನಿರ್ವಹಿಸಿದರು. ಗಿರೀಶ್ ವಂದಿಸಿದರು. ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಜಿ.ನರೇಂದ್ರ ಬಾಬು ಯುವಜನ ಸೇವಾಕ್ರೀಡಾಧಿಕಾರಿ ನವೀನ್ ಪಿ.ಎಸ್. ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ, ಸಿಡಿಪಿಒ ಗಳಾದ ಮಲ್ಲಿಕಾ, ಸುಧಾಜೋಶಿ ಮೊದಲಾದವರು ಉಪಸ್ಥಿತರಿದ್ದರು.

