ಮುಂಬಯಿ,  ಕ್ರಿಸ್ಮಸ್ ಮತ್ತು ನೂತನ ವರ್ಷಾಚರಣಾ ಸಲುವಾಗಿ ರೈಲು ಪ್ರಾಯಾಣಿಕರ ಅನುಕೂಲತೆಗೆ ಕೊಂಕಣ ರೈಲು ಮಾರ್ಗದಲ್ಲಿ ಅಹ್ಮದಾಬಾದ್-ಮಂಗಳೂರು ಮತ್ತು ಮುಂಬಯಿ ಸೆಂಟ್ರಲ್
ಮಂಗಳೂರು ವಿಶೇಷ ರೈಲು ಸೇವೆಗೆ ಬೋರಿವಿಲಿ ಲೋಕಸಭಾ ಕ್ಷೇತ್ರದಸಂಸದ ಗೋಪಾಲ ಸಿ.ಶೆಟ್ಟಿ ಅವರು ಹಸಿರು ನಿಶಾನೆತೋರಿಸಿ ಶುಭಕೋರಿದರು.ಈ ಬಾರಿ ಪ್ರಯಾಣಿಕರ ಅನುಕೂಲತೆಗಾಗಿ ಪಶ್ಚಿಮ ರೈಲ್ವೇ ವಿಭಾಗವು ಮುಂಬಯಿ ಸೆಂಟ್ರಲ್-ಮಂಗಳೂರು ಹಾಗೂ ಅಹ್ಮದಾಬಾದ್-ಮಂಗಳೂರು ಸೇವೆಯಾಗಿಸಿ ವಿಶೇಷ ರೈಲು ಸೇವೆ ಒದಗಿಸಿದ್ದುಕಳೆದ ಗುರುವಾರ ರಾತ್ರಿ 12.02 ಗಂಟೆಗೆ ಬೋರಿವಿಲಿ ರೈಲುನಿಲ್ದಾಣಕ್ಕಾಗಮಿಸಿದ ಮುಂಬಯಿ ಸೆಂಟ್ರಲ್-ಮಂಗಳೂರು- ಮುಂಬಯಿ ಸೆಂಟ್ರಲ್ ರೈಲಿನ ಪ್ರಯಾಣಿಕರ ರೈಲುಯಾನಕ್ಕೆ ಶುಭಕೋರಿ ಈ ಪ್ರಯಾಣಕ್ಕೆ ಅನುವು
ಮಾಡಿಕೊಟ್ಟ ರೈಲ್ವೇ ಸಚಿವ ಸುರೇಶ್ ಪ್ರಭು ಮತ್ತು ಪಶ್ಚಿಮ ರೈಲ್ವೇಗೆ ಅಭಿವಂದಿಸಿದರು.

Christmas Special Train-2 Christmas Special Train-D1 (1) Christmas Special Train-D1 Christmas Special Train-D2 Christmas Special Train-D3 Christmas Special Train-D4ಈ ಸಂದರ್ಭದಲ್ಲಿ ರೈಲ್ವೇ ಯಾತ್ರಿ ಸಂಘ ಬೊರಿವಲಿ ಮುಂಬಯಿ (ಪಶ್ಚಿಮ ವಲಯ) ಇದರ ಗೌರವಾಧ್ಯಕ್ಷ
ವಿರಾರ್ ಶಂಕರ್ ಶೆಟ್ಟಿ, ಅಧ್ಯಕ್ಷ ಶಿಮಂತೂರು ಉದಯ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಶ್ರೀಮತಿ ಶೀಲಾ ಶೆಟ್ಟಿ ಉಪಾಧ್ಯಕ್ಷ ಪ್ರೇಮನಾಥ ಕೋಟ್ಯಾನ್, ಜೊತೆ ಕಾರ್ಯದರ್ಶಿ ರಜಿತ್ ಸುವರ್ಣ ಮತ್ತಿತರ ಪದಾಧಿಕಾರಿಗಳು
ಹಾಗೂ ಮೋಹನ್ ಅಮೀನ್, ಕರುಣಾಕರ ಪೂಜಾರಿ, ಶಿವರಾಮ ಸಾಲ್ಯಾನ್, ಸದಾಶಿವ ಕರ್ಕೇರ, ಪೇರೆಮನೆ ಪ್ರಕಾಶ್ ಶೆಟ್ಟಿ, ಪ್ರತೀಕ್ ಕರ್ಕೇರ, ಯಶವಂತ ಪೂಜಾರಿ ಪಾಲಿಮಾರು, ದಿಪೇಶ್ ಕೋಟ್ಯಾನ್ ಉಪಸ್ಥಿತರಿದ್ದು, ಉಪನಗರ ಪಶ್ಚಿಮ ರೈಲ್ವೇಯ ಯಾತ್ರಿಗಳ ಅನುಕೂಲಕ್ಕಾಗಿ ವಸಾಯಿ ರೋಡ್ ಜಂಕ್ಷನ್ ರೈಲ್ವೇ ಸ್ಟೇಶನ್‍ನಿಂದ
ಈ ರೈಲು ಸೇವೆ ಕೊಂಕಣ ಮಾರ್ಗವಾಗಿ ಆರಂಭಿಸಲಾದ ಈ ವಿಶೇಷ ರೈಲು ಸೇವೆಯನ್ನು ಖಾಯಂಗೊಳಿಸುವಂತೆರೈಲ್ವೇ ಪ್ರಾಧೀಕಾರ ಮತ್ತು ಸಚಿವರನ್ನು ಒತ್ತಾಯಿಸಿದ್ದಾರೆ. ಇದೀಗಲೇ ಈ ಪ್ರಯಾಣ ಆರಂಭಗೊಂಡಿದ್ದು ಅಹ್ಮದಾಬಾದ್-ಮಂಗಳೂರು ಮತ್ತೆ ಡಿ.31ರ ಗುರುವಾರ ಸಂಜೆ 4.30 ಗಂಟೆಗೆ ಅಹ್ಮದಾಬಾದ್‍ನಿಂದ ಹೊರಡಲಿದೆ. ಅಂದು ಮಧ್ಯರಾತ್ರಿ 12.40 ಗಂಟೆಗೆ ವಸಾಯಿ,
ಶುಕ್ರವಾರ ಮುಂಜಾನೆ 2.30 ಗಂಟೆಗೆ ಪನ್ವೇಲ್, ಸಂಜೆ 4.20 ಗಂಟೆಗೆ ಉಡುಪಿ ತಲುಪಿ 6.15 ಗಂಟೆಗೆ ಮಂಗಳೂರು ಸೇರಲಿದೆ. ಅಂತೆಯೇ ಡಿ.25 ಮತ್ತು ಜ.01ರ ಶುಕ್ರವಾರ ಎರಡು ದಿನಗಳಲ್ಲಿ ರಾತ್ರಿ 9.30
ಗಂಟೆಗೆ ಮಂಗಳೂರುನಿಂದ ಮೊದಲ್ಗೊಂಡು 10.34 ಗಂಟೆಗೆ ಉಡುಪಿ, ಮಾರನೇ ದಿನ 3.15 ಗಂಟೆಗೆ ಪನ್ವೇಲ್, 4.10 ಗಂಟೆಗೆ ವಸಾಯಿ ಮಾರ್ಗವಾಗಿ ತಡರಾತ್ರಿ 12.20 ಗಂಟೆಗೆ ಅಹ್ಮದಾಬಾದ್ ಸೇರಲಿದೆ.
ಮುಂಬಯಿ ಸೆಂಟ್ರಲ್-ಮಂಗಳೂರು ರೈಲು ಸೇವೆಯ ಎರಡನೇ ಯಾನವು ಡಿ.30ರ ಬುಧವಾರ ದಿನರಾತ್ರಿ 11.15 ಗಂಟೆಗೆ ಮುಂಬಯಿ ಸೆಂಟ್ರಲ್ ನಿಂದ ಪ್ರಯಾಣ ಆರಂಭಿಸಲಿದೆ. ಮಧ್ಯರಾತ್ರಿ 12.02 ಗಂಟೆಗೆ
ಬೋರಿವಿಲಿ,12.30 ಗಂಟೆಗೆ ವಸಾಯಿ, ಗುರುವಾರ ಮುಂಜಾನೆ 2.30 ಗಂಟೆಗೆ ಪನ್ವೇಲ್, ಸಂಜೆ 5.40ಗಂಟೆಗೆ ಉಡುಪಿ ತಲುಪಿ 7.15 ಗಂಟೆಗೆ ಮಂಗಳೂರು ಸೇರಲಿದೆ. ಇದೇ ರೈಲು ಡಿ.31ರ ಗುರುವಾರ ರಾತ್ರಿ
10.30 ಗಂಟೆಗೆ ಮಂಗಳೂರುನಲ್ಲಿ ಪ್ರಯಾಣ ಬೆಳೆಸಿ 11.40 ಗಂಟೆಗೆ ಉಡುಪಿ, ಮಾರನೇ ದಿನ (ಶುಕ್ರವಾರ)1.40 ಗಂಟೆಗೆ ಪನ್ವೇಲ್, 5.40 ಗಂಟೆಗೆ ವಸಾಯಿ ಮಾರ್ಗವಾಗಿ ಸಂಜೆ6.20 ಗಂಟೆಗೆ ಬೋರಿವಿಲಿ ಮೂಲಕ 7.25 ಗಂಟೆಗೆ ಮುಂಬಯಿ ಸೆಂಟ್ರಲ್ ತಲುಪಿ ಎರಡನೇ ಪ್ರಯಾಣ ನಡೆಸಲಿದೆ.

By suddi9

Leave a Reply

Your email address will not be published. Required fields are marked *