ಪೇಜಾವರ ಮಠದಲ್ಲಿ ನೆರವೇರಿಸಲ್ಪಟ್ಟ ಚಂಡಿಕಾ ಯಾಗ-ರಾಕ್ಷೋಘ್ನ ಹೋಮ
ಮುಂಬಯಿ: ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠದ ಮುಂಬಯಿ ಅಲ್ಲಿನ ಸಾಂತಾಕ್ರೂಜ್ ಪೂರ್ವದಲ್ಲಿನ ಪ್ರಭಾತ್ ಕಾಲೋನಿ ಅಲ್ಲಿರುವ ಶ್ರೀ ಪೇಜಾವರ ಮಠದಲ್ಲಿ ಶ್ರೀ ಕೃಷ್ಣ ಪ್ರತಿಷ್ಠಾಪನಾ ಮಹೋತ್ಸವದ ಪೂರ್ವ ತಯಾರಿಯಾಗಿ ಇಂದಿಲ್ಲಿ ಶುಕ್ರವಾರ ಬೆಳಿಗ್ಗೆಯಿಂದ ಚಂಡಿಕಾ ಯಾಗ, ಭೂವರಹ ಶಾಂತಿ, ರಾಕ್ಷೋಘ್ನ ಹೋಮ ಮತ್ತು ಪ್ರತಿಮಾಧಿವಸ ಧಾರ್ಮಿಕ ಕಾರ್ಯಕ್ರಮಗಳು ನಡೆಸಲ್ಪಟ್ಟವು. ಈ ಶುಭಾವಸರದಲ್ಲಿ ಮಹಾರಾಷ್ಟ್ರ ರಾಜ್ಯದ ಮಾಜಿ ಸಚಿವ ಸುರೇಶ್ ಹೆಚ್.ಶೆಟ್ಟಿ ಮತ್ತು ಸಂತೋಷಿ ಸುರೇಶ್ ದಂಪತಿ ಆಗವಮಿಸಿ ಪೂಜೆಯಲ್ಲಿ ಪಾಲ್ಗೊಂಡರು. ಬಳಿಕ ಸುರೇಶ್ ಶೆಟ್ಟಿ ಅವರು ಕಾಣಿಕೆ ಡಬ್ಬಕ್ಕೆ ತಮ್ಮ ವಂತಿಗೆಯನ್ನಿತ್ತು ಸೇವೆಗೆ ಚಾಲನೆ ನೀಡಿದ್ದು, ಸುರೇಶ್ ಶೆಟ್ಟಿ ಅವರನ್ನು ನೂತನವಾಗಿ ನಿರ್ಮಿಸಲಾದ
ಶಿಲಾಮಯ ಮಂದಿರದ ಸಮ್ಮುಖದಲ್ಲಿ ಶ್ರೀ ಪೇಜಾವರ ಮಠ ಮುಂಬಯಿ ಶಾಖೆಯ ಆಡಳಿತಾಧಿಕಾರಿ ರಾಮದಾಸ ಉಪಾಧ್ಯಾಯ ಮತ್ತು ಶ್ರೀಹರಿ ಭಟ್ ಶಾಲು ಹೊದಿಸಿ ಪ್ರಸಾದವನ್ನಿತ್ತು ಗೌರವಿಸಿದರು.

ಈ ಸಂದರ್ಭದಲ್ಲಿ ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ ಆಡಳಿತ ವಿಶ್ವಸ್ಥಕೆ.ವಿ ಮೂರ್ತಿ ಯೆರ್ಕಾಡಿತಾಯ, ಗೌರವ ಅಧ್ಯಕ್ಷ ಡಾ| ಎ.ಎಸ್ ರಾವ್, ಕಾರ್ಯನಿರತ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್, ಗೌರವ ಕಾರ್ಯದರ್ಶಿಗಳಾದ ಬಿ.ಆರ್ ಗುರುಮೂರ್ತಿ ಮತ್ತು ಪೆರ್ಣಂಕಿಲ ಹರಿದಾಸ ಭಟ್, ಗೌರವ ಕೋಶಾಧಿಕಾರಿ ಅವಿನಾಶ್ ಶಾಸ್ತ್ರಿ, ರಾಮ ವಿಠಲ ಕಲ್ಲೂರಾಯ ಮತ್ತಿತರ ಪದಾಧಿಕಾರಿ, ಸದಸ್ಯರುಗಳು ಹಾಗೂ, ಡಾ| ಕೆ.ಎಸ್ ರಾವ್ ಸಯಾನ್, ಕೆ.ಕೃಷ್ಣರಾಜ ತಂತ್ರಿ, ನಲ್ಯಗುತ್ತು ಪ್ರಕಾಶ್ ಟಿ.ಶೆಟ್ಟಿ, ಶೇಖರ್ ಸಾಲ್ಯಾನ್, ಪೇಜಾವರ ಮಠ ಮುಂಬಯಿ ಶಾಖಾಧಿಕಾರಿ ನಿರಂಜನ್ ಗೋಗ್ಟೆಹಾಗೂ ಪುರೋಹಿತರನೇಕರು ಉಪಸ್ಥಿತರಿದ್ದರು. ಜ.02 ಶನಿವಾರ ಬೆಳಿಗ್ಗೆ ವಿಷ್ಣು ಯಾಗ, ಪವಮಾನ ಹೋಮ, ಕೂಷ್ಮಂಡ ಹೋಮ, ತಿಲ ಹೋಮ,
ಮೃತ್ಯುಂಜಯ ಹೋಮ ಹಾಗೂ ಸಂಜೆ 4.00 ಗಂಟೆಯಿಂದ ಚಕ್ರಾಬ್ಜ ಮಂಡಲಪೂಜೆ, ಭಜನಾ ಸಂಧ್ಯಾ ಕಾರ್ಯಕ್ರಮ, ಬಿಲ್ಲವರ ಭವನದಿಂದ ಶ್ರೀ ಕೃಷ್ಣ ದೇವರ ಭವ್ಯ ಮೆರವಣಿಗೆ, 7.00 ಗಂಟೆಗೆ ಮಹಾರಾಷ್ಟ್ರದ
ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ ಮತ್ತಿತರಗಣ್ಯರಉಪಸ್ಥಿತಿಯಲ್ಲಿ ಧಾರ್ಮಿಕಸಭೆ ಮತ್ತು ಸನ್ಮಾನ, ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವುದು. ಭಾನುವಾರ ಮುಂಜಾನೆಯಿಂದ 9.00 ಗಂಟೆ ವರೇಗೆ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಶುಭಹಸ್ತದಲ್ಲಿ ಶ್ರೀ ಕೃಷ್ಣ ಪ್ರತಿಷ್ಠಾಪನೆ, ಬ್ರಹ್ಮಕಲಶೋತ್ಸವ, ಪ್ರತಿಷ್ಠೆ, ಅಷ್ಠಬಂಧ, ಪ್ರಸಾದ ವಿತರಣೆ, ತುಳಸೀ ಆರ್ಚನೆ, ಮಧ್ಯಾಹ್ನ ಮಹಾ ಪ್ರಸಾದ ಬಳಿಕ ಅನ್ನಸಂತಾರ್ಪಣೆ ನಡೆಸಲಾಗುವುದು. ಮುಂಬಯಿಯಲ್ಲಿನ ಭಕ್ತರು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀಕೃಷ್ಣ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ ಮತ್ತು ಶ್ರೀ ಪೇಜಾವರ ಮಠ ಮುಂಬಯಿ ಶಾಖೆಯ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.




