ಘನ್ಸೋಲಿ ಮುಕಾಂಬಿಕಾ ದೇವಾಲಯದ ಧರ್ಮದರ್ಶಿ, ಅಣ್ಣಿ ಶೆಟ್ಟಿ ಯವರು ಇಂದಿನ ಮಕ್ಕಳಿಗೆ ತಾಯಿನಾಡಿನಸಂಸ್ಕೃತಿಯ ಅರಿವು ಆಗಬೇಕಾಗಿದೆ. ಇಂತಹ ಸಂಘಟನೆಗಳಿಂದ ಸಂಸ್ಕೃತಿ, ಸಂಸ್ಕಾರಗಳ ಅರಿವು ಆಗುತ್ತದೆ.ಅದಕ್ಕಾಗಿ ಇಂತಹ ಕಾರ್ಯಕ್ರಮದಲ್ಲಿ ತಮ್ಮ ಮಕ್ಕಳನ್ನು ಬಾಗಿಯಾಗುವಂತೆ ತಂದೆ ತಾಯಂದಿರು ಪ್ರೋತ್ಸಾಹಿಸಬೇಕು. ಇಲ್ಲಿ ಇಂದು ಕಿಕ್ಕಿರಿದು ಸೇರಿದ ಜನಸಂಖ್ಯೆಯು ಈ ಸಂಘಟನೆಯ ಮೇಲಿನ ಅಭಿಮಾನವನ್ನು ಪ್ರತಿಬಿಂಭಿಸುತ್ತಿದ್ದು ತುಳುಕೂಟ ಐರೋಲಿಯ ಮುಂದಿನ ಯೋಜನೆಗಳು ಯಶಸ್ವಿಯಾಗಲಿ ಎಂದರು.
ತುಳುಕೂಟದ ಉಪಾಧ್ಯಕ್ಷ ಹಾಗೂ ನೂತನ ಅಧ್ಯಕ್ಷ ಹರೀಶ್ ಶೆಟ್ಟಿ, ಪಡುಬಿದ್ರಿ ಎಲ್ಲರನ್ನು ಸ್ವಾಗತಿಸಿದರು.ನೂತನ ವಿದ್ಯಾನಿಧಿ ಯೋಜನೆಯಾದ ’ನಿಧಿ ಕುಂಭ’ ವನ್ನು ಅತಿಥಿಗಳು ಬಿಡುಗಡೆಗೊಳಿಸಿದರು. ಪ್ರಕಾಶ್ ಆಳ್ವಅವರು ಯೋಜನೆ ಬಗ್ಗೆ ಮಾಹಿತಿಯಿತ್ತರು.
ವೇದಿಕೆಯಲ್ಲಿ ಇತರ ಅತಿಥಿಗಳಾದ ಉದ್ಯಮಿ ಪೂರ್ಣೇಶ್ ಶೆಟ್ಟಿ, ಸ್ಥಳೀಯ ರಾಜಕಾರಿಣಿ ವಿಜಯ ಚೌಗುಲೆ,ತುಳುಕೂಟದ ಕಾರ್ಯದರ್ಶಿ ಕಳತ್ತೂರು ಅಮರ್ ನಾಥ್ ಶೆಟ್ಟಿ, ಕೋಶಾಧಿಕಾರಿ ರಮೇಶ್ ದೇವಾಡಿಗ, ಉಪಾದ್ಯಕ್ಷಪಡುಬಿದ್ರಿ, ವಿಜಯ್ ಕೆ. ಶೆಟ್ಟಿ, ವಾರ್ಷಿಕೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಲ. ಸತೀಶ್ ಕೆ. ಶೆಟ್ಟಿ ಮೊದಲಾದವರುಉಪಸ್ಥಿತರಿದ್ದರು.
ದಿನಪೂರ್ತಿ ನಡೆದ ವಿವಿಧ ಮನೋರಂಜನಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿಮಂಗಳೂರು ಮತ್ತು ಮುಂಬಯಿಯ ಖ್ಯಾತ ಕಲಾವಿದರು ಬಾಗವಹಿಸಿದ್ದರು. ಹರೀಶ್ ಶೆಟ್ಟಿ, ಪಡುಬಿದ್ರಿ, ರಚಿಸಿನಿರ್ದೇಶಿಸಿದ ಕಿರು ಪ್ರಹಸನ, ಗಂಗಾಧರ ಬಂಗೇರ ಬರೆದು ನಿರ್ದೇಶಿಸಿದ ಕಿರುನಾಟಕ “ಕಥೆ ಬೇತೆನೆ”, ಪ್ರಸಾದ್ಸಾಲ್ಯಾನ್ ಬರೆದು ನಿರ್ದೇಶಿಸಿದ ಕಿರು ನಾಟಕ “ಭೂತಾಳ ಪಾಂಡ್ಯ”, ಹಾಗೂ ಸದಸ್ಯರ ಹಾಗೂ ಮಕ್ಕಳಿಂದ ವಿವಿಧಸಾಂಸ್ಕೃತಿಕ ವೈಭವ, ರಂಗಭೂಮಿ ಫೈನ್ ಆರ್ಟ್ಸ್ ಕಲಾವಿದರಿಂದ ನೃತ್ಯ, ಕುಕ್ಕೂಂದೂರು ಚಂದ್ರಶೇಖರಶೆಟ್ಟಿಯರವ ಸಾರಥ್ಯದಲ್ಲಿ ನೆಟ್ಟಾರ್ ಟಿ. ವಿ. ಗಿರಿ ಮತ್ತು ಚಂದ್ರಹಾಸ ರೈ ಪುತ್ತೂರು ಇವರಿಂದ ರಸಮಂಜರಿ ಹಾಗೂಮಿಮಿಕ್ರಿ ನಡೆಯಿತು. ಕಾರ್ಯಕ್ರಮವನ್ನು ಬಾಲಕೃಷ್ಣ ಶೆಟ್ಟಿ ಕಟೀಲು, ಗಂಗಾಧರ ಬಂಗೇರ ಬಂಟ್ವಾಳ ನಿರೂಪಿಸಿದರು.



