ಭದ್ರತೆ ಮತ್ತು ಪ್ರೋತ್ಸಾಹ ಭಾರತ್ ಬ್ಯಾಂಕ್ ವೈಶಿಷ್ಟ ್ಯತೆ : ಪದ್ಮಾಕರ್ ಕೋಟ್ಯಾನ್
ಮುಂಬಯಿ: ನಾನು ಈ ಬ್ಯಾಂಕ್ನಲ್ಲಿ ಸುಮಾರು ಮೂರುವರೆ ದಶಕಗಳಿಂದ ವ್ಯವಹರಿಸುತ್ತಿದ್ದೇನೆ. ಈಗಂತೂ ಭಾರತ್ ಬ್ಯಾಂಕ್ ಸ್ನೇಹತ್ವದ ಸೇತುವೆಯಾಗಿ ಸೇವೆ ಸಲ್ಲಿಸುತ್ತಿದ್ದು, ಉದ್ಯಮಕ್ಕೆಕೇವಲ ಹಣಕಾಸು ಸ್ಪಂದನೆ ಮಾತ್ರವಲ್ಲದೆ ಭದ್ರತೆ ಮತ್ತು
ಪ್ರೋತ್ಸಾಹಿಸುವ ಉದಾತ್ತತೆ ಈ ಬ್ಯಾಂಕ್ನಲ್ಲಿ ಮಾತ್ರ ಕಂಡಿದ್ದೇನೆ. ಆರ್ಥಿಕ ವಲಯದಲ್ಲಿ ಈ ಸಂಸ್ಥೆಯ ಕಾರ್ಯ ಸಾಮರ್ಥ್ಯವೇ ವಿಭಿನ್ನವಾಗಿದೆ. ಶೀಘ್ರಗತಿಯಲ್ಲಿ ಸಾಗುತ್ತಿರುವ ಬ್ಯಾಂಕ್ನ ಪ್ರಗತಿ ಅಭಿಮಾನ ತಂದಿದೆ. ರಾಷ್ಟ್ರದ ಸಹಕಾರಿ ರಂಗದಲ್ಲಿ ಶಿಖರದಲ್ಲಿನ ಈ ಬ್ಯಾಂಕ್ ಭವಿಷ್ಯತ್ತಿನಲ್ಲಿ ಭಾರತದ ತುದಿಗೇರಿ ಕಂಗೋಳಿಸುವಂತಾಗಲಿ ಎಂದು ಕ್ರಿಯೇಟಿವ್ ಬುಕ್ಸ್ ಎಂಡ್ ಪೀರಿಯಾಡಿಕಲ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕ ಪದ್ಮಾಕರ ಎಲ್.ಕೋಟ್ಯಾನ್ ತಿಳಿಸಿದರು.
ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ನಿಯಮಿತ ತನ್ನ 86ನೇ ಶಾಖೆಯನ್ನು ಇಂದಿಲ್ಲಿ ಬುಧವಾರ ಘಾಟ್ಕೋಪರ್ ಪೂರ್ವದ ಪಾಟೇಲ್ ಚೌಕ್ನ ಖೊಡಲ್ ಛೇಂಬರ್ನ ಪ್ರಥಮ ಮಹಡಿಯಲ್ಲಿ ಶುಭಾರಂಭಗೊಳಿಸಿದ್ದು ಗೌರವ್ವಾನಿತ ಗಣ್ಯರು ಮತ್ತು ಗ್ರಾಹಕರಾಗಿದ್ದು ಪದ್ಮಾಕರ ಕೋಟ್ಯಾನ್ ಮಾತನಾಡಿದರು. ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ, ಬ್ಯಾಂಕ್ನ ಕಾರ್ಯಾಧ್ಯ ಕ್ಷ ಜಯ ಸಿ.ಸುವರ್ಣ ಅವರು ರಿಬ್ಬನ್ ಬಿಡಿಸಿ ನೂತನ ಶಾಖೆಯನ್ನು ಸೇವಾರ್ಪಣೆಗೊಳಿಸಿದರು. ಬಿಲ್ಲವರ ಅಸೋಸಿಯೇಶನ್ ಘಾಟ್ಕೋಪರ್ ಸ್ಥಳಿಯ ಕಛೇರಿಯ ಕಾರ್ಯಧ್ಯಕ್ಷ ಡಿ.ಕೆ ಪೂಜಾರಿ ಮತ್ತು ಹಿರಿಯ ಸಮಾಜ ಸೇವಕ ಆರ್. ವಿ ಅಮೀನ್ ಜ್ಯೋತಿ ಬೆಳಗಿಸಿ ಶಾಖೆಗೆ ವಿಧ್ಯುಕ್ತವಾಗಿ ಚಾಲನೆಯನ್ನಿತ್ತರು. ಬ್ಯಾಂಕ್ನ ಉಪ ಕಾರ್ಯಾಧ್ಯಕ್ಷೆನ್ಯಾ| ರೋಹಿಣಿ ಜೆ.ಸಾಲ್ಯಾನ್ ಎಟಿಎಂ ಸೇವೆ ಹಾಗೂ ಬ್ಯಾಂಕ್ನ ಹಿರಿಯ ನಿರ್ದೇಶಕಿ ಪುಷ್ಫಲತಾ ನರ್ಸಪ್ಪ ಸಾಲ್ಯಾನ್ ಲಾಕರ್ ಸೇವೆ ಹಾಗೂ ಬ್ಯಾಂಕ್ನ ಆಡಳಿತ ನಿರ್ದೇಶಕಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್ ಮೂಲ್ಕಿ ಕಂಪ್ಯೂಟರೀಕೃತ ಸೇವೆಗಳಿಗೆ ಚಾಲನೆಯನ್ನಿತ್ತು ಶುಭ ಹಾರೈಸಿದರು.

ವಿಶೇಷ ಆಮಂತ್ರಿತರುಗಳಾಗಿ ಉದ್ಯಮಿ ಹಾಗೂ ಸಮಾಜ ಸೇವಕರುಗಳಾದ ತೋಕುರು ಭಾಸ್ಕರ್ ಶೆಟ್ಟಿ, ರಾಘವ ಕೆ.ಕುಂದರ್, ಸದಾನಂದ ಶೆಟ್ಟಿ, ಕೆ.ಆರ್ ಸುವರ್ಣ, ಗಿರಿಜಾ ಎಸ್.ಕೋಟ್ಯಾನ್, ಸದಾನಂದ ಪೂಜಾರಿ, ರಾಖೀ ಜಾಧವ್, ನಂದಳಿಕೆ ನಾರಾಯಣ ಶೆಟ್ಟಿ, ತೋನ್ಸೆ ಸಂಜೀವ ಪೂಜಾರಿ, ಮಾಜಿ ನಿರ್ದೇಶಕರಾದ ರಂಗ ಕೆ.ಪಾಲನ್, ಎಂ.ಎನ್ ಕರ್ಕೇರ, ಎನ್.ಎಂ ಸನೀಲ್ ಮತ್ತು ಸ್ಥಳಿಯ ನೂತನ ಗ್ರಾಹಕರು, ನೂರಾರು ಹಿತೈಷಿಗಳು ಉಪಸ್ಥಿತರಿದ್ದು ಶಾಖೆಯ ಶ್ರೇಯೋಭಿವೃದ್ಧಿಗೆ ಶುಭ ಹಾರೈಸಿದರು. ಬ್ಯಾಂಕ್ನ ನಿರ್ದೇಶಕರುಗಳಾದ ಜ್ಯೋತಿ ಕೆ.ಸುವರ್ಣ, ಚಂದ್ರಶೇಖರ ಎಸ್.ಪೂಜಾರಿ, ಕೆ.ಎನ್ ಸುವರ್ಣ, ಜೆ.ಎ ಕೋಟ್ಯಾನ್, ಯು.ಎಸ್ ಪೂಜಾರಿ, ಆರ್.ಡಿ ಪೂಜಾರಿ, ಕೆ.ಬಿ ಪೂಜಾರಿ, ಹರೀಶ್ಚಂದ್ರ ಜಿ.ಮೂಲ್ಕಿ, ಅಶೋಕ್ ಎಂ. ಕೋಟ್ಯಾನ್, ಭಾಸ್ಕರ್ ಎಂ.ಸಾಲ್ಯಾನ್, ಗಂಗಾಧರ್ ಜೆ. ಪೂಜಾರಿ ಉಪಸ್ಥಿತರಿದ್ದು ಶಾಖೆಯ ಸಿಬ್ಬಂದಿಗಳಾದ ಸಂಧ್ಯಾ ಕರ್ಕೇರ, ಸ್ನೇಹಲತಾ ಅಂಚನ್, ಪ್ರತಾಪ್ ಕರ್ಕೇರ, ಶಶಿಕಲಾ ಕುಂದರ್, ಬಬಿತಾ ಸುವರ್ಣ, ಶರತ್ ಕೋಟ್ಯಾನ್, ಧನಂಜಯ ಸುವರ್ಣ ಅವರನ್ನು ಸತ್ಕರಿಸಿದರು. ಜಯ ಸುವರ್ಣರು ಆರ್.ವಿ ಅಮೀನ್ ಅವರನ್ನು ಶಾಲು ಹೊದಿಸಿ ಸನ್ಮಾನಿಸಿ ಇತರ ಅತಿಥಿ ಗಣ್ಯರಿಗೆ ಪುಷ್ಫಗುಪ್ಚವನ್ನಿತ್ತು ಗೌರಸಿದರು. ಡಾ| ಗಿರಿ ಶಂಕರ್ ಮಾತನಾಡಿ ಭಾರತ್ ಬ್ಯಾಂಕ್ನೊಂದಿಗೆ ಭಾಗೀದಾರನಾಗಿರುವುದೇ ನಮ್ಮ ಧನ್ಯತೆ. ನಮ್ಮ ವ್ಯವಹಾರ ವಿಸ್ತಾರಣೆ ಈ ಸಂಸ್ಥೆಯ ಪಾತ್ರ ಮಹತ್ವದ್ದಾಗಿದೆ. ಈ ಬ್ಯಾಂಕ್ ನಮ್ಮ ಉದ್ಯಮದ ಲಕ್ಷ ್ಯ ವಹಿಸಿ ಫಿನಾನ್ಶಿಯಲ್ ಪ್ರಾಬ್ಲಂಗೆ ಉತ್ತರಿಸಿದೆ ಎಂದರು. ಎಲ್ಲರ ಶ್ರೇಯಸ್ಸು ಬಯಸುವ ಈ ತಥಸಂಸ್ಥೆಗೆ ಸದಾ ಯಶಸ್ಸು ಲಭಿಸಲಿ. ಇನ್ನಷ್ಟು ಶಾಖೆಗಳನ್ನು ತೆರೆದು ಜನಪರ ಸಂಸ್ಥೆಯಾಗಿ ಆಲದ ಮರದಂತೆ ಬೆಳೆದು ಅಗತ್ಯವುಳ್ಳವರಿಗೆ ಹಣಕಾಸು ಸಹಯೋಗದ ನೆರಳನ್ನು ನೀಡಲಿ ಎಂದು ಆರ್.ವಿ ಅಮೀನ್ ತಿಳಿಸಿದರು. ಇತರರೊಂದಿಗೆ ತಾನೂ ಬೆಳೆದ ಭಾರತ್ ಬ್ಯಾಂಕ್ ತುಳುಕನ್ನಡಿಗರ ಸಾಮ್ಯತ್ವದ ಹಿರಿಮೆಯ ಸಂಸ್ಥೆಯಾಗಿದೆ. ನೌಕರಸ್ಥರ ಶ್ರಮ ಮತ್ತು ಬ್ಯಾಂಕ್ನ ನಿರ್ದೇಶಕ ಮಂಡಳಿಯ ದಿಟ್ಟತನದಿಂದ ಇಷ್ಟೊಂದು ಮಟ್ಟಕ್ಕೆ ಬೆಳೆದ ಬ್ಯಾಂಕ್ಗೆ ನನ್ನ ಸ್ಯಾಲ್ಯೂಟ್. ಇದು ನಮ್ಮ ಬ್ಯಾಂಕ್ ಎಂದೇಳಲು ಹೆಮ್ಮೆಯೆಣಿಸುತ್ತಿದೆ ಎಂದು ನ್ಯಾಯವಾದಿ ಬಿ.ಮೊಹಿದ್ಧೀನ್ ಮುಂಡ್ಕೂರು ನುಡಿದರು. ಉದ್ಯಮಿಗಳಾದ ಭದ್ರೇಶ್ ಠಕ್ಕರ್, ಗೋಕುಲ್ದಾಸ್ ದೆವ್ನಾಣಿ, ಪರೇಶ್ ಠಕ್ಕರ್ ಮಾತನಾಡಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಡಿ.ಕೆ ಪೂಜಾರಿ ವಿಶ್ವರೂಪಿ ಬ್ರಹ್ಮಶ್ರೀ ನಾರಾಯಣ ಗುರುಗಳನ್ನು ಸ್ಮರಿಸಿ ನಮ್ಮವರು ಉದರ ಪೋಷಣೆಗಾಗಿ ತಾಯ್ನಾಡನ್ನು ಬಿಟ್ಟು ಮುಂಬಯಿ ಸೇರಿದರೂ ಪರರ ಬಗ್ಗೆ ಚಿಂತಿಸಿ ಅವರ ಹಣಕಾಸು ಅನುಕೂಲವನ್ನು ಅರಿತು ರೂಪಿಸಿದ ಭಾರತ್ ಬ್ಯಾಂಕ್ ಸಾರ್ಥಕವಾಗಿದೆ. ಬ್ಯಾಂಕು ಮುನ್ನಡೆಸಿದ ಶ್ರೇಯಸ್ಸು ಜಯ ಸಿ.ಸುವರ್ಣರಿಗೆ ಸಲ್ಲಬೇಕು. ಬ್ಯಾಂಕ್ನ ನಿರ್ದೇಶಕ ಮಂಡಳಿಯ ಹಗಳಿರುಲೆನ್ನದ ಅವಿರತ ಶ್ರಮ, ಉದ್ಯೋಗಸ್ಥರ ಸೇವೆಯೂ ಬ್ಯಾಂಕ್ನ ಸರ್ವೋಭಿವೃದ್ಧಿಗೆ ಪೂರಕವಾಗಿದೆ. ಸುವರ್ಣರ ದೂರದೃಷ್ಠಿತ್ವ ಮತ್ತು ಜನಹಿತತ್ವದ ಮೂಲಕ ಬ್ಯಾಂಕ್ ದಿನೆದಿನೇ ವೃದ್ಧಿಗೊಂಡು ಅವರ ಭಾಗೀರಥ ಪ್ರಯತ್ನ ಫಲಪ್ರದಗೊಳ್ಳಲಿ ಎಂದರು. ಬ್ಯಾಂಕ್ನ ಮುಖ್ಯ ಪ್ರಧಾನ ವ್ಯವಸ್ಥಾಪಕ ಅನಿಲ್ಕುಮಾರ್ ಆರ್.ಅವಿೂನ್, ಮಹಾ ವ್ಯವಸ್ಥಾಪಕರುಗಳಾದ ನಿತ್ಯಾನಂದ ಡಿ.ಕೋಟ್ಯಾನ್, ಶೋಭಾ ದಯಾನಂದ್, ಉಪ ಪ್ರಧಾನ ವ್ಯವಸ್ಥಾಪಕರುಗಳಾದ ಸುರೇಶ್ ಎಸ್.ಸಾಲ್ಯಾನ್, ದಿನೇಶ್ ಬಿ.ಸಾಲ್ಯಾನ್, ರಮೇಶ್ ಹೆಚ್.ಪೂಜಾರಿ, ಸಹಾಯಕ ಪ್ರಧಾನ ಪ್ರಬಂಧಕರುಗಳಾದ ಪ್ರಭಾಕರ್ ಜಿ.ಪೂಜಾರಿ, ಹರೀಶ್ ಕೆ., ರತ್ನಾಕರ್ ಸಾಲ್ಯಾನ್, ಸತೀಶ್ ಎಂ.ಬಂಗೇರಾ, ವಾಸುದೇವ ಪಿ.ಸಾಲ್ಯಾನ್, ಮಹೇಶ್ ಬಿ.ಕೋಟ್ಯಾನ್ ಹಾಗೂ ಹಿರಿಯ ಪ್ರಬಂಧಕರುಗಳಾದ ಹರೀಶ್ ಕೆ.ಹೆಜ್ಮಾಡಿ, ಪ್ರಭಾಕರ್ ಜಿ. ಪೂಜಾರಿ, ಬ್ಯಾಂಕ್ನ ಅಭಿವೃದ್ಧಿ ಇಲಾಖಾಧಿಕಾರಿಗಳಾದ ಸುನೀಲ್ ಗುಜರನ್, ವಿಜಯ ಪಾಲನ್, ಬ್ಯಾಂಕ್ನ ಎಂಪ್ಲಾಯಿಸ್ ಯೂನಿಯನ್ ಕಾರ್ಯದರ್ಶಿ ದಿನೇಶ್ ಕೆ.ಸನೀಲ್ ಮತ್ತು ಬ್ಯಾಂಕ್ನ ಹಲವಾರು ಉನ್ನತಾಧಿಕಾರಿಗಳು ಸೇರಿದಂತೆ ವಿವಿಧ ಶಾಖೆಗಳ ಮುಖ್ಯಸ್ಥರು ಹಾಜರಿದ್ದು ಶಾಖೆಯ ಪ್ರಗತಿಗೆ ಶುಭಕೋರಿದರು. ಶ್ರೀ ಶೇಖರ ಶಾಂತಿ ಉಳ್ಳೂರು ಮತ್ತು ಉಳ್ಳೂರು ದಿನೇಶ್ ಶಾಂತಿ ಗಣಹೋಮ, ದ್ವಾರಪೂಜೆ ನೆರವೇರಿಸಿ ಹರಸಿ ತೀರ್ಥಪ್ರಸಾದ ವಿತರಿಸಿದರು. ಶಾಖೆಯ ಮುಖ್ಯಸ್ಥೆ ಸಂಧ್ಯಾ ಹೆಚ್.ಕರ್ಕೇರ ಮತ್ತು ಹರೀಶ್ ಕರ್ಕೇರ ದಂಪತಿ ಪೂಜಾಧಿಗಳ ಯಜಮಾನತ್ವ ವಹಿಸಿದ್ದರು. ಉಪ ಪ್ರಧಾನ ಪ್ರಬಂಧಕ ಹಾಗೂ ಅಭಿವೃದ್ಧಿ ಇಲಾಖಾ ಮುಖ್ಯಸ್ಥ ಮೋಹನ್ದಾಸ್ ಹೆಜ್ಮಾಡಿ ಸ್ವಾಗತಿಸಿ, ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಹಿಸಿದರು. ಸಂಧ್ಯಾ ಹೆಚ್.ಕರ್ಕೇರಧನ್ಯವದಿಸಿದರು.








