ನವದೆಹಲಿ: ಮೋದಿ ಪ್ರಧಾನಿಯಾಗಬಾರದೆಂದು ದೇಶದ ಅನೇಕ ಪಕ್ಷಗಳು ನಾನಾ ರೀತಿಯ ಕಸರತ್ತಿನಲ್ಲಿ ತೊಡಗಿವೆ. ಅಮೇರಿಕಾ, ಚೀನಾ,ಪಾಕಿಸ್ತಾನ, ಬಾಂಗ್ಲಾ ದೇಶಗಳೂ ಸಹ ಮೋದಿ ಪ್ರಧಾನಿಯಾಗಬಾರದೆಂದು ಬಯಸುತ್ತದೆ. ಆದರೆ ನೀವು ನಂಬ್ತೀರೋ ಬಿಡ್ತೀರೋ ಮೋದಿ ಪ್ರಧಾನಿಯಾಗಬೇಕು ಎಂದು ಸ್ವತಃ ಪಾಕಿಸ್ತಾನವೇ ಬಯಸುತ್ತದೆಯಂತೆ…!

ಹೌದು.. ಮೋದಿ ಭಾರತದ ಪ್ರಧಾನಿಯಾಗಬೇಕು.. ಅದು ನಮ್ಮ ಆಶಯ ಕೂಡ. ಹೀಗಂತ ಹೇಳಿದ್ದು ಪಾಕಿಸ್ತಾನದ ಹಿರಿಯ ರಾಜಕೀಯ ಮುತ್ಸದ್ದಿ ಹಾಗೂ ಪಾಕಿಸ್ತಾನದ ಹಂಗಾಮಿ ವಿದೇಶಾಂಗ ಸಚಿವ, ಸರ್ತಾಜ್ ಅಜೀಜ್..
ಅವರ ಪ್ನರಕಾರ ನರೇಂದ್ರ ಮೋದಿ ಭಾರತದ ಪ್ರಧಾನಿ ಆಗುವುದನ್ನೇ ಕಾಯ್ತಾ ಇದ್ದೇವೆ. ಮೋದಿ ವಾಜಪೇಯಿಯಂತೆ ಮುತ್ಸದ್ಧಿ. ಭಾಋತ ಮತ್ತು ಪಾಕಿಸ್ತಾನದ ಮಧ್ಯೆ ಇರುವ ಸಮಸ್ಯೆಯನ್ನು ಅವರು ಖಂಡಿತಾ ಬೆಹರಿಸ್ತಾರೆ. ಮುಖ್ಯವಾಗಿ ಉಭಯ ದೇಶಗಳ ಮಧ್ಯೆ ಇರುವ ಆಂತರಿಕ ಸಮರ ಬಗೆದು ರಕ್ತ ಹರಿಯುವುದು ನಿಲ್ಲುತ್ತದೆ. ನಾವು ಮೋದಿ ಪ್ರಧಾನಿಯಾಗುವುದನ್ನೇ ಕಾಯ್ತಾ ಇದ್ದೇವೆ ಎಂದು ಹೇಳಿದ್ದಾರೆನ್ನಲಾಗಿದೆ.
ದಿ ಟೆಲಿಗ್ರಾಫ್ಗೆ ನೀಡಿದ ಸಂರ್ದಶನದಲ್ಲಿ ಸರ್ತಾಜ್ ಈ ರೀತಿ ಅಭಿಪ್ರಾಯಪಟ್ಟಿದ್ದಾರೆ. ಅವರೊಂದಿಗೆ ಸಕಾರಾತ್ಮಕವಾಗಿ ಸ್ಪಂದಿಸುವುದಾಗಿ ಸರ್ತಾಜ್ ಅಜೀಜ್ ಹೇಳಿದ್ದಾರೆ.
ಮನಮೋಹನ ಅಲ್ಲ; ಮೌನಮೋಹನ: ಇಷ್ಟೇ ಅಲ್ಲ, ಮನಮೋಹನ್ ಸಿಂಗ್ ದುಬರ್ಲ ಪ್ರಧಾನಿ. ಭಾರತ ಮತ್ತು ಪಾಕಿಸ್ತಾನ ಮಧ್ಯೆ ನಾಲ್ಕುಬಾರಿ ಯುದ್ಧವಾಗಿದೆ. ಇದಕ್ಕೆ ಕಾರಣ ಭಾರತ ಮತ್ತು ಪಾಕಿಸ್ಥಾನದ ನಡುವಿನ ಸಮಸ್ಯೆಗಳು. ಆ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಪ್ರಧಾನಿ ಸಿಂಗ್ ಒಲವು ತೋರಿಲ್ಲ. ಕಳೆದ ಸೆಪ್ಟಂಬರ್ನಲ್ಲಿ ಪಾಕ್ ಪ್ರಧಾನಿ ನವಾಜ್ ಷರೀಫ್ ‘ಭಾರತ ಮತ್ತು ಪಾಕಿಸ್ತಾನದ ಸಮಸ್ಯೆಗಳ ಕುರಿತು, ಗಂಭೀರವಾಗಿ ಚರ್ಚಿಸೋಣ ಅಂತ ಕರೆ ನೀಡಿದ್ರು. ಆದ್ರೆ ಸಿಂಗ್ ಅದನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಸಿಂಗ್ಗೆ ಭಾರತ ಮತ್ತು ಪಾಕ್ ಸಂಬಂಧವನ್ನು ಉತ್ತಮಗೊಳಿಸುವ ಇರಾದೆಯೇ ಇಲ್ಲ. ಆದ್ರೆ, ಮೋದಿ ನಾಯಕತ್ವದಲ್ಲಿ, ಈ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗಲಿದೆ ಅಂತ ಸರ್ತಾಜ್ ಅಜೀಜ್ ಆಶಾವಾದ ವ್ಯಕ್ತಪಡಿಸಿದ್ದಾರೆ..
ಮೋದಿ ನಾಯಕತ್ವದಲ್ಲಿ, ಭಾರತ ಮತ್ತು ಪಾಕ್ ನಡುವಿನ ಗಡಿ ವಿವಾದ ಅಂತ್ಯಗೊಳ್ಳುವ ಸಾಧ್ಯತೆ ಇದೆ. ಅಲ್ಲದೇ ಜಮ್ಮು ಮತ್ತು ಕಾಶ್ಮೀರದ ಸಮಸ್ಯೆಯೂ ಬಗೆಹರಿಯುವ ನಿಟ್ಟಿನಲ್ಲಿ ಮಾತುಕತೆ ನಡೆಸಲಾಗುವುದು. ಪಾಕ್ ಕೂಡಾ ಸಮಸ್ಯೆ ಬಗೆಹರಿಸಿಕೊಳ್ಳುವಲ್ಲಿ ಉತ್ಸುಕತೆ ತೋರುತ್ತಿದೆ ಅಂತ ಹೇಳಿದ್ರು. ಒಟ್ನಲ್ಲಿ, ಮೋದಿ ಪ್ರಧಾನಿಯಾಗೋದನ್ನ ಪಾಕಿಸ್ತಾನ ಕೂಡ ಇಷ್ಟಪಡ್ತಿದೆ. ಇದು ಮೋದಿಯ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ.

