ಬಜಪೆ: ಪಡುಪೆರಾರ ಗ್ರಾಮ ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಪದವಿ ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ಭಾನುವಾರ ಬಜಪೆ ವಲಯ ಬಂಟರ ಸಂಘದ ಆಶ್ರಯದಲ್ಲಿ ಜರಗಿದ ಸಂಘದ ವ್ಯಾಪ್ತಿಯ 15 ಗ್ರಾಮಗಳಿಗೆ ಸಂಬಂಧಪಟ್ಟು ಜರಗಿದ ಬಂಟೆರ್ನ ಗೊಬ್ಬುಲು ಕ್ರೀಡೋತ್ಸವದ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.
29 vm Paduperaraಸಮಗ್ರವಾಗಿ ಕೊಳಂಬೆ ಗ್ರಾಮ ರನ್ನರ್ ಅಪ್ ಪ್ರಶಸ್ತಿ ಪಡೆದಿದೆ. ಕುತೂಹಲಕಾರಿಯಾಗಿದ್ದ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಕೆಂಜಾರು ಗ್ರಾಮ ತಂಡ ಪ್ರಥಮ ಹಾಗೂ ಪಡುಪೆರಾರ ದ್ವಿತೀಯ ಬಹುಮಾನ ಪಡೆಸರೆ ಮಹಿಳೆಯರ ವಿಭಾಗದಲ್ಲಿಯೂ ಕೆಂಜಾರು ಗ್ರಾಮ ಪ್ರಥಮ ಸ್ಥಾನ ಪಡೆದಿದ್ಧು ಕೊಳಂಬೆ ದ್ವಿತೀಯ ಸ್ಥಾನ ಪಡೆದಿದೆ.
ಸಮಾರಂಭದಲ್ಲಿ ಬಂಟ ಸಮಾಜದ ರೀತಿ ರಿವಾಜುಗಳ ಬಗ್ಗೆ ಜರಗಿದ ಸಂವಾದದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ಧ ತುಳು ವಿದ್ವಾಂಸ ಡಾ| ವೈ.ಎನ್. ಶೆಟ್ಟಿ ಅವರು ಸಮಗ್ರ ಪ್ರಶಸ್ತಿಯನ್ನು ವಿತರಿಸಿ ಶುಭ ಹಾರೈಸಿದರು.
ಬಜಪೆ ವಲಯ ಬಂಟರ ಸಂಘದ ಅಧ್ಯಕ್ಷ ವಿಜಯನಾಥ ವಿಠಲ ಶೆಟ್ಟಿ, ಉಪಾಧ್ಯಕ್ಷ ರಿತೇಶ್ ಶೆಟ್ಟಿ, ಕಾರ್ಯದರ್ಶಿ ಸುಖೇಶ್ ಮಾಣಾೈ ಉಪಸ್ಥಿತರಿದ್ಧರು. ನವೀನ್ ಶೆಟ್ಟಿ ಸಂವಾದ ಹಾಗೂ ಸಮಾರಂಭ ನಿರ್ವಹಿಸಿದರು.

By suddi9

Leave a Reply

Your email address will not be published. Required fields are marked *