ಹೊಸದಿಲ್ಲಿ: ವಾಸ್ತುಶಿಲ್ಪಿ ಮಹಿಳೆಯ ಮೇಲೆ ನರೇಂದ್ರ ಮೋದಿ ನೇತೃತ್ವದ ಗುಜರಾತ್ ಸರಕಾರ ನಡೆಸಿದೆ ಎನ್ನಲಾದ ರಹಸ್ಯ ಕಣ್ಗಾವಲು ಪ್ರಕರಣದ ತನಿಖೆ ನಡೆಸಲು ನಮಗೆ ಆಸಕ್ತಿ ಇಲ್ಲ ಎಂದು ಕೇಂದ್ರ ಸರಕಾರ, ಸುಪ್ರೀಂ ಕೋರ್ಟ್‌ಗೆ ಶುಕ್ರವಾರ ಹೇಳಿದೆ.

ಮಹಿಳೆ ವಾಸ್ತುಶಿಲ್ಪಿ ಸಲ್ಲಿಸಿದ ಮನವಿ ವಿಚಾರಣೆ ಸಂದರ್ಭದಲ್ಲಿ ಸಾಲಿಸಿಟರ್ ಜನರಲ್ ಕೋರ್ಟ್‌ನಲ್ಲಿ ಈ ಹೇಳಿಕೆ ನೀಡಿದ್ದಾರೆ.

ಕೇಂದ್ರ ಮತ್ತು ಗುಜರಾತ್ ಸರಕಾರಗಳು ಈ ಪ್ರಕರಣದ ಸಂಬಂಧ ವಿಚಾರಣಾ ಆಯೋಗಗಳನ್ನು ರಚಿಸುವ ವಿರುದ್ಧ ಅವರು ಕೋರ್ಟ್‌ ಮೊರೆ ಹೋಗಿದ್ದರು. ಅಪ್ಪ ಮತ್ತು ಮಗಳು, ತಮ್ಮ ಕುಟುಂಬದ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ ಎಂದು ನ್ಯಾಯಾಲಯದ ಮೊರೆಹೋದ ಬಳಿಕ ಕೇಂದ್ರ ಸರಕಾರ ಆಯೋಗ ರಚನೆ ವಿಚಾರ ಕೈಬಿಟ್ಟಿದ್ದರೂ ಗುಜರಾತ್‌ ಸರಕಾರ ಬಿಟ್ಟಿಲ್ಲ. ಈ ಹಿನ್ನೆಲೆಯಲ್ಲಿ ಗುಜರಾತ್ ಆಯೋಗದ ವಿರುದ್ಧವೂ ಅವರಿಬ್ಬರೂ ಹೋರಾಟ ಮುಂದುವರಿಸಲಿದ್ದಾರೆ.

By suddi9

Leave a Reply

Your email address will not be published. Required fields are marked *