ಮುಂಬಯಿ, ಡಿ.14: ರಾಯನ್ ಅಂತರಾಷ್ಟ್ರೀಯ ಶೈಕ್ಷಣಿಕ ಸಮೂಹದ ಮತ್ತೊಮ್ಮೆ ಹಬ್ಬಾಚರಣೆಯ ವಾತಾವರಣ ಸೃಷ್ಟಿಯಾಗಿದೆ. ಕಾರಣ, ಸಮೂಹ ಸಂಸ್ಥೆಯ ಎಲ್ಲಾ 12 ಶಾಲೆಗಳು ಇದೀಗ ಶಿಕ್ಷಣದಲ್ಲಿ ಗಳಿಸಿದ ಶ್ರೇಷ್ಟತೆಗಾಗಿ ಪುರಸ್ಕಾರಗಳನ್ನು ಬಾಚಿಕೊಂಡಿವೆ. ಎಜ್ಯುಕೇಷನ್ ಟುಡೇ ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿ ಈ ಪ್ರಶಸ್ತಿಗಳ ಪಟ್ಟಿ ಪ್ರಕಟಿಸಿದ್ದು, ಅಂತರಾಷ್ಟ್ರೀಯ, ಸಿಬಿಎಸ್ಸಿ ಮತ್ತು ಐಸಿಎಸ್ಸಿ ವಿಭಾಗಗಳಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ ರಾಯಾನ್ ಸಮೂಹ ಸಂಸ್ಥೆಯ ಶಾಲೆಗಳು ಅತ್ಯುತ್ತಮ ಶಾಲೆಗಳು ಎಂಬ ಶ್ರೇಯಾಂಕವನ್ನು ಗಳಿಸಿಕೊಂಡಿವೆ. ಇವುಗಳಲ್ಲಿ ಬೆಂಗಳೂರು ಅಲ್ಲಿನ ಕುಂದನಹಳ್ಳಿ ಮತ್ತು ಬನ್ನೇರುಘಟ್ಟ ಅಂತರಾಷ್ಟ್ರೀಯ ಶಾಲೆಗಳು ಮೇಲ್ದಜರ್ೆ ಶ್ರೇಯಾಂಕದಲ್ಲಿವೆ. ದೇಶದಾದ್ಯಂತದ ಹಲವು ರಾಯಾನ್ ಶಾಲೆಗಳು ಪಠ್ಯೇತರ ಚಟುವಟಿಕೆಗಳು, ಕ್ರೀಡೆ, ಹಣದ ಮೌಲ್ಯ ಶೈಕ್ಷಣಿಕ ಕ್ಷೇತ್ರ ಇತ್ಯಾದಿ ಸೇರಿದಂತೆ ವಿವಿಧ ನಿಯತಾಂಕಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ರಾಯಾನ್ ಶಾಲೆಗಳು ಉನ್ನತ ಶ್ರೇಣಿಯನ್ನು ಗಳಿಸಿವೆ ಎಂದು ರಾಯನ್’ಸ್ ಅಂತರಾಷ್ಟ್ರೀಯ ಶೈಕ್ಷಣಿಕ ಸಮೂಹದ ವ್ಯವಸ್ಥಾಪಕ ನಿರ್ದೇಶಕಿ, ಅಚ್ಚ ತುಳು ಕನ್ನಡದ ಮಹಾನ್ ಸಾಧಕಿ ಮೇಡಂ ಗ್ರೇಸ್ ಪಿಂಟೋ ಹರ್ಷ ವ್ಯಕ್ತ ಪಡಿಸಿದ್ದಾರೆ.

Ryan Schools Award

ಕಳೆದ ಡಿ.12 ರಂದು ಬೆಂಗಳೂರು ಅಲ್ಲಿನ ಚಾನ್ಸೆರಿ ಪೆವಿಲಿಯನ್ ಹಾಲ್ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಯಾನ್ ಅಂತರಾಷ್ಟ್ರೀಯ ಸಂಸ್ಥೆಗಳ ನಿದರ್ೇಶಕ ಸ್ನೇಹಲ್ ಪಿಂಟೋ ಸ್ವೀಕರಿಸಿದ್ದಾರೆ.

ಕಳೆದ ಮೂರು ದಶಕಗಳಿಂದ ರಿಯಾನ್ ಸಮೂಹ ಸಂಸ್ಥೆಯ ಶಾಲೆಗಳು ಶೈಕ್ಷಣಿಕ ಘನತೆ, ವ್ಯಯುಕ್ತಿಕ ಗಮನ, ಮೂಲಭೂತ ಸೌಕರ್ಯ, ನವೀನ ಮಾದರಿಯ ಭೋಧನೆ, ಕ್ರೀಡೆ, ನಾಯಕತ್ವ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಚಟುವಟಿಕೆಗಳು ಮತ್ತಿತರ ವಲಯಗಳಲ್ಲಿ ಪ್ರಶಸ್ತಿಗಳನ್ನು ಬಾಚಿಕೊಂಡೇ ಬಂದಿವೆ. ಈ ಪ್ರಶಸ್ತಿಗಳು ರಾಯಾನ್ ಸಮೂಹ ಸಂಸ್ಥೆಗಳು ನೀಡುತ್ತಿರುವ ಶಿಕ್ಷಣದ ಗುಣಮಟ್ಟಕ್ಕೆ ಉತ್ತರ ನೀಡುತ್ತವೆ.

ಈ ಅಭೂತಪೂರ್ವ ಸಾಧನೆಗೆ ರಾಯಾನ್ ಸಂಸ್ಥೆಗಳ ವ್ಯವಸ್ಥಾಪಕ ನಿದರ್ೇಶಕಿ ಮೇಡಂ ಗ್ರೇಸ್ ಪಿಂಟೋ ಅತೀವ ಸಂತಸವನ್ನು ವ್ಯಕ್ತಪಡಿಸಿ “ದೇವರ ಅನುಗ್ರಹಕ್ಕೆ ನಾವು ಕೃತಜ್ಞರಾಗಿದ್ದೇವೆ. ಸಂಸ್ಥೆಗೆ ಈ ದೃಷ್ಟಿಕೋನವನ್ನು ನೀಡಿದ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ| ಆಗಸ್ಟಿನ್ ಎಫ್.ಪಿಂಟೋ ಅವರಿಗೆ ಅಭಾರಿ ಆಗಿದ್ದೇವೆ. ಈ ಪ್ರಶಸ್ತಿಗಳ ಹಿಂದೆ ನಮ್ಮ ಸಿಬ್ಬಂದಿಗಳು ಮತ್ತು ಪಾಲು ಬಂಡವಾಳದಾರರ ಪ್ರಯತ್ನಗಳು ಸಾಕಷ್ಟಿದೆ. ನಮ್ಮ ಸಲಹಾಗಾರರು, ಸಲಹಾ ಸಮಿತಿಯ ಸದಸ್ಯರು, ರಾಯಾನ್’ಸ್ ಪೋಷಕರು ಮತ್ತು ಹಿತೈಷಿಗಳಿಗೆ ಈ ಪ್ರಶಸ್ತಿಯ ಗೌರವ ಸಲ್ಲುತ್ತದೆ” ಎಂದು ಗೌರವಪೂರ್ಣವಾಗಿ ನುಡಿದಿದ್ದಾರೆ.

ಹೊಸ ಗುಣಮಟ್ಟದ ಶಿಕ್ಷಣ ಪದ್ಧತಿಯ ಅಸ್ಥಿತ್ವದೊಂದಿಗೆ ರಾಯಾನ್ ಸಂಸ್ಥೆಗಳ ಪಯಣ ಸುಮಾರು ಮೂರು ದಶಕಗಳು ಹಿಂದಿನದ್ದು. ಅದು ರಾಯಾನ್ ನಾಯಕತ್ವದ ಟ್ರಸ್ಟ್ನಲ್ಲಿ ಸ್ಥಾನ ಪಡೆದು ಕೊಂಡಿರುವ ಪೋಷಕರಿಂದ ಗೌರವಿಸಲ್ಪಟ್ಟಿದೆ ಹಾಗೂ ಅವರ ಜವಾಬ್ಧಾರಿಯುತ ಕ್ಷೇತ್ರಗಳಲ್ಲಿ ನಂಬಿಕೆ ಗಳಿಸಿ ಕೊಂಡಿದೆ. ರಾಯಾನ್ ಸಮೂಹ ಸಂಸ್ಥೆ ದೇಶಾದ್ಯಂತ ಮಕ್ಕಳಿಗೆ ಸಮಾನ, ಅರ್ಥಪೂರ್ಣ ಶಿಕ್ಷಣ ಒದಗಿಸುವ ಉದಾತ್ತ ಪ್ರಯತ್ನವನ್ನು ಹೀಗೆಯೇ ಮುಂದುವರಿಸುತ್ತದೆ ಎಂದು ಸಂಸ್ಥೆ ಭರವಸೆ ನೀಡಿದೆ ಎಂದೂ ಮೇಡಂ ಪಿಂಟೋ ಆಶಯ ವ್ಯಕ್ತ ಪಡಿಸಿದ್ದಾರೆ.

By suddi9

Leave a Reply

Your email address will not be published. Required fields are marked *