ದೆಹಲಿ ರೇಪ್ ಘಟನೆಯನ್ನು ಆಧರಿಸಿದ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡುತ್ತಿದೆ. ಜಾಸ್ಮಿನ್.5 ಹೆಸರಿನ ಚಿತ್ರದಲ್ಲಿ ದೆಹಲಿಯಲ್ಲಿ ನಡೆದಿರುವ ಪ್ಯಾರಾಮೆಡಿಕಲ್ ವಿದ್ಯಾಥರ್ಿನಿಯ ಅತ್ಯಾಚಾರ ಮತ್ತು ಆನಂತರ ನಡೆದಿರುವ ಘಟನಾವಳಿಗಳನ್ನು ಸೂಕ್ಷ್ಮವಾಗಿ ಬಿಂಬಿಸಲಾಗುತ್ತಿದೆ. ಈ ಚಿತ್ರದ ನಾಯಕಿಯಾಗಿ ಬಜ್ಪೆ ಸಮೀಪದ ಮುರನಗರ ನಿವಾಸಿ ನವ್ಯ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಲಿದ್ದಾರೆ.
ಜಾಸ್ಮಿನ್.5 ಹೆಸರೇ ಹೇಳುವಂತೆ ಚಿತ್ರದ ನಾಯಕಿಯ ಹೆಸರು ಜಾಸ್ಮಿನ್. ಚಿತ್ರದಲ್ಲಿ ನಾಯಕಿ ಐವರು ಕಾಮುಕರಿಂದ ಶೋಷಣೆಗೊಳಗಾಗುವ ಕಥೆ ಇರುವ ಕಾರಣ ಚಿತ್ರಕ್ಕೆ ಜಾಸ್ಮಿನ್.5 ಎಂದು ನಾಮಕರಣ ಮಾಡಲಾಗಿದೆ. ಜಾಸ್ಮಿನ್ ಪಾತ್ರದಲ್ಲಿ ನವ್ಯ ನಟಸಿದ್ದರೆ, ಮೋಹನ್ ಈ ಚಿತ್ರದ ನಾಯಕನಟರಾಗಿದ್ದಾರೆ. ಚಿತ್ರದ ತಾರಾಬಳಗದಲ್ಲಿ ಹಿರಿಯ ನಟಿ ಗಿರಿಜಾ ಲೋಕೇಶ್ ಪ್ರಧಾನ ಪಾತ್ರದಲ್ಲಿದ್ದರೆ ದೊಡ್ಡಣ್ಣ, ಪದ್ಮಜಾ, ಸುಧಾ ಬೆಳವಾಡಿ ಹಾಘೂ ಹೊನ್ನವಳ್ಳಿ ಕೃಷ್ಣರಂಥ ನಟರ ದಂಡೇ ಇದೆ. ನವೆಂಬರ್ ತಿಂಗಳಲ್ಲಿ ತೆರೆಗೆ ಬರುವ ನಿರೀಕ್ಷೆಯಿದೆ.
ಪ್ರಸನ್ನ ಕುಮಾರ್ ಛಾಯಾಗ್ರಹಣವಿರುವ ಚಿತ್ರಕ್ಕೆ ಎಂ.ಸಂಜೀವ ಸಂಗೀತ ನಿರಧೇಶಕರಾಗಿ ದುಡಿದಿದ್ದು, ಸಾಹಿತ್ಯವನ್ನೂ ಅವರೇ ಬರೆದಿದ್ದಾರೆ. ಅಲ್ಟಿಮೇಟ್ ಶಿವು ಸಾಹಸ ಸಂಯೋಜನೆ ಮಾಡಿದ್ದು, ವಿ.ಕೃಷ್ಣ ಚಿತ್ರದ ನಿರ್ಧೇಶನದ ಜವಾಬ್ದಾರಿ ಹೊತ್ತಿದ್ದಾರೆ. ಸುಂದರ ಹಾಡಿನ ದೃಶ್ಯವನ್ನು ಮಂಗಳೂರಿನ ವಿವಿಧೆಡೆ ಚಿತ್ರೀಕರಿಸಲಾಗಿದ್ದು ಹಾಡುಗಳು ಅದ್ಧೂರಿಯಾಗಿ ಮೂಡಿಬರುವ ನಿರೀಕ್ಷೆಯಿದೆ.
`ಮೊದಲ ಚಿತ್ರ, ಖುಷಿಯಲ್ಲಿದ್ದೇನೆ’
-ನವ್ಯ, ಬಜ್ಪೆ
ಜಾಸ್ಮೀನ್.5 ಚಿತ್ರದ ಇನ್ನೊಂದು ವಿಶೇಷ ಏನೆಂದರೆ ಕನ್ನಡ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿರುವ ನವ್ಯ ಅಪ್ಪಟ ತುಳುನಾಡಿನ ಚೆಲುವೆ. ಮೂಲತ: ಬಜ್ಪೆ ಸಮೀಪದ ಮುರನಗರ ನಿವಾಸಿಯಾಗಿರುವ ಈಕೆ ಬೆಂಗಳೂರಿನಲ್ಲೇ ವ್ಯಾಸಂಗ ಮಾಡುತ್ತಿದ್ದಾರೆ. ಚಿತ್ರೀಕರಣ ಸಂದರ್ಭ ಮಾತಿಗೆ ಸಿಕ್ಕ ನವ್ಯಾ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.
`ನಾನು ಮೊದಲ ಬಾರಿ ಕೆಮರಾ ಎದುರಿಸುತ್ತಿದ್ದೇನೆ, ಇದು ನನ್ನ ಮೊದಲ ಚಿತ್ರ. ಉತ್ತಮ ಸಂದೇಶ ಚಿತ್ರದಲ್ಲಿರುವ ಕಾರಣ ಚಿತ್ರವನ್ನು ಒಪ್ಪಿಕೊಂಡಿದ್ದೇನೆ, ಖುಷಿಯಾಗುತ್ತಿದೆ’ ಎಂದರು



