`ರಾಷ್ಟ್ರೀಯ ಕನ್ನಡ ರತ್ನ ಪ್ರಶಸ್ತಿ’ಗೆ ಡಾ| ಜಸ್ಟೀಸ್ ಶಿವರಾಜ್ ವಿ.ಪಾಟೀಲ್ ಆಯ್ಕೆ
ಮುಂಬಯಿ: ಚೆಂಬೂರು ಕರ್ನಾಟಕ ಸಂಘದ ವಾರ್ಷಿಕ ಸಾಹಿತ್ಯ-ಸಂಸ್ಕೃತಿ-ಸಮ್ಮಾನ ಸಂಭ್ರಮ`ಸಾಹಿತ್ಯ ಸಹವಾಸ-2016′ ಕಾರ್ಯಕ್ರಮವು ಬರುವ ಜ.02ರ ಶನಿವಾರ ಸಂಜೆ 4.30 ಗಂಟೆಗೆ ಚೆಂಬೂರು ಅಲ್ಲಿನ ಸಂಸ್ಥೆಯ ಸಂಕುಲದಲ್ಲಿ ಅಧ್ಯಕ್ಷ ನ್ಯಾಯವಾದಿ ಹೆಚ್.ಕೆ ಸುಧಾಕರ ಅರಾಟೆ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಚೆಂಬೂರು ಕರ್ನಾಟಕ ಸಂಘದ ವಾರ್ಷಿಕ ಚೊಚ್ಚಲ, ಹೊರನಾಡಿನ ಪ್ರಶಸ್ತಿಗಳಲ್ಲೆಲ್ಲ ಗರಿಷ್ಠ ಮಟ್ಟದ ಮಾನ ನಿಧಿಯನ್ನೊಳಗೊಂಡ`ರಾಷ್ಟ್ರೀಯ ಕನ್ನಡ ರತ್ನ ಪ್ರಶಸ್ತಿ-2015’ನ್ನು ಭಾರತ ರಾಷ್ಟ್ರದ ಸರ್ವೋಚ್ಚ ನ್ಯಾಯಲಯದ ನಿವೃತ್ತ ನ್ಯಾಯಮೂರ್ತಿ ಡಾ| ಜಸ್ಟೀಸ್ ಶಿವರಾಜ್ ವಿ.ಪಾಟೀಲ್ ಅವರಿಗೆ ಪ್ರಧಾನಿಸಿ ಗೌರವಿಸಲಾಗುವುದು ಎಂದು ಸಂಘದ ಗೌ| ಪ್ರ| ಕಾರ್ಯದರ್ಶಿ ರಂಜನ್‍ಕುಮಾರ್ ಅಮೀನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಪ್ರಶಸ್ತಿ ಪ್ರಧಾನ:
ಸಾಹಿತ್ಯ ಸಹವಾಸ-2016 ಸಂಭ್ರಮ ಕಾರ್ಯಕ್ರಮವನ್ನು ಸತ್ಯ ಸಾಯಿ ಲೋಕ ಸೇವಾ ವಿದ್ಯಾ ಕೇಂದ್ರದ ನಿವೃತ್ತ ಪ್ರಾಂಶುಪಾಲ ಹರಿದಾಸ ಕೆ. ಸಂಜೀವ ಶೆಟ್ಟಿಉದ್ಘಾಟಿಸಿ ನ್ಯಾ| ಡಾ| ಜಸ್ಟೀಸ್ ಶಿವರಾಜ್ ವಿ.ಪಾಟೀಲ್ ಅವರಿಗೆ
`ರಾಷ್ಟ್ರೀಯ ಕನ್ನಡ ರತ್ನ ಪ್ರಶಸ್ತಿ-2015′ ಪ್ರಶಸ್ತಿಪ್ರದಾನಿಸಲಿರುವರು. ಅಂತೆಯೇ ಕನ್ನಡ ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಶೈಕ್ಷಣಿಕ ರಂಗದಲ್ಲಿ ಅನನ್ಯ ಸೇವೆಗೈದ ನಿವೃತ್ತ ಉಪನ್ಯಾಸಕಿ ಡಾ| ಶ್ರೀಮತಿ ವಾಣಿ ಉಚ್ಚಿಲ್ಕರ್ ಅವರಿಗೆ `ವೈ.ಜಿ ಶೆಟ್ಟಿ ಶ್ರೇಷ್ಠ ಶಿಕ್ಷಕ ಪ್ರಶಸ್ತಿ’ ಹಾಗೂ ಹಿರಿಯ ಯಕ್ಷಗಾನ ತಾಳಮದ್ದಲೆ ಅರ್ಥಧಾರಿ, ಸಂಘಟಕ ಕೆ.ಕೆ ಶೆಟ್ಟಿ ಅವರಿಗೆ `ಸುಬ್ಬಯ್ಯ ಶೆಟ್ಟಿ ದತ್ತಿ’ ಗೌರವ ಮತ್ತು ಕನ್ನಡ ನಾಡು ನುಡಿ, ಸಂಘಟನೆಗಾಗಿ ಅಪೂರ್ವ ಸೇವೆ ಸಲ್ಲಿಸಿದ ತುಳುವ ಕನ್ನಡಿಗನಾಗಿ ಕೊಡಮಾಡುವ ಮೇರು ಪುರಸ್ಕಾರ `ಅರಾಟೆ ನಾಗಮ್ಮಶೇಷಪ್ಪ ಪೂಜಾರಿ ಮೆಮೋರಿಯಲ್’ ಪ್ರಶಸ್ತಿಯನ್ನು ಕಾಸರಗೋಡು ಮಿಯ್ಯಪದವು ಶ್ರೀ ವಿದ್ಯಾವರ್ಧಕ ಹಿರಿಯ ಪ್ರಾಥಮಿಕ ಶಾಲೆಯ ಸಂಚಾಲಕ ಡಾ| ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅವರಿಗೆಪ್ರದಾನಿಸಲಾಗುವುದು ಎಂದು ಸಂಘದ ಕೋಶಾಧಿಕಾರಿ ಟಿ. ಆರ್ ಶೆಟ್ಟಿತಿಳಿಸಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನಾಟ್ಯ ನಿಲಯಂ ಮಂಜೇಶ್ವರ ತಂಡವು ನಾಟ್ಯ ಸಂಮ್ಮೋಹನಂ ಆಗಿಸಿ ಶಾಸ್ತ್ರೀಯ, ಜಾನಪದ, ನೃತ್ಯ, ನಾಟ್ಯ ಹಾಗೂ ಅಪೂರ್ವ ಸಂಗೀತ ವೈವಿಧ್ಯ ಭರತನಾಟ್ಯ, ಮೋಹಿನಿಯಾಟ್ಟಂ, ಕೂಚಿಪುಡಿ, ಕರ್ನಾಟಕ ಕೇರಳ ಬಹುಭಾಷಾ ಕಲವರ, ಬಹು ಸಂಸ್ಕೃತಿಯ ನೃತ್ಯ ಪಲ್ಲವ ಹಾಗೂ ಶಾಲಾ ಮಕ್ಕಳಿಂದ ವಿವಿಧ ವಿನೋದಾವಳಿಗಳು ಪ್ರದರ್ಶನಗೊಳಿಸಲಿದ್ದಾರೆ ಎಂದು ಸಂಘದ ಸಾಂಸ್ಕೃತಿಕ ಉಪ ಸಮಿತಿ ಕಾರ್ಯದರ್ಶಿ ದಯಸಾಗರ್ ಚೌಟ ತಿಳಿಸಿದ್ದಾರೆ.
